Kalki 2898 AD worldwide box office collection: ಸಿನಿಪ್ರಿಯರ ಬಹು ನಿರೀಕ್ಷಿತ ಸಿನಿಮಾ “ಕಲ್ಕಿ 2898 ಎಡಿ” ತೆರೆಕಂಡು ಬಾಕ್ಸ್ ಆಫೀಸ್ ನ ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡುತ್ತಿದೆ. ಇದುವರೆಗೂ ಈ ಸಿನಿಮಾ ವಿಶ್ವದ ನಾನಾ ಕಡೆಗಳಲ್ಲಿ ಒಟ್ಟು 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವು ಪ್ರಕಟಿಸಿದೆ.
ನಾಗ್ ಅಶ್ವಿನ್ ನಿರ್ದೇಶನದಲ್ಲಿ ನಟ ಪ್ರಭಾಸ್ ಮತ್ತು ಅಮಿತಾ ಬಚ್ಚನ್ ನಟಯು ಪ್ರೇಕ್ಷಕರ ಮನ ಗೆದ್ದಿದೆ. ದೇಶದಲ್ಲಿಡೆ ಸಿನಿಮಾವು ಅದ್ಭುತ ಪ್ರದರ್ಶನ ಕಾಣುತ್ತಿದ್ದು ಚಿತ್ರತಂಡವು ಈ ಪೌರಾಣಿಕ ಮತ್ತು ವೈಜ್ಞಾನಿಕ ಚಿತ್ರವು 100 ಕೋಟಿ ಕ್ಲಬ್ ಸೇರಲಿದೆ ಎಂದು ಪೋಸ್ಟರ್ ಬಿಡುಗಡೆ ಮಾಡಿದೆ.
ಭಾರಿ ನಿರೀಕ್ಷೆಗಳ ನಡುವೆಯು “ಕಲ್ಕಿ 2898 ಎಡಿ”(Kalki Total Collection) ಜೂನ್ 27ರಂದು ಈ ಸಿನಿಮಾವು ಬಿಡುಗಡೆಯಾಯಿತು. ಸಿನಿಮಾವು ಪ್ರೇಕ್ಷಕರನ್ನು ಪೌರಾಣಿಕ ಮತ್ತು ವೈಜ್ಞಾನಿವಾಗಿ ಬೇರೆ ಲೋಕಕ್ಕೆ ಕರೆದೊಯ್ಯುವಂತಿದೆ. ದೇಶದ ಟಾಪ್ ನಟ ಅಮಿತಾ ಬಚ್ಚನ್ ಅಭಿನಯಿಸಿರುವ ಅಶ್ವತ್ಥಾಮ ಪಾತ್ರವು ಪೌರಾಣಿಕವಾಗಿ ನೋಡುಗರ ಮನಮುಟ್ಟುವಂತಿದೆ. ಕಮಲಹಾಸನ್, ದುಕರ್ ಸಲ್ಮಾನ್, ವಿಜಯ್ ದೇವರಕೊಂಡ, ಅತಿಥಿ ಪಾತ್ರದಲ್ಲಿ ಕನಿಸಿಕೊಳ್ಳುವ ಮೂಲಕ ಸಿನಿಮಾದಲ್ಲಿ ರಾರಾಜಿಸುತ್ತಿದ್ದಾರೆ.
ಮೊದಲ ದಿನ ಭರ್ಜರಿ 191 ಕೋಟಿ ರೂ. ಗಳಿಸಿದ ʼಕಲ್ಕಿʼ ಆ ಮೂಲಕ ಸ್ಯಾಂಡಲ್‌ವುಡ್‌ನ ʼಕೆಜಿಎಫ್ 2ʼ (159 ಕೋಟಿ ರೂ.), ʼಸಲಾರ್ʼ (158 ಕೋಟಿ ರೂ.), ʼಲಿಯೋʼ (142.75 ಕೋಟಿ ರೂ.), ʼಸಾಹೋʼ (130 ಕೋಟಿ ರೂ.) ಮತ್ತು ʼಜವಾನ್ʼ (129 ಕೋಟಿ ರೂ.) ದಾಖಲೆ ಮುರಿದೆ. ಅದಾಗ್ಯೂ 223 ಕೋಟಿ ರೂ. ಕಲೆಕ್ಷನ್ ಮಾಡಿದ ʼಆರ್‌ಆರ್‌ಆರ್ʼ ಮತ್ತು 217 ಕೋಟಿ ರೂ. ಗಳಿಸಿದ ʼಬಾಹುಬಲಿ 2ʼ ಈಗಲೂ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಮೊದಲೆರಡು ಸ್ಥಾನಗಳಲ್ಲಿ ಭದ್ರವಾಗಿವೆ.