ಗೋಲ್ಡನ್ ಸ್ಟಾರ್ ಗಣೇಶ್ ಗೆಲುವಿನ ನಗೆ ಬೀರಿದ್ದಾರೆ. ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನೂ ಕರೆತರುತ್ತಿದೆ. ಈ ಮೂಲಕ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾ.
Krishnam Pranaya Sakhi Collection?
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ದಿನವನ್ನೇ ಎನ್‌ಕ್ಯಾಶ್ ಮಾಡಿಕೊಂಡ ಈ ಸಿನಿಮಾ, ಲಾಂಗ್ ವೀಕೆಂಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಬಹುದು ಎಂದು ನಿರ್ಧರಿಸಿತ್ತು. ಅದರಂತೆ, ಸಿನಿಮಾ ಗುರುವಾರವೇ ರಾಜ್ಯಾದ್ಯಂತ ಬಿಡುಗಡೆಯಾಗಿ, ಮೆಚ್ಚುಗೆ ಪಡೆದುಕೊಂಡಿತು. ಅದಾದ ಬಳಿಕ ಮುಂದಿನ ಭಾನುವಾರವೂ ಸೇರಿ ಮೂರು ದಿನಗಳೂ ಹೌಸ್‌ಫುಲ್ ಪ್ರದರ್ಶನವನ್ನೇ ಮುಂದುವರಿಸಿದೆ ಈ ಸಿನಿಮಾ.
ಕೃಷ್ಣಂ ಪ್ರಣಯ ಸಖಿ ಗಳಿಸಿದ್ದು ಎಷ್ಟು..?
ಬುಧವಾರವೇ ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋಗಳು ಆರಂಭವಾಗಿದ್ದವು. ಆದರೆ ಸ್ಪೆಷಲ್ ಶೋಗಳಲ್ಲಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಗುರುವಾರ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡರು. ಮೊದಲ ದಿನ 1.30 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಕೃಷ್ಣ ಕೋಟ್ಯಾಧಿಪತಿ ಆಗಿದ್ದ. ಆದರೆ ಶುಕ್ರವಾರ ಹಾಗೂ ಶನಿವಾರ ಸಿನಿಮಾ ಟೇಕಾಫ್ ಆಗಿತ್ತು. ನಿಧಾನವಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡಿತ್ತು. ಲಾಂಗ್ ವೀಕೆಂಡ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಪ್ಲಸ್ ಆಗುತ್ತದೆ ಎನ್ನುವ ‘ಕೃಷ್ಣಂ ಪ್ರಣಯ ಸಖಿ’ ವಿಚಾರದಲ್ಲಿ ನಿಜವಾಗಿದೆ. ಸಿನಿಮಾ ಮೊದಲ 3 ದಿನಕ್ಕೆ ಅಂದಾಜು 4.50 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ.
ಶ್ರೀನಿವಾಸರಾಜು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಪ್ರಶಾಂತ್ ಜಿ ರುದ್ರಪ್ಪ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ನಿರ್ಮಾಣ ಮಾಡಿದ್ದಾರೆ. ಗಣೇಶ್ ಹಾಗೂ ಮಾಳವಿಕ ನಾಯರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶಿವಧ್ವಜ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಹಲವರು ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೃಷ್ಣಂ ಪ್ರಣಯ ಸಖಿಯು ಗಣೇಶ್ ಅಭಿನಯದ 41ನೇ ಚಿತ್ರವಾಗಿದ್ದು, ಗೆಲ್ಲುವ ಸೂಚನೆ ನೀಡಿದೆ.