ಅಫ್ಘಾನಿಸ್ತಾನದ ಕನಸು ನುಚ್ಚುನೂರು; ಫೈನಲ್‌ ಪ್ರವೇಶಿಸಿದ ದಕ್ಷಿಣ ಆಫ್ರಿಕಾ!

By Aishwarya

Published On:

Follow Us

T20 WC Afghanistan: ಟಿ20 ವಿಶ್ವಕಪ್ ನ ಸೆಮಿ ಫೈನಲ್ 1ರಲ್ಲಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕವು 56 ರನ್ ಗಳಗೆ ಆಲ್ ಓಟ್ ಮಾಡುವ ಮೂಲಕ ಅಫ್ಘಾನಿಸ್ತಾನದ ಫೈನಾನ್ಸ್ ಕನಸನ್ನು ನುಚ್ಚು ನೂರು ಮಾಡಿದೆ.

ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಉತ್ತಮ ಬೋಲಿಂಗ್ ಪ್ರದರ್ಶನ ತೋರಿಸಿದ ದಕ್ಷಿಣ ಆಫ್ರಿಕಾ ತಂಡವು ಟಿ20 ವಿಶ್ವಕಪ್ ನ ಫೈನಲ್ ತಲುಪಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನದಂಡವು ಕೇವಲ 56 ರನ್​ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಅತೀ ಕಡಿಮೆ ರನ್ ಕಲೆಹಾಕಿದ ತಂಡ ಎನಿಸಿಕೊಂಡಿದೆ.

ಮೊದಲ ಓವರ್​ನಲ್ಲೇ ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಕಬಳಿಸಿ ಮಾರ್ಕೊ ಯಾನ್ಸೆನ್ ಮೊದಲ ಯಶಸ್ಸು ತಂದುಕೊಟ್ಟರೆ, ಮೂರನೇ ಓವರ್​ನಲ್ಲಿ ಗುಲ್ಬದ್ದೀಣ್ ನೈಬ್ (9) ಔಟಾದರು, ಅಝ್ಮತುಲ್ಲಾ ಒವರ್​ಝಾಹಿ (10) ಇಬ್ರಾಹಿಂ ಝದ್ರಾನ್ (2), ಮೊಹಮ್ಮದ್ ನಬಿ (0), ನಂಗೆಯಲಿಯಾ ಖರೋಟೆ (2) ಕರೀಮ್ ಜನ್ನತ್ (8) ರಶೀದ್ ಖಾನ್ 8 ರನ್​ಗಳಿಸಿ ಔಟಾದರೆ, ನೂರ್ ಅಹ್ಮದ್ (0) ಈ ಮೂಲಕ 11.5 ಓವರ್​ಗಳಲ್ಲಿ ಕೇವಲ 56 ರನ್​ಗಳಿಗೆ ಆಲೌಟ್ ಆಯಿತು.

ಸೌತ್ ಆಫ್ರಿಕಾ ಪರ ಬೋಲಿಂಗ್ ಮಾಡಿದ ಮಾರ್ಕೊ ಯಾನ್ಸೆನ್ 3 ಓವರ್​ಗಳಲ್ಲಿ 3 ವಿಕೆಟ್ ಪಡೆದುಕೊಂಡರೆ, ತಬ್ರೇಝ್ ಶಂಸಿ 3 ವಿಕೆಟ್ ಮತ್ತು ಕಗಿಸೊ ರಬಾಡ ಹಾಗೂ ಅನ್ರಿಕ್ ನೋಕಿಯಾ ತಲಾ 2 ವಿಕೆಟ್ ಪಡೆದು ಅತಿ ಕಡಿಮೆ ರನ್ ಗೆ ಆಲೌಟ್ ಮಾಡಿದರು.

ಕೇವಲ 57 ರನ್​ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಫಝಲ್ಹಕ್ ಫಾರೂಖಿ ಎಸೆದ 2ನೇ ಓವರ್​ನ 5ನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (5) ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ರೀಝ ಹೆಂಡ್ರಿಕ್ಸ್ ಹಾಗೂ ಐಡೆನ್ ಮಾರ್ಕ್ರಾಮ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. 8.5 ಓವರ್​ಗಳಲ್ಲಿ 57 ರನ್​ಗಳ ಗುರಿ ಮುಟ್ಟುವ ಮೂಲಕ ಸೌತ್ ಆಫ್ರಿಕಾ ತಂಡವು 9 ವಿಕೆಟ್​ಗಳ ಭರ್ಜರಿ ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿದರು.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow