ಟೀಮ್ ಇಂಡಿಯಾದ ನಿರ್ಗಮಿತ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್(Rahul Dravid) ಬಿಸಿಸಿಐ ನೀಡಿದ್ದ 5 ಕೋಟಿ ಹಣದಲ್ಲಿ 2.5 ಕೋಟಿ ಹಣವನ್ನು ಬಿಸಿಸಿಐಗೆ ಹಿಂದಿರುಗಿಸಿ ನಮ್ರತೆ ಮೆರೆದಿದ್ದಾರೆ. ಸಮಾನವಾಗಿ ಹಣವನ್ನು ಹಂಚಬೇಕು ಎಂಬುವುದು ರಾಹುಲ್ ಅವರ ನಿಲುವಾಗಿದೆ.
ಇತ್ತೀಚಿಗೆ t20 ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡ ಟೀಮ್ ಇಂಡಿಯಾಗೆ ಬಿಸಿಸಿಐ 125 ಕೋಟಿ ರೂ ಬಹುಮಾನ ಹಂಚಿಕೆ ಮಾಡಿತ್ತು. ಇದರಂತೆ ಕೋಚ್ ರಾಹುಲ್ ದ್ರಾವಿಡ್ ಸೇರಿ ತಂಡದ ಆಟಗಾರರಿಗೆ 5 ಕೋಟಿ ರೂ ಬಹುಮಾನ ನೀಡಲಾಗಿತ್ತು. ಉಳಿದಂತೆ ಬ್ಯಾಟಿಂಗ್ ಮತ್ತು ಬೋಲಿಂಗ್ ಕೋಚ್ ಗಳಿಗೆ ತಲಾ 2.5 ಕೋಟಿ ಮತ್ತು ಮೀಸಲು ಆಟಗಾರರಿಗೆ ಒಂದು ಕೋಟಿ ಬಹುಮಾನ ನೀಡಲಾಗಿತ್ತು.
ಈ ನಿಟ್ಟಿನಲ್ಲಿ ಎಲ್ಲರಿಗೂ ಒಂದೇ ಹಂತದ ಬಹುಮಾನ ಬರಬೇಕೆಂದು ರಾಹುಲ್ ದ್ರಾವಿಡ್ ಅವರು ತಮ್ಮ 5 ಕೋಟಿ ಹಣದಲ್ಲಿ 2.5 ಕೋಟಿ ರೂ ಅನ್ನು ಬಿಸಿಸಿಐಗೆ ಹಿಂದಿರುಗಿಸಿದ್ದಾರೆ. ಇದಲ್ಲದೆ ಇತರೆ ಕೋಚ್ ಗಳಿಗೆ ಕೊಟ್ಟಂತೆ ನನಗೂ ಕೂಡ ಕೊಡಿ ಎಂದು ಬಿಸಿಸಿಐ ನ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕನ್ನಡಿಗ ರಾಹುಲ್ ದ್ರಾವಿಡ್ ತಮಗೆ ನೀಡಿದ 5 ಕೋಟಿ ರೂ ಹಣದಲ್ಲಿ 2. 5 ಕೋಟಿ ರೂ ಹಣವನ್ನು ಹಿಂದಿರುಗಿಸಿ ಅಚ್ಚರಿ ಮೂಡಿಸಿದ್ದಾರೆ. ಆಟಗಾರರಿಗೆ, ಸಹಾಯಕ ಆಟಗಾರರಿಗೆ ಮತ್ತು ಕೋಚ್ ಗಳಿಗೆ ಸಮಾನ ಬಹುಮಾನ ನೀಡಬೇಕೆಂಬುದು ಅವರ ನಿಲುವಾಗಿತ್ತು. ಈ ನಿಲುವಿಗೆ ಕ್ರಿಕೆಟ್ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೇ ರೀತಿಯಾಗಿ 2018ರಲ್ಲಿ ಭಾರತದ ಕಿರಿಯ ತಂಡ ಅಂಡರ್ 19 ಗೆದ್ದಾಗ ಬಿಸಿಸಿಐ 50 ಲಕ್ಷ ರೂ ಬಹುಮಾನದಲ್ಲಿ ತಂಡದ ಸದಸ್ಯರಿಗೆ 20 ಲಕ್ಷ, ತಂಡದ ಆಟಗಾರರಿಗೆ 30 ಲಕ್ಷ ಹಣವನ್ನು ಘೋಷಿಸಲಾಗಿತ್ತು. ಅಗಾ ರಾಹುಲ್ ದ್ರಾವಿಡ್ ಅವರು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕೆಂದು ಬಿಸಿಸಿಐಗೆ ಮನವಿ ಮಾಡಿದ್ದರು.