ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ಕುರಿತಂತೆ ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು ನೀಡಲಾಗಿತ್ತು. ಆದರೇ ಈ ತೀರ್ಪು ವಿರೋಧಿಸಿ ಆಗಸ್ಟ್.21ರಂದು ಭಾರತ್ ಬಂದ್(SC ST Reservation Bharat Bandh) ಗೆ ಕರೆ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಗಸ್ಟ್ 1 ಮಹತ್ವದ ತೀರ್ಪು ನೀಡಲಾಗಿತ್ತು. ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಸಾಂವಿಧಾನಿಕ ಪೀಠವು 6:1 ರ ಬಹುಮತದೊಂದಿಗೆ ಎಸ್‌ಸಿ/ಎಸ್‌ಟಿ ವರ್ಗದೊಳಗೆ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾ (ಒಳ ಮೀಸಲಾತಿ) ನೀಡಬಹುದು ಎಂದು ಅದೇಶ ನೀಡಲಾಗಿತ್ತು.
ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಪದಾಧಿಕಾರಿಗಳು ಜಗದಲ್‌ಪುರದ ಎಲ್ಲಾ ಅಧಿಕಾರಿಗಳಿಗೆ ಮತ್ತು ವಿವಿಧ ಸಂಘಟನೆಗಳಿಗೆ ಪತ್ರದ ಮೂಲಕ ಆಗಸ್ಟ್ 21 ರಂದು ಭಾರತ್ ಬಂದ್ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಸಣ್ಣ ವ್ಯಾಪಾರಿಗಳ ಸಂಘ, ಸಾರಿಗೆ ಸಂಘ, ಟ್ಯಾಕ್ಸಿ ಇತ್ಯಾದಿ ಸಂಸ್ಥೆಗಳಿಗೂ ಮಾಹಿತಿ ನೀಡಲಾಗಿದೆ. ಆ. 21 ರಂದು ಬೆಳಿಗ್ಗೆ 5 ರಿಂದ ಸಂಜೆ 5 ರವರೆಗೆ ಎಲ್ಲ ವಿಭಾಗವನ್ನು ಮುಚ್ಚಲಾಗುವುದು ಎಂದು ಸರ್ವ ಆದಿವಾಸಿ ಸಮಾಜದ ವಿಭಾಗೀಯ ಅಧ್ಯಕ್ಷ ಪ್ರಕಾಶ್ ಠಾಕೂರ್ ಹೇಳಿದ್ದಾರೆ.