ಪೊಲೀಸರು ಬಹಳ ಗಂಭೀರ ವಾಗಿ ಪರಿಗಣಿಸಿ ತನಿಖೆ ಮಾಡುತ್ತಾ ಇದ್ದಾರೆ. ತನಿಖೆ ವೇಳೆ ಹತ್ತಾರು ಕಡೆಗಳಲ್ಲಿ ಸುತ್ತಾಟ ಮಾಡಿದ್ದಾರೆ. ಇದುವರೆಗೂ ಸುಮಾರು 200ಕ್ಕೂ ಹೆಚ್ಚು ಸಾಕ್ಷ್ಯಗಳ ಜತೆಗೆ ಸುಮಾರು 300ಕ್ಕೂ 300ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆ ಮಾಡಿದ್ದಾರೆ. ಹೀಗಾಗಿ ಸುತ್ತಾಟದ ಸಮಯದಲ್ಲಿ ಲಕ್ಷಗಟ್ಟಲೇ ಹಣ ಖರ್ಚಾಗಿದ್ದು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಣ ಕೊಡುವಂತೆ ಮನವಿ ಮಾಡಿದ್ದಾರೆ ಈ ವಿಷಯವನ್ನು ರಿಮಾಂಡ್ ನಲ್ಲಿ ಉಲ್ಲೇಖಿಸಿದ್ದಾರೆ.
Renuka Swamy Murder Case
ಇನ್ನು ಸಾಕ್ಷ್ಯ ಸಂಗ್ರಹ ಮಾಡಿದ ಎಲ್ಲಾ ಕಡೆಗಳಲ್ಲೂ ಹೋಗಿ ಪೊಲೀಸರು ಮಹ ಜರು ಕೂಡ ನಡೆಸಿದ್ದಾರೆ. ಹೀಗಾಗಿ ಕಳೆದ ಎರಡೂ ವರೆ ತಿಂಗಳಿಂದ ಲಕ್ಷಾಂ ತರ ರುಪಾಯಿ ಹಣ ಖರ್ಚಾಗಿದ್ದು ಈ ಎಲ್ಲಾ ಹಣವನ್ನು ಪೊಲೀಸರು ತಮ್ಮ ಜೇಬಿನಿಂ ದಲೇ ಹಾಕಿದ್ದು, ಬಿಲ್ ಸಂಗ್ರಹ ಮಾಡಿದ್ದಾರೆ. ಈಗ ಆ ಎಲ್ಲಾ ಬಿಲ್‌ಗಳನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದು ಹಣವನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನು ಪೊಲೀಸರು ತನಿಖೆಯ ಭಾಗವಾಗಿ ಹಲವು ಕಡೆಗಳಲ್ಲಿ ಮಹಜರು ಮಾಡಿದ್ದಾರೆ. ಅದರಲ್ಲೂ ಬೆಂಗಳೂರು ಅಲ್ಲದೆ ಚಿತ್ರದುರ್ಗ ದಲ್ಲೂ ಮಹಜರು ಮಾಡಿದ್ದಾರೆ. ಅಪಹರಣ ಮಾಡಿದ ಸ್ಥಳ, ಆರೋಪಿಗಳ ಮನೆ ಸೇರಿ ಹತ್ತಾರು ಕಡೆಗಳಲ್ಲಿ ಆರೋಪಿಗಳನ್ನು ಕರೆದೊಯ್ದು ಮಹ ಜರು ನಡೆಸಿದ್ದಾರೆ. ಹೀಗೆ ಆರೋ ಪಿಯನ್ನು ಕರೆದೊಯ್ಯವಾಗ ಊಟದ ಖರ್ಚಿನ ಜತೆಗೆ ದೈನಂದಿನ ಖರ್ಚನ್ನು ತನಿಖಾಧಿಕಾರಿಗಳೇ ಭರಿಸಿದ್ದಾರೆ.
ಜತೆಗೆ ಸಂಗ್ರಹ ಮಾಡಿದ ಸಾಕ್ಷ್ಯಗಳನ್ನು ಹಾರ್ಡ್ ಡಿಸ್ಕ್ ಹಾಗೂ ಪೆನ್ ಡ್ರೈವ್‌ಗಳನ್ನು ಅಧಿಕ ಸಂಖ್ಯೆಯಲ್ಲಿ ಖರೀದಿ ಮಾಡಿದ್ದು, ದಾಖ ಲೆಗಳನ್ನು ಸುರಕ್ಷಿತವಾಗಿ ಇಟ್ಟಿದ್ದಾರೆ. ಇದುವ ರೆಗೂ ಲಕ್ಷಾಂತರ ರುಪಾಯಿ ಖರ್ಚಾ ಗಿದ್ದು ಆ ಹಣವನ್ನು ತಮ್ಮ ಕೈಯಿಂದ ಅಧಿಕಾರಿ ಗಳು ಹಾಕಿದ್ದು ಈಗ ಅದನ್ನು ಮಂಜೂರು ಮಾಡು ವಂತೆ ಹಿರಿಯ ಅಧಿಕಾರಿಗಳಿಗೆ ಬಿಲ್ ಸಮೇತ ಮ ನವಿ ಮಾಡಿದ್ದಾರೆ.