ರಾಜ್ಯದಲ್ಲಿ ಡೆಂಘಿ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿತ್ತು ಎಂದು ನಿಟ್ಟು ಉಸಿರು ಬಿಟ್ಟ ಜನತೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಡೀಸ್ ಸೊಳ್ಳೆಯಿಂದ ಹರಡುವ ಝಿಕಾ ವೈರಿಸ್(Zika Virus) ರಾಜ್ಯದಲ್ಲಿ ಪತ್ತೆ ಅಗಿದ್ದು, ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ.
ಸದ್ಯ ಆನೇಕಲ್ ತಾಲೂಕು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಣಿಯಲ್ಲಿ ಎರಡು ವಾರಗಳಲ್ಲಿ ರಾಜ್ಯದಲ್ಲಿ ಈವರೆಗೆ ಒಟ್ಟು 7 ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗಂಧೆಗಳು ಕಾಣಿಸಿಕೊಳ್ಳೋದು ಝಿಕಾ ಗುಣಲಕ್ಷಣಗಳಾಗಿದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದೆ.
ಈ ವೈರಸ್ ಕಂಡು ಬಂದ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಕಂಟೈನ್ವೆಂಟ್ ಝೋನ್ ಎಂದು ಪರಿಗಣಿಸಲಾಗುತ್ತದೆ. ಝಿಕಾ ವೈರಸ್ ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ. ಆರೋಗ್ಯ ಇಲಾಖೆ ಸಾರ್ವಜನಿಜರಿಗೆ ಮನವಿ ಮಾಡಿದ್ದಾರೆ.
ಈ ವೈರೆಸ್ ನ ಲಕ್ಷಣಗಳು
- ಚರ್ಮದ ದದ್ದುಗಳು
- ಸ್ನಾಯು ನೋವು
- ಕೀಲು ನೋವು
- ತಲೆನೋವು
- ಜ್ವರ, ತಾಪಮಾನ ಸುಮಾರು 102 ಡಿಗ್ರಿ.
ಈ ವೈರಸ್ ತಡೆಗಟ್ಟುವುದು ಹೇಗೆ..?
ಝಿಕಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸೊಳ್ಳೆ ಕಡಿತವನ್ನು ತಡೆ ಗಟ್ಟುವುದು ಮುಖ್ಯವಾಗಿದೆ. ಸೋಂಕಿನ ತಡೆಗಟ್ಟುವಿಕೆ ಅಥವಾ ಚಿಕಿತ್ಸೆ ಗಾಗಿ ಇನ್ನೂ ಯಾವುದೇ ಲಸಿಕೆ ಲಭ್ಯವಿಲ್ಲ. ಸೋಂಕು ಇರುವ ಪ್ರದೇಶ ಗಳಿಗೆ ಹೋಗುವುದು, ಅಲ್ಲಿ ಓಡಾಟ ನಡೆಸುವುದರಿಂದ ದೂರ ಇರಬೇಕು. ಈ ವೈರಸ್ ಲೈಂಗಿಕ ಪ್ರಕ್ರಿಯೆಯ ಮೂಲಕ ಕೂಡ ಹರಡುವ ಸಾಧ್ಯತೆ ಹೆಚ್ಚಿಸುವುದರಿಂದ ಸುರಕ್ಷಿತ ಲೈಂಗಿಕತೆ ಯನ್ನು ಅಭ್ಯಾಸ ಮಾಡಿಕೊಳ್ಳಿ.