T20 ವಿಶ್ವಕಪ್ ಬಳಿಕ ICC ಪುರುಷರ T20I ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ 2ನೇ ಸ್ಥಾನದಲ್ಲಿ ಗಳಿಸಿಕೊಂಡರೆ, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಋತುರಾಜ್ ಗಾಯಕ್ವಾಡ್ 7ನೇ ಸ್ಥಾನಕ್ಕೆ ಪಡೆದುಕೊಂಡಿದ್ದಾರೆ.
T20 ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ 844 ಪಾಯಿಂಟ್ ಗಳೊಂದಿಗೆ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಸೂರ್ಯಕುಮಾರ್ ಯಾದವ್ 821 ಪಾಯಿಂಟ್ ಗಳೊಂದಿಗೆ ದ್ವಿತೀಯ, ಇಂಗ್ಲೆಂಡ್ ನ ಪಿಲ್ ಸಾಲ್ಟ್ 797 ಪಾಯಿಂಟ್ ಗಳೊಂದಿಗೆ 3ನೇ ಸ್ಥಾನ, ಪಾಕಿಸ್ತಾನ ನಾಯಕ ಬಾಬರ್ ಅಜಂ 755 ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿದ್ದಾರೆ.
ಇನ್ನೂ T20 ಬೌಲರ್ ವಿಭಾಗದಲ್ಲಿ ಭಾರತದ ಪರವಾಗಿ ಅಕ್ಸರ್ ಪಟೇಲ್ 644 ಪಾಯಿಂಟ್ ಗಳೊಂದಿಗೆ 9 ನೇ ಸ್ಥಾನ ಪಡೆದಿದ್ದು, ಟಾಪ್ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.
ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 11ನೇ ಸ್ಥಾನದಲ್ಲಿದ್ದರೆ, ಜಸ್ಪ್ರೀತ್ ಬೂಮ್ರಾ 14ನೇ ಸ್ಥಾನ ಪಡೆದಿದ್ದಾರೆ. ಭಾರತದ ರವಿ ಬಿಷ್ಟೋಯ್ 14ನೇ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ಭಾರತದ ಆಲ್ ಗ್ರೌಂಡರ್ ಸ್ಥಾನದಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಅಕ್ಸರ್ ಪಟೇಲ್ 12ನೇ ಸ್ಥಾನ ಪಡೆದುಕೊಂಡಿದ್ದಾರೆ.