Darshan: ನಟ ದರ್ಶನ್ ಗೆ ಜೈಲಿನಲ್ಲಿ ಮಾನಸಿಕ ಖಿನ್ನತೆ; ಯೋಗ ಪುಸ್ತಕಗಳ ಮೊರೆ ಹೋದ ದಾಸ!

By Aishwarya

Published On:

Follow Us

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್(Darshan) ನಾಲ್ಕು ಗೋಡೆಗಳ ನಡುವೆ ನೊಂದಿದ್ದಾರೆ. ಜೈಲಿನ ವಾತಾವರಣಕ್ಕೆ ಹೊಂದುಕೊಳ್ಳಲು ಹರಸಾಹಸ ಪಡುತ್ತಾ ಮಾನಸಿಕ ಖಿನ್ನತೆ ಒಳಗಾಗಿ ಯೋಗ ಮತ್ತು ಪುಸ್ತಕಗಳ ಮೊರೆ ಹೋಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಸಹ ಕೈದಿಗಳ ಜೊತೆ ಕೂಡ ಮಾತನಾಡುತ್ತಿಲ್ಲ, ಜೈಲಿನಲ್ಲಿ ಒಬ್ಬಂಟಿಯಾಗಿರುವ ನಟ ದರ್ಶನ್ ಅವರನ್ನು ಒಂಟಿತನ ಕಾಡುತ್ತಿದೆ‌. ಮಾನಸಿಕ ಖಿನ್ನತೆಯಿಂದ ಹೊರಬರಲು ಪ್ರತಿನಿತ್ಯ ಬೆಳಗ್ಗೆ ಯೋಗ ಮಾಡುವ ಮೂಲಕ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಜೈಲಿನ ಊಟ ತಿನ್ನಲು ಆಗುತ್ತಿಲ್ಲ‌ ಮನೆ ಊಟ ಬೇಕು ಎನ್ನುತ್ತಿರುವ ದರ್ಶನ್, ಯಾರ ಬಳಿಯೂ ಮಾತನಾಡುತ್ತಿಲ್ಲ ಯಾವಾಗಲೂ ಸದಾ ಚಿಂತೆಯಲ್ಲೇ ಮುಳುಗಿರುತ್ತಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ತನ್ನ ಜೊತೆಯಲ್ಲಿದ್ದ ಸಹಚಾರರು ಹಾಗೂ ಸಹಕೈದಿಗಳ ಸಹವಾಸ ಬೇಡವೆಂಬ ನಿರ್ಧಾರಕ್ಕೆ ಬಂದಿರುವ ದರ್ಶನ್ ಯಾರ ಬಳಿಯೂ ಮಾತನಾಡುತ್ತಿಲ್ಲ. ಸದಾ ಬೇಸರದಲ್ಲಿ ಒಬ್ಬರೇ ಕುಳಿತಿರುತ್ತಾರೆ ಅಷ್ಟೇ ಅಲ್ಲದೆ ಜೈಲಿನ ಅಧಿಕಾರಿಗಳ ಬಳಿ ಪುಸ್ತಕಗಳನ್ನು ಕೇಳಿ ಪಡೆದು ಓದುತ್ತಿದ್ದಾರೆ.

ಜೈಲಿನಲ್ಲಿರುವ ನಟ ದರ್ಶನ್ ಗೆ ರೇಣುಕಾ ಸ್ವಾಮಿ ಕೊಲೆಯ ಪ್ರಕರಣದ ಭಯ ಕಾಡುತ್ತಿದೆ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುವ ಚಿಂತೆಯಲ್ಲೇ ನಟ ದರ್ಶನ್ ದಿನ ಕಳೆಯುತ್ತಿದ್ದಾರೆ. ಪೊಲೀಸರು ತನಿಖೆ ಚುರುಕುಗೊಳಿಸಿ ಸಾಕ್ಷಿ ಕಲೆ ಹಾಕುತ್ತಿರುವುದು ಜೈಲಿನಲ್ಲಿರುವ ನಟ ದರ್ಶನ್ ಗೆ ನಿದ್ದೆಗೆಡಿಸಿದೆ. ಜುಲೈ 18ಕ್ಕೆ ವಿಚಾರಣೆಯ ಅವಧಿ ಮುಗಿಯಲಿದ್ದು ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ ಜಾಮೀನು ಸಿಗುವುದು ಅಥವಾ ಜೈಲುವಾಸವೇ ಮುಂದುವರೆಯುವುದು ಕಾದು ನೋಡಬೇಕಿದೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow