India vs Pakistan Women: ವಿಶ್ವ ಕ್ರಿಕೆಟ್ ನಲ್ಲಿ ಮಹಿಳೆಯರು ಭರ್ಜರಿ ಪ್ರದರ್ಶನ ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಐಸಿಸಿಯು ಪುರುಷರಿಗೆ ಆಯೋಜಿಸುವಂತೆ ಮಹಿಳೆಯರಿಗೂ ವಿವಿಧ ಟೂರ್ನಿಗಳನ್ನು ಆಯೋಜಿಸುತ್ತಿದೆ. ಕಳೆದ ಮಾರ್ಚ್ ನಲ್ಲಿ ಬಿ ಸಿ ಸಿ ಐ ಮಹಿಳೆಯರಿಗೆ ಐಪಿಎಲ್ ಪಂದ್ಯಾವಳಿ ಆಯೋಜಿಸಿತ್ತು ಈಗ ಐಸಿಸಿಯು ಮಹಿಳಾ ಟಿ20 ಏಷ್ಯಾಕಪ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಒಟ್ಟು ಏಷ್ಯಾದ ಎಂಟು ತಂಡಗಳು ಭಾಗವಹಿಸಲಿವೆ. ಶ್ರೀಲಂಕಾ ದೇಶವು ಟೂರ್ನಿಯಾ ಆಥಿತ್ಯ ವಹಿಸಲಿದ್ದು, ಏಷಿಯನ್ ಚಾಂಪಿಯನ್ಸ್ ಆಗಲು 8 ತಂಡಗಳು ಕಸರತ್ತು ನಡೆಸಿವೆ.
ಈ ಬಾರಿ ಏಷ್ಯಾಕಪ್ ಕಪ್ ನಲ್ಲಿ ಒಟ್ಟು ಎಂಟು ತಂಡಗಳು ಕಣಕ್ಕೆ ಇಳಿಯಲಿದ್ದು, ಈ ತಂಡಗಳನ್ನು ಎರಡು ಗ್ರೂಪ್ ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್ ಎ ನಲ್ಲಿರುವ ಭಾರತ ತಂಡವು ಪಾಕಿಸ್ತಾನ ಮತ್ತು ನೇಪಾಳ ಮತ್ತು ಯುಎಇ ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡಲಿದೆ.
ಇಂದು ಮೊದಲ ಪಂದ್ಯದಲ್ಲಿ ನೇಪಾಳ ಮತ್ತು ಯುಎಇ ತಂಡಗಳ ನಡುವೆ ನಡೆಯಲಿದ್ದು, ಕ್ರಿಕೆಟ್ ಲೋಕದ ಹೈ ವೋಲ್ಟೇಜ್ ಪಂದ್ಯ ಎನಿಸಿಕೊಳ್ಳುವ ಭಾರತ ಮತ್ತು ಪಾಕಿಸ್ತಾನ ಇಂದು ಸಂಜೆ 7 ಗಂಟೆಗೆ ನಡೆಯಲಿದೆ. ಏಷಿಯನ್ ಕಪ್‌ನಲ್ಲಿ ಶುಭಾರಂಭ ಪಡೆಯಲು ಭಾರತೀಯರು ಸಜ್ಜಾಗಿದ್ದಾರೆ.
ಏಷ್ಯಾಕಪ್ ಎಂದ ಕ್ಷಣ ನೆನಪಿಗೆ ಬರುವುದು ಏಕದಿನ ಪಂದ್ಯಗಳು. ಪುರುಷರ ಏಷ್ಯಾಕಪ್ ಪಂದ್ಯಾವಳಿಯನ್ನು 50 ಓವರ್ ಗಳಿಗೆ ನಡೆಸಲಾಗುತ್ತದೆ. ಆದರೆ ಇದೀಗ ಶ್ರೀಲಂಕದಲ್ಲಿ ನಡೆಯಲಿರುವ ಮಹಿಳಾ ಏಷ್ಯಾ ಕಪ್ 20 ಓವರ್‌ಗಳ ಪಂದ್ಯಾವಳಿ ಆಗಿದೆ.