ರೇಣುಕಾಸ್ವಾಮಿ ಕೊಲೆ ಪ್ರಕರಣ(Renuka Swamy Murder)ದಲ್ಲಿ ಪ್ರಮುಖ ಆರೋಪಿಯಾಗಿರುವ ರಘು ಪರಪ್ಪನ ಅಗ್ರಹಾರದ ಜೈಲುಪಾಲಾಗಿದ್ದು ಮಗನ ಕೊರಗಿನಲ್ಲಿ ಆತನ ತಾಯಿ ಮೃತಪಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಕೋಳಿ ಬುರುಜನಹಟ್ಟಿ ಗ್ರಾಮದವರಾದ ಮಂಜುಳಮ್ಮ. ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಗ ಜೈಲು ಸೇರಿದ ಬಳಿಕ ಇನ್ನಷ್ಟು ಆರೋಗ್ಯ ಹದಗೆಟ್ಟಿತ್ತು. ಮಗ ಜೈಲಿಂದ ಈಗ ಬರ್ತಾನೆ, ಆಗ ಬರ್ತಾನೆ ಅಂತಾ ಕಾದಿದ್ದ ತಾಯಿ ಇದೀಗ ಮಗ ನ್ಯಾಯಾಂಗ ಬಂಧನದಲ್ಲಿರುವಾಗಲೇ ತಾಯಿ ಕೊನೆಯುಸಿರೆಳೆದಿದ್ದಾರೆ.
ಬಂಧನಕ್ಕೂ ಮುಂಚೆ ರಘು ಪ್ರೇಮ ವಿವಾಹವಾಗಿ ಮನೆಯಿಂದ ಹೊರಗಿದ್ದರು. ಅವರ ಸಹೋದರ ಮುರುಳಿ ಮದುವೆಯಾಗದೆ ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ರಘು ಆಗಾಗಿ ಆಗಮಿಸಿ ತಾಯಿಯ ಆರೋಗ್ಯ ವಿಚಾರಿಸುತ್ತಿದ್ದರು. ಆದರೀಗ ಜೈಲು ಸೇರಿದಾಗಿನಿಂದ ರಘು ತಾಯಿಯನ್ನು ನೋಡಲಾಗಿರಲಿಲ್ಲ.
ರಘು ಅವರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದು. ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಜಿಲ್ಲೆಯ ಅಧ್ಯಕ್ಷರಾಗಿದ್ದರು. ರೇಣುಕಾ ಸ್ವಾಮಿಯನ್ನು ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತಂದಿದ್ದು ಇದೇ ರಘು. ಈ ಕಾರಣದಿಂದಲೇ ರಘು ಅವರನ್ನು ಎ4 ಆರೋಪಿಯನ್ನಾಗಿ ಮಾಡಲಾಗಿತ್ತು. ಈಗ ಅವರು ನ್ಯಾಯಾಂಗ ಬಂಧನದಲ್ಲಿ ಇರುವಾಗಲೇ ಅವರ ತಾಯಿ ಮೃತಪಟ್ಟಿದ್ದಾರೆ.
ರಘು ತಾಯಿ ಮಂಜುಳಮ್ಮ ಕಳೆದ 1 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಮಂಜುಳಮ್ಮ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರ ಮನವಿ ಮಾಡಿಕೊಂಡಿದ್ದಾರೆ.