ಸಾಮಾನ್ಯವಾಗಿ ಒಂದು ಮಗುವಿಗೆ ಹಲ್ಲುಗಳು ಬರಲು ಆರು ತಿಂಗಳಿನಿಂದ ಒಂದು ವರ್ಷಗಳ ಕಾಲ ಸಮಯ ಬೇಕು. ಅದರಲ್ಲೂ ಸಂಪೂರ್ಣವಾಗಿ ಹಲ್ಲುಗಳು ಬರಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಮಗುವಿನ ಪ್ರತಿಯೊಂದು ಬೆಳವಣಿಗೆಗೂ ಬಹಳಷ್ಟು ಸಮಯ ತೆಗೆದುಕೊಳ್ಳುವುದು ಸಾಮಾನ್ಯರಿಗೆ ಗೊತ್ತಿರುವ ವಿಷಯವೇ ಆದರೆ ಇಲ್ಲೊಂದು ಮಗು ಜನಿಸುವಾಗಲೇ 32 ಹಲ್ಲುಗಳನ್ನು ಹೊಂದಿದೆ. ಈ ಬೆಳವಣಿಗೆ ನೋಡಿ ತಾಯಿ ಶಾಕ್ ಗೆ ಒಳಗಾಗಿದ್ದಾರೆ.
ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸಿಸುತ್ತಿರುವ ನಿಕಾ ದಿವಾ ಎಂಬ ಮಹಿಳೆ ತನ್ನ ನವಜಾತ ಶಿಶುವಿನ ಅಪರೂಪದ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಟಿಕ್‌ಟಾಕ್‌ನ ಸಹಾಯವನ್ನು ತೆಗೆದುಕೊಂಡಿದ್ದಾರೆ. ಮಗು ಹುಟ್ಟುವಾಗಲೇ 32 ಹಲ್ಲುಗಳನ್ನು ಹೊಂದಿದ್ದು, ಈ ಕುರಿತು ಮಗುವಿನ ತಾಯಿ ಟಿಕ್‌ಟಾಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಸದ್ಯ ತನ್ನ ಮಗುವಿನ ಬಗ್ಗೆ ಸ್ವತಃ ತಾಯಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ಸಕ್ಕತ್ ವೈರಲ್ ಆಗುತ್ತಿದೆ. ತನ್ನ ಮಗಳನ್ನು ಮೊದಲ ಬಾರಿಗೆ ನೋಡಿದಾಗ , ಬಾಯಿಯಲ್ಲಿ ಎಲ್ಲಾ ಹಲ್ಲುಗಳನ್ನು ನೋಡಿ ಆಘಾತಕ್ಕೊಳಗಾಗಿದ್ದೆ ಎಂದು ಬರೆದುಕೊಂಡಿದ್ದಾರೆ.
ಈ ರೀತಿ ಹುಟ್ಟಲು ಆನುವಂಶಿಕ ಅಂಶಗಳು, ಕೆಲವು ವೈದ್ಯಕೀಯ ಪರಿಸ್ಥಿತಿಗಳು ಅಥವಾ ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯದ ಸ್ಥಿತಿಯು ಸಂಭವನೀಯ ಕಾರಣಗಳೆಂದು ಹೇಳಲಾಗುತ್ತದೆ. ಮಗುವಿಗೆ ಯಾವುದೇ ಗಂಭೀರ ತೊಂದರೆಯನ್ನು ಉಂಟುಮಾಡುವುದಿಲ್ಲವಾದರೂ, ಹಾಲುಣಿಸುವಲ್ಲಿ ತೊಂದರೆ ಎದುರಿಸ ಬೇಕಾಗುತ್ತದೆ ಎನ್ನಲಾಗಿದೆ.