Women’s Asia cup 2024: ಭಾರತಕ್ಕೆ ಸತತ 2ನೇ ಜಯ ಯುಎಇ ವಿರುದ್ಧ ಭರ್ಜರಿ ಗೆಲುವು

By Aishwarya

Published On:

Follow Us

Women’s Asia cup 2024 IND vs UAE: ಮಹಿಳೆಯರ ಏಷ್ಯಾಕಪ್ T20 ಕ್ರಿಕೆಟ್ ಟೂರ್ನಿಯಾ A ಗುಂಪಿನಲ್ಲಿ ಇಂದು ಯುನಿಟೆಡ್ ಅರಬ್ ಎಮಿರೇಟ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 78 ರನ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.

ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಟಿ20 ಏಷ್ಯಾಕಪ್​ನ 5ನೇ ಪಂದ್ಯದಲ್ಲಿ ಯುಎಇ ಮಹಿಳಾ ತಂಡವನ್ನು 78 ರನ್​ಗಳಿಂದ ಮಣಿಸಿದ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ದಾಖಲೆಯ 201 ರನ್ ಕಲೆಹಾಕಿತು.

202ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಯುಎಇ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಗಿ 78ರನ್​ಗಳ ಸೋಲು ಕಂಡಿತು. ತಂಡದಲ್ಲಿ ನಾಯಕಿ ಇಶಾ ರೋಹಿತ್ ಓಮತ್ತು ಕವಿಶಾ (40) ಮಾತ್ರ ಕೊಂಚ ಸಮಯ ಮಿಂಚಿದರು. ಇತರ ಬ್ಯಾಟರ್​ಗಳಾದ ತೀರ್ಥ ಸತೀಶ್ (4), ರಿನಿತಾ ರಜಿತ್ (7), ಸಮೈರಾ ಧರಣಿಧರಕ (5), ಖುಷಿ ಶರ್ಮಾ (10) ಮತ್ತು ಹೀನಾ (8) ಭಾರತೀಯ ಬೌಲರ್​ಗಳ ದಾಳಿಗೆ ರನ್​ಗಳಿಸಲು ವಿಫಲರಾದರು.

ಭಾರತದ ಪರ ದೀಪ್ತಿ ಶರ್ಮಾ ಎರಡು ವಿಕೆಟ್ ಕಬಳಿಸಿದರೆ, ಉಳಿದ ನಾಲ್ವರು ಬೌಲರ್‌ಗಳು ತಲಾ ಒಂದೊಂದು ವಿಕೆಟ್ ಕಿತ್ತರು.

ಟಾಸ್‌ ಗೆದ್ದ ಯುಎಇ ಭಾರತವನ್ನು ಬ್ಯಾಟಿಂಗ್‌ ಆಹ್ವಾನಿಸಿತು. ಆರಂಭದಲ್ಲಿ ಶಫಾಲಿ ವರ್ಮಾ 18 ಎಸೆತಗಳಲ್ಲಿ 37 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿ ಬಿರುಸಿನ ಆಟವಾಡಿದರು.

ಈ ಮಧ್ಯೆ ಸ್ಮೃತಿ ಮಂದಾನ (13) ಹಾಗೂ ದಯಾಲನ್ ಹೇಮಲತಾ (2) ನಿರಾಸೆ ಮೂಡಿಸಿದ ಕಾರಣ ಭಾರತ 52 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡ ತುಸು ಹಿನ್ನಡೆಗೊಳಗಾಯಿತು. ಹರ್ಮನ್‌ ಪ್ರೀತ್ ಹಾಗೂ ರಿಚಾ ಅರ್ಧಶತಕಗಳ ಸಾಧನೆಯೊಂದಿಗೆ ಐದನೇ ವಿಕೆಟ್‌ಗೆ 75 ರನ್‌ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ಹರ್ಮನ್‌ಪ್ರೀತ್‌ ಕೌರ್ 47 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರು.

‘ಎ’ ಗುಂಪಿನಲ್ಲಿ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಜುಲೈ 23ರಂದು ನೇಪಾಳದ ಸವಾಲನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಏಳು ವಿಕೆಟ್ ಅಂತರದ ಜಯಗಳಿಸಿತ್ತು

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow