Modi 3.0 Budget: ಯಾವ ವಸ್ತುಗಳಿಗೆ ಬೆಲೆ ಮೇಲೆ ಬೆಲೆ ಏರಿಕೆ..? ಮತ್ತು ಇಳಿಕೆ…?

By Aishwarya

Published On:

Follow Us

ಪ್ರಧಾನಿ ನರೇಂದ್ರ ಮೋದಿ(Modi 3.0 Budget) ಸರ್ಕಾರದ 2024ನೇ ಸಾಲಿನ ಬಜೆಟ್ ಇಂದು ಮಂಡನೆಯಾಗಿದೆ. ಬಜೆಟ್ ನಲ್ಲಿ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆ ಆಗಿದ್ದು, ವಸ್ತುಗಳ ಮೇಲಿನ ಸುಂಕದಲ್ಲಿ ಏರಳಿತ ಮಾಡಿದ ಕಾರಣ ಹಲವು ವಸ್ತುಗಳ ಬೆಲೆ ಏರಿಕೆ ಕಂಡುಬಂದಿದೆ.

ಕೆಲವು ವಸ್ತುಗಳ ಮೇಲಿನ ಸುಂಕದ ಹೆರಿಗೆ ಮಾಡಿದ ಕಾರಣ ವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣಲಿದೆ. ಪರಿಸರಕ್ಕೆ ಹಾನಿ ಉಂಟುಮಾಡುವ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿದ್ದು ಇದರಿಂದ ಪರಿಸರ ಮಾಲಿನ್ಯ ತಡೆಗಟ್ಟುವ ಕೆಲಸ ನಡೆಯುತ್ತದೆ. ಇನ್ನು ಚಿನ್ನದಲ್ಲಿ ಹಾಗೂ ಮೊಬೈಲ್ ಪ್ರಿಯರಿಗೆ ಈ ಬಜೆಟ್ ನಲ್ಲಿ ಸಿಹಿ ಸುದ್ದಿ ನೀಡಲಾಗಿದ್ದು ಅವುಗಳ ಮೇಲಿನ ಬೆಲೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದೆ.

ಬೆಲೆಯಲ್ಲಿ ಇಳಿಕೆ ಕಂಡಿರುವ ವಸ್ತುಗಳು ಯಾವುವು…?

  • ಮೊಬೈಲ್ ಫೋನ್ ಬಿಡಿ ಭಾಗಗಳು
  • ಚಿನ್ನ ಬೆಳ್ಳಿ ಪ್ಲಾಟಿನಮ್
  • ಮೊಬೈಲ್ ಫೋನ್
  • ಮೊಬೈಲ್ ಫೋನ್ ಚಾರ್ಜರ್
  • ಕ್ಯಾನ್ಸರ್ ಔಷಧಿಗಳು
  • ಸೋಲಾರ್ ಪ್ಯಾನಲ್ ಗಳು
  • ವಿದ್ಯುತ್ ತಂತಿ ಮತ್ತು ಎಕ್ಸ್ ರೇ ಉಪಕರಣಗಳು
  • ಎಲೆಕ್ಟ್ರಿಕ್ ವಾಹನ
  • ಆಟಿಕೆ
  • ಬೈಸಿಕಲ್

ಈ ಮೇಲಿನ ವಸ್ತುಗಳ ಮೇಲೆ ಬೆಲೆಯು ಸ್ವಲ್ಪಮಟ್ಟಿಗೆ ಕಡಿಮೆಯಾಗಲಿದ್ದು ಅಮದು ಸುಂಕದ ಕಡಿತದಿಂದಾಗಿ ಬೆಲೆಯಲ್ಲಿ ಇಳಿಕೆ ಕಂಡಿದೆ.

ಬೆಲೆಯಲ್ಲಿ ಏರಿಕೆ ಕಂಡಿರುವ ವಸ್ತುಗಳು ಯಾವುವು…?

  • ಮರುಬಳಕೆ ಆಗದ ಎಲ್ಲಾ ಪ್ಲಾಸ್ಟಿಕ್ ಪದಾರ್ಥಗಳು
  • ವಿವಿಧ ರೀತಿಯ ಬಟ್ಟೆಗಳು
  • ಎಲ್ಲ ರೀತಿಯ ವಿದ್ಯುತ್ ಉಪಕರಣಗಳು
  • ಮೊಬೈಲ್ ಟವರ್ ಬಿಡಿ ಭಾಗಗಳು
  • ಸಿಗರೇಟ್
  • ಅಮೋನಿಯಂ ನೈಟ್ರೇಟ್
  • PVC ಫ್ಲಕ್ಸ್ ಬ್ಯಾನರ್
  • ಅಡಿಗೆ ಎಲೆಉಪಕರಣಗಳು ಚಿಮಣಿ

ಈ ವರ್ಷಗಳ ಮೇಲಿನ ಬೆಲೆ ಏರಿಕೆ ಮಾಡಲಾಗಿದ್ದು, ಪರಿಸರಕ್ಕೆ ಮಾರಕವಾಗುವ ವಸ್ತುಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಲಾಗಿದೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow