Siddaramaiah: ನನ್ನ ರಾಜಕೀಯ ಜೀವನ‌ ತೆರದ ಪುಸ್ತಕ: ಮೂಡ ಹಗರಣದ ಬಗ್ಗೆ ದಾಖಲೆ ಸಮೇತ ಉತ್ತರ ನೀಡಿದ ಸಿಎಂ

By Aishwarya

Published On:

Follow Us

ತಮ್ಮ ರಾಜಕೀಯ ಬದುಕಿನ ಬಗ್ಗೆ ಮಾತನಾಡಿದ ಸಿಎಂ 1983 ರಲ್ಲಿ ಶಾಸಕನಾದೆ 1984 ರಲ್ಲಿ ನಾನು ಮಂತ್ರಿಯಾದವನು. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇವತ್ತಿನವರೆಗೂ ನನ್ನ ವಿರುದ್ಧ ಒಂದು ಕಪ್ಪು ಚುಕ್ಕೆ ಕೂಡ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದು ಹೇಳಿದರು.

ವಿಧಾನ ಸೌಧ ಆವರಣದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಬಿಜೆಪಿ ಜೆಡಿಎಸ್ ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ನವರು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ವಿಧಾನಸೌಧದಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಎರಡು ವಾರಗಳ ಕಾಲ ಮುಂಗಾರು ಅಧಿವೇಶನವನ್ನು ಕರೆದಿದ್ದೇವೆ. ರಾಜ್ಯದ ಸಮಸ್ಯೆಗಳ ಬಗ್ಗೆ ವಿಪಕ್ಷದವರು ಸದನದಲ್ಲಿ ಚಕಾರ ಎತ್ತಲಿಲ್ಲ. ರಾಜ್ಯದ ಪ್ರವಾಹದ ಬಗ್ಗೆ ವಿಪಕ್ಷದವರು ಯಾವುದೇ ಚರ್ಚೆ ಮಾಡಲಿಲ್ಲ. ಸರ್ಕಾರಕ್ಕೆ ಮಸಿ ಬಳಿಯಲು ಧರಣಿ ಮಾಡಿದ್ದಾರೆಂದು ಇದರಿಂದ ಗೊತ್ತಾಗುತ್ತದೆ. ಅವರು ವಿರೋಧ ಪಕ್ಷದ ಕೆಲಸವನ್ನು ಮಾಡುತ್ತಿಲ್ಲ. ದ್ವೇಷದ ಸೇಡಿನ ರಾಜಕಾರಣಕ್ಕೆ ಅಧಿವೇಶನ ಬಳಸಿಕೊಂಡಿದ್ದಾರೆ ಎಂದರು

ದಾಖಲೆಗಳ ಸಮೇತ ಉತ್ತರಿಸಿದ ಸಿಎಂ

ಬಿಜೆಪಿ ಮತ್ತು ಜೆಡಿಎಸ್ ವಿವಾದ ಅಲ್ಲದ್ದನ್ನು ಕೃತಕವಾಗಿ ವಿವಾದವನ್ನಾಗಿಸಲು ಬಿಜೆಪಿ+ಜೆಡಿಎಸ್ ಪಾರ್ಲಿಮೆಂಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ+ಜೆಡಿಎಸ್ ರಾಜ್ಯದ ಜನರಿಂದ ದಾಖಲೆಗಳನ್ನು ಮರೆ ಮಾಚಿ ಆಡಿದ ಜಂಟಿ ಕಪಟತನಕ್ಕೆ ದಾಖಲೆಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಾವೇನು ಇಂಥಾ ಜಾಗದಲ್ಲೇ ನಿವೇಶನ ಕೇಳಿಲ್ಲ. ಬಿಜೆಪಿಯವರ ಅವಧಿಯಲ್ಲೇ ಅವರೇ ನಿರ್ಣಯ ಕೈಗೊಂಡು ಕೊಟ್ಟಿರುವ ನಿವೇಶನ ಇದು. ಮತ್ತೇಕೆ ರಾಜ್ಯದ ಜನತೆಯ ಮುಂದೆ ಸುಳ್ಳು ಹೇಳಿ ಸಿಕ್ಕಿಕೊಳ್ಳುತ್ತಿದ್ದೀರಿ. ಕುಟುಂಬದಲ್ಲಿ ಅನ್ಯೋನ್ಯರಾಗಿದ್ದವರನ್ನು ಪರಸ್ಪರ ಎತ್ತಿ ಕಟ್ಟಿ ಮನೆ ಮುರುಕ ರಾಜಕಾರಣ ಮಾಡಿದರೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಸಹಿಸಲ್ಲ. ಇದರಲ್ಲಿ ನನ್ನದಾಗಲಿ, ನಮ್ಮ ಪತ್ನಿಯವರದ್ದಾಗಲಿ, ನಮ್ಮ ಬಾಮೈದುನನ ಪಾತ್ರ ಎಲ್ಲಿದೆ ಹೇಳಿ? ಎಂದು ಸಿದ್ದರಾಮಯ್ಯ ಅವರು ದಾಖಲೆಗಳನ್ನು ಮುಂದಿಟ್ಟಿದ್ದಾರೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow