Dog Meat Found In Bengaluru: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ರಾಜಸ್ಥಾನದಿಂದ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದ ಮಟನ್ ಮಾಂಸದ ಬಾಕ್ಸ್ಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. 90 ಬಾಕ್ಸ್‌ಗಳಲ್ಲಿ ಬರೋಬ್ಬರಿ 2500 ಕೆಜಿ ಮಾಂಸ ಬೆಂಗಳೂರಿಗೆ ಬಂದಿದ್ದು, ಇದು ಕುರಿ ಮಾಂಸವಲ್ಲ ನಾಯಿ ಮಾಂಸ ಎಂದು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆರೋಪಿಸಿದ್ದಾರೆ.
ಇದೇ ವೇಳೆ ಸ್ಥಳಕ್ಕಾಗಮಿಸಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಜೊತೆಗೂ ವಾಕ್ಸಮರ ನಡೆಸಿದ್ದಾರೆ. ಆರೋಪ ಅಲ್ಲಗಳೆದಿರುವ ಅಬ್ದುಲ್ ರಜಾಕ್, 2 ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತೆ. ಇವತ್ತು 2,000 ಕೆಜಿ ಮಾಂಸ ಬಂದಿದೆ. 12 ವರ್ಷದಿಂದ ಈ ವ್ಯವಹಾರ ನಡೀತಿದೆ. ರಾಜಸ್ಥಾನ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ, ಅದನ್ನ ನಾಯಿ ಅಂತಿದ್ದಾರೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡ್ತೇನೆ ಅಂದಿದ್ದಾರೆ. ಅಬ್ದುಲ್ ರಜಾಕ್ ಸಂಬಂಧಿ ಮಾಂಸ ಸಾಗಾಟದ ಲೈಸೆನ್ಸ್ ಪಡೆದಿದ್ದಾರೆ.
ಪ್ರತಿ ದಿನ ಇಂಥಾ ಬಾಕ್ಸ್‌ನಲ್ಲಿ ಮಾಂಸ ತರಲಾಗ್ತಿದೆ. ಎಲ್ಲಿಂದಲೋ ಮಾಂಸ ತರಲಾಗ್ತಿದೆ, ಇದಕ್ಕೆ ಯಾವ ಲೈಸನ್ಸೂ ಇಲ್ಲ ಅಂತ ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ. ಮಾರುಕಟ್ಟೆಗೆ ಕೊಡುವ ವೇಳೆ ಇದಕ್ಕೆ ನಾಯಿ ಮಾಂಸ ಸೇರಿಸ್ತಾರೆ, ಇಲ್ಲಿ ತಂದಿರುವ ಎಲ್ಲಾ ಬಾಕ್ಸ್ ಗಳನ್ನೂ ಓಪನ್ ಮಾಡಬೇಕು ಅಂತ ಪುನೀತ್ ಕೆರೆಹಳ್ಳಿ ಆಗ್ರಹಿಸಿದ್ರು. ನಮ್ಮ ಕಾರ್ಯಕರ್ತ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಪುನೀತ್ ಕೆರೆಹಳ್ಳಿ ಆರೋಪ ಮಾಡಿದ್ದಾರೆ.
ಇನ್ನು ವಿಚಾರ ತಿಳಿದು ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಆಗಮಿಸಿದ್ರು. ಬಾಕ್ಸ್ ನಲ್ಲಿದ್ದ ಮಾಂಸದ ಸ್ಯಾಂಪಲ್ ಪಡೆದಿದ್ದಾರೆ. ಮಾಂಸದ ಗುಣಮಟ್ಡ ಹಾಗೂ ಮಾಂಸ ದೃಢೀಕರಣಕ್ಕಾಗಿ ಸ್ಯಾಂಪಲ್ ಪಡೆದಿದ್ದು, ರಾಜ್ಯ ಆಹಾರ ಸುರಕ್ಷಿತೆ ಹಾಗೂ ಗುಣಮಟ್ಟ ಪ್ರಾಧಿಕಾರಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದರು.