Paris Olympics 2024: ಒಲಿಂಪಿಕ್ಸ್ಗೆ ಅಧಿಕೃತ ಚಾಲನೆ ಸಿಕ್ಕ ಮೊದಲ ದಿನವೇ ಶೂಟಿಂಗ್‌ನಲ್ಲಿ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಭಾರತದ ಶೂಟರ್ ಮನು ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ವೈಯಕ್ತಿಕ ವಿಭಾಗದ ಅರ್ಹತೆ ಸ್ಫರ್ಧೆಯಲ್ಲಿ 580 ಅಂಕಗಳನ್ನು ಕಲೆಹಾಕುವ ಮೂಲಕ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಮನು ಭಾಕರ್ ಆರು ಸುತ್ತಿನಲ್ಲಿ ಕ್ರಮವಾಗಿ, 97, 97, 98, 96, 96 ಮತ್ತು 96 ಅಂಕಗಳನ್ನು ಕಲೆಹಾಕಿದರು. ಮೊದಲ ಎರಡು ಸುತ್ತಿನಲ್ಲಿ ಭರ್ಜರಿ ಪ್ರದರ್ಶನದಿಂದಾಗಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದರು. ಇದೀಗಾ ಫೈನಲ್ ಪ್ರವೇಶ ಪಡೆದಿದ್ದು ಅವರ ಮೇಲೆ ಪದಕ ಗೆಲ್ಲುವ ನಿರೀಕ್ಷೆ ಹೆಚ್ಚಾಗಿದೆ.
ಶೂಟರ್ ಮನು ಭಾಕರ್ ಫೈನಲ್ ತಲುಪುವುದರೊಂದಿಗೆ ಪ್ಯಾರಿಸ್‌ನಲ್ಲಿ ಭಾರತಕ್ಕೆ ಮೊದಲ ಪದಕದ ಭರವಸೆ ಮೂಡಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅಂದರೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಇದೇ ಸ್ಪರ್ಧೆಯಲ್ಲಿ ಭಾಕರ್ 12 ನೇ ಸ್ಥಾನ ಗಳಿಸಿದ್ದರು. ಆದರೆ ಈಗ ಪದಕದ ರೇಸ್‌ನಲ್ಲಿದ್ದಾರೆ.
ಇದೀಗ ಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಮನು ಭಾಕರ್ ಈಗ ಜುಲೈ 28 ರಂದು ನಡೆಯಲ್ಲಿರುವ ಪದಕ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಈ ಫೈನಲ್ ಸುತ್ತು ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ನಡೆಯಲ್ಲಿದೆ. ಇದರಲ್ಲಿ ಮನು ಅವರು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆದ ಹಂಗೇರಿಯ ಆಟಗಾರ್ತಿ ಮೇಜರ್ ವೆರೋನಿಕಾ ಮತ್ತು ಎರಡನೇ ಸ್ಥಾನ ಪಡೆದ ಹೊ ಯೆ ಜಿನ್ ಅವರಿಂದ ಕಠಿಣ ಪೈಪೋಟಿ ಎದುರಿಸಲಿದ್ದಾರೆ.