IND vs SL 2nd T20: ಶ್ರೀ ಲಂಕ ವಿರುದ್ಧದ ಟಿ20 ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿಡಿಸುವ ಮೂಲಕ ಭಾರತ ತಂಡ ಸರಣಿಯನ್ನು 3-0 ಅಂತರದಿಂದ ಗೆದ್ದಿಕೊಂಡಿದೆ.
ಶ್ರೀಲಂಕದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಶ್ರೀಲಂಕಾಗೆ 138 ರನ್‌ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ 20 ಓವರ್ ಅಂತ್ಯಕ್ಕೆ ಅಷ್ಟೇ ರನ್ ಬಾರಿಸಿತು. ಹೀಗಾಗಿ ಪಂದ್ಯ ಸೂಪರ್ ಓವರ್ಗೆ ಹೋಯಿತು. ಇಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, ಭಾರತಕ್ಕೆ 3 ರನ್ ಟಾರ್ಗೆಟ್ ನೀಡಿತು.
ಸೂರ್ಯಕುಮಾರ್ ಯಾದವ್ ಸೂಪರ್ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಶುಭಮನ್ ಗಿಲ್ (39), ರಿಯಾನ್ ಪರಾಗ್ (26) ಹಾಗೂ ವಾಷಿಂಗ್ಟನ್ ಸುಂದರ್ (25) ಅವರ ನಿರ್ಣಾಯಕ ರನ್‌ಗಳ ಕೊಡುಗೆಯಿಂದ ನಿಗದಿತ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 137 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 138 ರನ್‌ಗಳ ಗುರಿ ನೀಡಿತ್ತು.
ಮಹೇಶ್ ತಿಕ್ಷಣ ಮಾರಕ ದಾಳಿ ನಡೆಸಿ 3 ವಿಕೆಟ್ ಪಡೆದರೆ, ವಹಿಂದು ಅಸರಂಗ 2 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಶ್ರೀಲಂಕಾ ತಂಡಕ್ಕೆ ಪಾಥುಮ್ ನಿಸ್ಸಾಂಕಾ (26) ಮತ್ತು ಕುಶಾಲ್ ಮೆಂಡಿಸ್ ಮೊದಲ ವಿಕೆಟ್ ಗೆ (58) ರನ್ ಜೊತೆಯಾಟದಿಂದ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಎರಡನೇ ವಿಕೆಟ್ ಗೆ ಕುಶಾಲ್ ಮೆಂಡಿಸ್ ಮತ್ತು ಕುಶಾಲ್ ಪೆರೆರಾ (52) ರನ್ ಜೊತೆಯಾಟದ ಮೂಲಕ ತಂಡದ ಗೆಲುವು ಖಚಿತಪಡಿಸಿದರು. ಅದರೆ ಕೊನೆಯಲ್ಲಿ ಅರೆಕಾಲಿಕ ಸ್ಪಿನ್ನರ್ ಗಳಾಗಿ ಕಣಕ್ಕಿಳಿದ ಸೂರ್ಯಕುಮಾರ್ ಮತ್ತು ರಿಂಕು ಸಿಂಗ್ ತಲಾ 2 ವಿಕೆಟ್ ಪಡೆದು ಶ್ರೀ ಲಂಕಾ ತಂಡವನ್ನು ಕಟ್ಟಿ ಹಾಕಿದರು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಸ್ಪಿನ್ನರ್ ರವಿ ಬಿಶ್ನೋಯಿ ದಾಳಿಗೆ ತತ್ತರಿಸಿ 4 ಎಸೆತಗಳಲ್ಲಿಯೇ 2 ವಿಕೆಟ್ ಕಳೆದುಕೊಂಡು 1 ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಭಾರತ ತಂಡ ಮಹೇಶ್ ತಿಕ್ಷಣ ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟರು.