Karnataka landslide: ರಾಜ್ಯದ ಹಲವೆಡೆ ಗುಡ್ಡ ಕುಸಿತ: 12 ಮಂದಿ ಸಾವು, ಅಪಾಯದ ಮುನ್ಸೂಚನೆ ನೀಡಿದ ವರದಿ

By Aishwarya

Published On:

Follow Us

Karnataka landslide: ದೇಶದೆಲ್ಲೆಡೆ ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಕೇರಳ ರಾಜ್ಯದ ವೈನಾಡಿನಲ್ಲಿ ಭೂಕುಸಿತದಿಂದಾಗಿ 250ಕ್ಕೂ ಹೆಚ್ಚು ಮಂದಿ ಮತಪಟ್ಟಿದ್ದಾರೆ. ಹೀಗಿರುವಾಗಲೇ ರಾಜ್ಯದಲ್ಲಿ ಭೂಕುಸಿತದ ಬಗ್ಗೆ ಬೂತಜ್ಞರು ಆತಂಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಕರ್ನಾಟಕದಲ್ಲಿ ಈ ವರ್ಷ ಜುಲೈ ಅಂತ್ಯದವರೆಗೆ 46 ಭೂಕುಸಿತಗಳಿಂದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಭೂ ವಿಜ್ಞಾನಿಗಳು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗಬಹುದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಡಳಿತಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಒಟ್ಟು ಡೇಟಾವನ್ನು ಒಗ್ಗೂಡಿಸಲಾಗಿದ್ದು, ಭೂಕುಸಿತದ ಘಟನೆಗಳು ಈ ವರ್ಷದಲ್ಲಿ ಹೆಚ್ಚಾಗುತ್ತಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೂ ಕುಸಿತಗಳಿಗೆ ರಸ್ತೆ ಕಾಮಗಾರಿಗಳು ಮತ್ತು ಇತರ ಮೂಲಸೌಕರ್ಯದ ಯೋಜನೆಗಳು, ನಗರೀಕರಣ ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 2006ರಿಂದ ಇಲ್ಲಿಯವರೆಗೆ ಒಟ್ಟು 1,541 ಭೂಕುಸಿತಗಳು ಉಂಟಾಗಿ 101 ಮಂದಿ ಸಾವನ್ನಪ್ಪಿದ್ದಾರೆ. ಎಂದು ವರದಿಯ ಮೂಲಕ ತಿಳಿಸಲಾಗಿದೆ

ಕರ್ನಾಟಕದ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಕೊಡಗು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಭೂ ಕುಸಿತಗಳು ಕಂಡು ಬಂದಿದೆ. ಕರ್ನಾಟಕದಲ್ಲಿ ಒಟ್ಟು‌ 31,261,42 ಚದುರ ಕಿಲೋಮೀಟರ್ ಪ್ರದೇಶವು ಭೂಕುಸಿತಕ್ಕೆ ಒಳಗಾಗುತ್ತದೆ ಎಂದು ಜಿಯೋ ಲಾಜಿಕಲ್ ಸರ್ವೆ ಆಫ್ ಇಂಡಿಯಾ (GIS) ಮಾಹಿತಿ ಬಹಿರಂಗಪಡಿಸದೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow