India vs Sri Lanka T20: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೊದಲನೇ ಏಕದಿನ ಪಂದ್ಯ ಟೈ ನಲ್ಲಿ ಅಂತ್ಯಯಾಗಿದೆ. ಶ್ರೀಲಂಕದ ಬಿಗಿ ಬೌಲಿಂಗ್ ದಾಳಿಗೆ ಭಾರತದ ಬ್ಯಾಟರಗಳು ತತ್ತರಿಸಿದರು. ಗೆಲುವಿಗೆ ಬೇಕಿದ್ದ 1 ರನ್ ಗಳಿಸುವಲ್ಲಿ ಟೀಂ ಇಂಡಿಯಾ ವಿಫಲವಾಗಿ ಗೆಲ್ಲುವ ಹಂತದಲ್ಲಿದ್ದ ಪಂದ್ಯವನ್ನು ಭಾರತ ತಂಡವು ಸುಲಭವಾಗಿ ಕೈಚಲ್ಲಿತು.
ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಶ್ರೀಲಂಕಾ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 47.5 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟಾಯಿತು. ಈ ಮೂಲಕ ಕೊನೆ ಹಂತದಲ್ಲಿ ಗೆಲ್ಲುವ ಪಂದ್ಯವನ್ನು ಭಾರತ ಡ್ರಾ ಮಾಡಿಕೊಂಡಿದೆ.
ಮೊದಲು ಬ್ಯಾಟ್ ಆಯ್ಕೆ ಮಾಡಿದ ಶ್ರೀಲಂಕಾ ತಂಡ 8 ವಿಕೆಟ್ ಕಳೆದುಕೊಂಡು 230 ರನ್ ಕಲೆಹಾಕಿತು. ತಂಡದ ಪರ ಯುವ ಆಲ್ ರೌಂಡರ್ ದುನಿತ್ ವೆಲ್ಲಾಲಗೆ ಅತ್ಯುತ್ತಮ ಇನ್ನಿಂಗ್ಸ್ ಆಡಿ (67) ರನ್ಗಳ ಅಮೋಘ ಕೊಡುಗೆ ನೀಡಿದರು. ಇದಲ್ಲದೆ ಪಾತುಂ ನಿಸ್ಸಾಂಕ (56) ರನ್ ಗಳಿಸಿ ತಂಡಕ್ಕೆ ಹೆಚ್ಚಿನ ರನ್ ಗಳಿಸಿದರು. ಕುಸಾಲ್ ಮೆಂಡಿಸ್ (14) ರನ್, ಸದೀರಾ ಸಮರ ವಿಕ್ರಮ (8) ರನ್ ಗಳಿಸಿದರೆ, ನಾಯಕ ಚರಿತ್ ಅಸಲಂಕಾ (14) ರನ್, ಜನಿತ್ ಲಿಯಾನಗೆ (20) ರನ್ ಗಳಿಸಿ ತಂಡಕ್ಕೆ ಸಹಕರಿಸಿದರು.
ಟೀಂ ಇಂಡಿಯಾ ಪರ ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್, ಶಿವಂ ದುಬೆ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದುಕೊಂಡರು.
ಶ್ರೀಲಂಕಾ ನೀಡಿದ್ದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ನಾಯಕ ರೋಹಿತ್ ಶರ್ಮಾ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಆಕ್ರಮಣಕಾರಿ ಆರಂಭ ಮಾಡಿದರು. ಶುಭಮನ್ ಗಿಲ್ 16, ವಿರಾಟ್ ಕೊಹ್ಲಿ 23, ಕೆ.ಎಲ್.ರಾಹುಲ್ 31, ಅಕ್ಷರ್ ಪಟೇಲ್ 33, ಶಿವಂ ದುಬೆ 25 ರನ್ ಗಳಿಸಿದರು.
ಅಂತಿಮವಾಗಿ ತಂಡಕ್ಕೆ 15 ಎಸೆತಗಳಲ್ಲಿ 1 ರನ್ ಅಗತ್ಯವಿತ್ತು ಮತ್ತು 2 ವಿಕೆಟ್ಗಳು ಕೈಯಲ್ಲಿದ್ದವು. ಆದರೆ ಅಸಲಂಕಾ ಸತತ ಎಸೆತಗಳಲ್ಲಿ ಶಿವಂ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಔಟ್ ಮಾಡುವ ಮೂಲಕ ಪಂದ್ಯವನ್ನು ಟೈನಲ್ಲಿ ಮಾಡುವುದರಲ್ಲಿ ಯಶಸ್ವಿಯಾದರು.
ಶ್ರೀಲಂಕಾ ಪರ ವನಿಂದು ಹಸರಂಗ ಹಾಗೂ ಚರಿತ್ ಅಸಲಂಕಾ ತಲಾ 3 ವಿಕೆಟ್ ಪಡೆದರು. ದುನಿತ್ ವೆಲ್ಲಲಾಗೆ 2 ಹಾಗೂ ಅಸಿತ ಫೆರ್ನಾಂಡೋ, ಅಕಿಲ ದನಂಜಯ ತಲಾ 1 ವಿಕೆಟ್ ಪಡೆದುಕೊಂಡರು.