ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ (Instagram), ವಾಟ್ಸಾಪ್ (WhatsApp), ಯೂಟ್ಯೂಬ್(YouTube)ಗಳನ್ನು ಬಾಂಗ್ಲಾದೇಶದ ಸರ್ಕಾರವು ದೇಶಾದ್ಯಂತ ನಿಷೇಧ ಮಾಡಿದೆ.
ಬಾಂಗ್ಲಾದೇಶದಲ್ಲಿ ಮೆಟಾ ಕಂಪನಿಯ Instagram ಟಿಕ್ ಟಾಕ್, ವಾಟ್ಸಾಪ್, ಯೂಟ್ಯೂಬ್ ಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆಗಸ್ಟ್ 2 ರಂದು ಬಾಂಗ್ಲಾದೇಶದ ಸರ್ಕಾರವು ಈ ನಿರ್ಧಾರ ಘೋಷಿಸಿದ್ದು, ಗ್ಲೋಬಲ್ ಐಸ್ ನ್ಯೂಸ್ ತನ್ನ ಅಧಿಕೃತ ಎಕ್ಸ್ ಖಾತೆಯ ಮೂಲಕ ನಿಷೇಧವನ್ನು ಕುರಿತು ವರದಿ ಮಾಡಿ, ಶುಕ್ರವಾರದಿಂದ ಈ ಸಾಮಾಜಿಕ ಜಾಲತಾಣಗಳನ್ನು ಬಾಂಗ್ಲಾದೇಶದಾದ್ಯಂತ ಬಳಸಲು ಆಗುತ್ತಿಲ್ಲ ಎಂದು ಪ್ರಕಟಿಸಿದೆ.
2024 ರ ಬಾಂಗ್ಲಾದೇಶ ಕೋಟಾ ಸುಧಾರಣೆ ಚಳುವಳಿಯ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ಆಗಸ್ಟ್ 2ರಂದು ಮಧ್ಯಾಹ್ನ 12:15 ರ ಸುಮಾರಿನಿಂದ ಮೊಬೈಲ್ ನೆಟ್‌ವರ್ಕ್‌ಗಳ ಮೂಲಕ ಮೆಟಾದ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುತ್ತಿಲ್ಲ ಎಂದು ವರದಿಯಾಗಿದೆ.