ರಾಜಧಾನಿ ಬೆಂಗಳೂರಿನಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಆರೋಪ ತಿಳಿದು ಬಂದಿದೆ.
ಹೊಟ್ಟೆ ನೋವಿನಿಂದ ನೆರಳಾಡುತ್ತಿದ್ದ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಪೋಷಕರಿಗೆ ಆಘಾತವೇ ಎದುರಾಗಿತ್ತು. ಯಾಕೆಂದರೆ ಶಾಲೆಗೆ ಹೋಗುತ್ತಿದ್ದ 15 ವರ್ಷದ ಮಗಳು ಗರ್ಭಿಣಿಯಾಗಿದ್ದಳು. ಈ ಪ್ರಕರಣವು ಡಿ.ಜೆ ಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿದ್ದ ಸಾದ್ ಮುಸೈಬ್ ಎಂಬಾತನು ಬಾಲಕಿಯನ್ನು ನಂಬಿಸಿ, ಮನವೂಲಿಸಿ ತನ್ನ ಮನೆಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಾಲಕಿಯನ್ನು ಆರೋಪಿ ಸಾದ್ ಮನೆಗೆ ಕರೆದೊಯ್ದು ಆತನ ತಾಯಿ ಹಾಗೂ ಸಹೋದರಿಗೆ ಪರಿಚಯಿಸಿ ನಂಬಿಸಿದ್ದ. ನಂತರ ಪದೇ ಪದೇ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ವಿಷಯ ತಿಳಿದ ಪೋಷಕರು ಆತನ ಮನೆಗೆ ಹೋಗಿ ವಿಚಾರಿಸಿದಾಗ ನಿಮ್ಮ ಮಗಳನ್ನು ಬಿಡುವುದಿಲ್ಲ ಎಂದು ಹಲ್ಲೆ ನಡೆಸಿದ್ದ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಗೆ ಬರುವ ಅಮಾಯಕ ಹೆಣ್ಣು ಮಕ್ಕಳನ್ನು ಇದೇ ರೀತಿ ಬಳಸಿಕೊಂಡಿದ್ದಾನೆ. ಎಲ್ಲರ ಪರವಾಗಿ ತಾನೇ ಮುಂದೆ ಬಂದು ದೂರು ನೀಡಿದ್ದಾನೆ ಎಂದಿದ್ದಾರೆ. ಸದ್ಯ ಬಾಲಕಿ ತಂದೆಯ ದೂರಿನ ಅನ್ವಯ ಡಿ.ಜೆ ಹಳ್ಳಿಯ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.