70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ನಿರೀಕ್ಷೆಯಂತೆ ಕನ್ನಡದ ಕಾಂತಾರ ಹಾಗೂ ಕೆಜಿಎಫ್ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕನ್ನಡದಲ್ಲಿ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದ 4ನೇ ಕಲಾವಿದರಾಗಿ ರಿಷಬ್ ಶೆಟ್ಟಿ ಹೊರಹೊಮ್ಮಿದ್ದು, ಹೊಂಬಾಳೆ ಅತ್ಯುತ್ತಮ ಚಿತ್ರಗಳನ್ನು ನೀಡುವ ಪ್ರೊಡಕ್ಷನ್ ಹೌಸ್ ಆಗಿ ಹೊರಹೊಮ್ಮಿದೆ.
National Film Awards 2024
70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಕರ್ನಾಟಕಕ್ಕೆ ಅರ್ಥಾತ್ ಕನ್ನಡ ಚಿತ್ರರಂಗಕ್ಕೆ ಒಟ್ಟು 7 ಪ್ರಶಸ್ತಿಗಳು ಲಭಿಸಿವೆ. ಫೀಚರ್ ಫಿಲ್ಮ್ಸ್ ವಿಭಾಗದಿಂದ ಕನ್ನಡಕ್ಕೆ ಬಂದ 4 ಪ್ರಶಸ್ತಿಗಳ ಪೈಕಿ 2 ಪ್ರಶಸ್ತಿಗಳು ‘ಕೆಜಿಎಫ್: ಚಾಪ್ಟರ್ 2’ ಪಾಲಾದರೆ, 2 ಪ್ರಶಸ್ತಿಗಳು ‘ಕಾಂತಾರ’ ಚಿತ್ರಕ್ಕೆ ಲಭಿಸಿವೆ. ಈ ಎರಡೂ ಚಿತ್ರಗಳನ್ನ ನಿರ್ಮಿಸಿರೋದು ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು.
ಕೆಜಿಫ್, ಕಾಂತಾರ, ಕನ್ನಡಕ್ಕೆ ಈ ಬಾರಿ ಒಟ್ಟು 7 ಪ್ರಶಸ್ತಿ
ಕೆಜಿಎಫ್, ಕಾಂತಾರ ಚಿತ್ರವನ್ನು ಹೊರತುಪಡಿಸಿ ನಾನ್ ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಕನ್ನಡ ಚಿತ್ರರಂಗಕ್ಕೆ ಒಟ್ಟು 3 ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಸಂಕಲನಕ್ಕ ಪ್ರಶಸ್ತಿಗೆ ಮಧ್ಯಂತರ ಚಿತ್ರದ ಸುರೇಶ್ ಅರಸ್ (ಎಡಿಟರ್) ಭಾಜನರಾಗಿದ್ದಾರೆ. ಬೆಸ್ಟ್ ಡೆಬ್ಲ್ಯೂ ಫಿಲ್ಡ್ ಆಫ್ ಎ ಡೈರೆಕ್ಟರ್ ಮಧ್ಯಂತರ ಚಿತ್ರದ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಅವರಿಗೆ ಲಭಿಸಿದೆ. ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಚಲನಚಿತ್ರ ಪ್ರಶಸ್ತಿ ಕನ್ನಡದ ರಂಗ ವೈಭೋಗ ಚಿತ್ರದ ಪಾಲಾಗಿದೆ. ಈ ಚಿತ್ರವನ್ನ ಸುನೀಲ್ ಪುರಾಣಿಕ್ ನಿರ್ಮಿಸಿ, ನಿರ್ದೇಶಿಸಿದ್ದಾರೆ.ಸ್ಯಾಂಡಲ್ವುಡ್ಗೆ ಒಟ್ಟು 7 ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದ್ದು, ಬಂಪರ್ ಎಂದೇ ಹೇಳಬಹುದಾಗಿದೆ.