ಲೋಕಸಭಾ ಚುನಾವಣೆ ಫಾಲಿತಾಂಶದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ 3.ರೂ ಹೆಚ್ಚಳ ಮಾಡುವುದರಿಂದ ವಾಹನ ಸವಾರರಿಗೆ ಶಾಕ್ ನೀಡಿದೆ.
ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪ್ರಕಾರ ಪೆಟ್ರೋಲ್ ಬೆಲೆಯಲ್ಲಿ ಲೀಟರ್ ಗೆ 3 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್ ಬೆಲೆಯಲ್ಲಿ 3 ರೂ 02 ಪೈಸೆ ದಿಡೀರ್ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಪೆಟ್ರೋಲ್ ದರ ಲೀಟರ್ ಗೆ 104 ರೂ ಹಾಗೂ ಡೀಸೆಲ್ ಒಂದು ಲೀಟರ್ ಗೆ 92 ರೂ ಗೆ ಏರಿಕೆಯಾಗಿದೆ.
ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ಸರಕು ಸಾಗಾಣಿಕೆ ವೆಚ್ಚ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಜೂ. 15 ರಂದು ರಾಜ್ಯ ಹಣಕಾಸು ಇಲಾಖೆಯು ಹೊರಡಿಸಿರುವ ಅಧಿಸೂಚನೆಯಲ್ಲಿ ಬೆಲೆ ಏರಿಕೆ ತಕ್ಷಣದಲ್ಲೇ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ಇಂಧನ ಬೆಲೆಯಲ್ಲಿನ ಹೆಚ್ಚಳವು ಈ ಹಣಕಾಸು ವರ್ಷದಲ್ಲಿ ಸುಮಾರು 2,500 ರೂ- 2,800 ಕೋಟಿಗಳನ್ನು ಸಂಗ್ರಹಿಸಲು ಸಹಾಯಮಾಡುತ್ತದೆ ಎಂದು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮನಿ ಕಂಟ್ರೋಲ್ ಗೆ ತಿಳಿಸಿದ್ದಾರೆ ನೆರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಇಂಧನ ಮೇಲೆ ಇನ್ನೂ ಕಡಿಮೆ ಇದೆ.
ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕೋವಿಡ್ 19 ನಂತರ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಲು ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 13.30 ರೂ ಹಾಗೂ ಡೀಸೆಲ್ ಬೆಲೆಯನ್ನು ಲೀಟರ್ ಗೆ 19.40 ರೂ ಗಳನ್ನು ಹೆಚ್ಚಿಸಿತ್ತು.
ಲೋಕಸಭಾ ಚುನಾವಣೆಯ ನಡುವೆ ಮಾದರಿ ನೀತಿ ಸಂಹಿತೆಯಿಂದಾಗಿ ಆದಾಯ ಸಂಗ್ರಹಣೆಯಲ್ಲಿ ಕುಂಠಿತಗೊಂಡಿದ್ದು, ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವು ದಿನಗಳ ಹಿಂದೆ ಅಷ್ಟೇ ಪರಿಶೀಲನ ಸಭೆ ನಡೆಸಿ ಆದಾಯ ಸಂಗ್ರಹ ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಗ್ಯಾರೆಂಟಿ ನಿಧಿಗೆ ಹೆಚ್ಚುವರಿ ಆದಾಯ ಗಳಿಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಆಸ್ತಿಗಳ ಮಾರ್ಗದರ್ಶನ ಮೌಲ್ಯವನ್ನು 15-30 ಪ್ರತಿಶತದಷ್ಟು ಹೆಚ್ಚಿಸಿದೆ. ಭಾರತದಲ್ಲಿ ನಿರ್ಮಿಸಲ್ಪಡುವ ಮಧ್ಯದ ಮೇಲೆ 20 ಪ್ರತಿಶತದಷ್ಟು ಹೆಚ್ಚುವರಿ ಅಬಕಾರಿ ಸುಂಕವನ್ನು, ಎಲ್ಲಾ ಸ್ಲ್ಯಾಬ್ ಗಳ ಮೇಲೆ ಮತ್ತು ಎಇಡಿ ಯನ್ನು ಬಿಯರ್ ಗಳ ಮೇಲೆ ವಿಧಿಸಿತ್ತು. ಸರ್ಕಾರವು ಹೊಸದಾಗಿ ನೋಂದಾಯಿಸಲಾದ ಸಾರಿಗೆ ವಾಹನಗಳ ಮೇಲೆ 3 ಪ್ರತಿಶತ ಹೆಚ್ಚುವರಿ ಸೆಕ್ಸ್ ಅನ್ನು ವಿಧಿಸಿತು ಮತ್ತು 25 ಲಕ್ಷಕ್ಕಿಂತ ಹೆಚ್ಚಿನ EV ಗಳ ಮೇಲೆ ಜೀವಿತಾವಧಿ ತೆರಿಗೆಯನ್ನು ಪರಿಚಯಿಸಿತು.
2024-25 ರ ಬಜೆಟ್ ಸಿದ್ದರಾಮಯ್ಯನವರ 15 ನೇ ಬಜೆಟ್ ಆಗಿದ್ದು, ಈ ಹಣಕಾಸು ವರ್ಷದಲ್ಲಿ ವಾರ್ಷಿಕ ಸಾಲವು 1 ಲಕ್ಷ ಕೋಟಿ ರೂ. ಗಳನ್ನು ಮೀರಿರುವುದು ಬಹುಶಃ ಇದೇ ಮೊದಲ ಬಾರಿ ಎನ್ನಬಹುದು.