ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆಯ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಕುರಿತು ಕಿಚ್ಚ ಸುದೀಪ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿತ್ರರಂಗದಿಂದ ನಟ ದರ್ಶನ್ ರವರನ್ನು ಬ್ಯಾನ್ ಮಾಡುವುದು ನಂತರದ ವಿಚಾರ ಈಗ ಮೊದಲು ರೇಣುಕಾಸ್ವಾಮಿ ಮನೆಯವರಿಗೆ ನ್ಯಾಯ ಒದಗಿಸಬೇಕು. ಕಾನೂನಿನ ಅಡಿಯಲ್ಲಿ ತನಿಖೆಯು ಸರಿಯಾದ ಕ್ರಮದಲ್ಲಿ ನಡೆಯುತ್ತಿದೆ ಯಾರು ತಪ್ಪಿತಸ್ಥರೂ ಇದ್ದಾರೆ ಅವರಿಗೆ ಶಿಕ್ಷೆ ಆಗಲಿ ಎಂದರು.
ನಾನು ಅವರ ಪರ ಇವರ ಪರ ಇಂದು ಮಾತನಾಡುವುದು ತಪ್ಪಾಗುತ್ತದೆ, ಯಾವುದೇ ತಪ್ಪಾಗಿರಲಿ ಅನ್ಯಾಯದವರಿಗೆ ನ್ಯಾಯ ಸಿಗುವುದು ಮುಖ್ಯ ಈ ಕೆಲಸದಲ್ಲಿ ಪೊಲೀಸರು ಮತ್ತು ಮಾಧ್ಯಮವು ಸರಿಯಾದ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ನೇಹ ಬೇರೆ ನ್ಯಾಯ ಬೇರೆ ನಾನು ಮೊದಲಿನಿಂದಲೂ ಯಾವ ವಿಚಾರಕ್ಕೂ ಮಾತನಾಡುವುದಿಲ್ಲ, ಚಿತ್ರರಂಗದಲ್ಲಿ ನಾನು ಕೂಡ ಒಂದು ಭಾಗ ಈಗ ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಅಂಟುಕೊಂಡಿದೆ. ಆರೋಪಕ್ಕೆ ನ್ಯಾಯ ಒದಗಿಸುವ ಮೂಲಕ ಚಿತ್ರರಂಗಕ್ಕೆ ಕ್ಲೀನ್ ಚಿಟ್ ನೀಡಬೇಕು ಎಂದರು.
ಅನೇಕರ ಶ್ರಮ ನೂರಾರು ವರ್ಷಗಳ ಇತಿಹಾಸ ಕನ್ನಡ ಚಿತ್ರರಂಗಕ್ಕಿದೆ, ಒಂದು ಪ್ರಕರಣದಿಂದ ಕಪ್ಪು ಚುಕ್ಕಿ ಬರುವುದು ನಮಗೂ ಇಷ್ಟ ಇಲ್ಲ ಅಂತಿಮವಾಗಿ ನ್ಯಾಯಾಲಯವು ಆರೋಪಿಗಳನ್ನು ನಿರ್ಧರಿಸುತ್ತದೆ, ಇಲ್ಲಿ ನಾವು ನಿರ್ಧರಿಸುವುದು ಸರಿ ಕಾಣುವುದಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಯಾರೇ ಏನೇ ಮಾಡಿದರು ಕನ್ನಡ ಚಿತ್ರರಂಗದ ಹೆಸರು ಕೇಳಿ ಬರುತ್ತಿದೆ. ಇಂತಹ ಅನಿರೀಕ್ಷಿತ ಬೆಳವಣಿಗೆಗಳನ್ನು ನೋಡಿದರೆ ಚಿತ್ರರಂಗಕ್ಕೂ ಕೂಡ ನ್ಯಾಯ ಸಿಗಬೇಕಿದೆ. ಬಾಳಿ ಬದುಕಬೇಕೆಂದ ರೇಣುಕಾಸ್ವಾಮಿ ಅವರ ಕೊಲೆ ನಡೆಯಬಾರದಿತ್ತು, ಚಿತ್ರರಂಗದಿಂದ ನಿಷೇಧ ಮಾಡುವುದಕ್ಕಿಂತ ಈ ಕೊಲೆಗೆ ನ್ಯಾಯ ಸಿಗುವುದು ಮುಖ್ಯ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.