ಇಂತಹ ಕ್ರೌರ್ಯವನ್ನು ಹಿಂದೆಂದೂ ನಾನು ನೋಡಿರಲಿಲ್ಲ – ಸಚಿವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಸಿಎಂ

By Aishwarya

Published On:

Follow Us

ನನ್ನ ನಡೆದ ರಾಜ್ಯ ಸಚಿವ ಸಂಪುಟದಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಕ್ಕತ್ ಸೌಂಡ್ ಮಾಡಿದೆ. ಇಂತಹ ಕ್ರೌರ್ಯವನ್ನು ಹಿಂದೆಂದೂ ನಾನು ನೋಡಿರಲಿಲ್ಲ ಎಂದು ಹೇಳುವ ಮೂಲಕ ನಟ ದರ್ಶನ್ ಮತ್ತು ಗಳತಿ ಪವಿತ್ರ ಗೌಡ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ಸಚಿವ ಸಂಪುಟ ಸಭೆ ಆರಂಭಕ್ಕೂ ಮುನ್ನವೇ ಪ್ರಕರಣದ ಕುರಿತು ಮಾತನಾಡಿದ ಸಿಎಂ “, ‘ಇಂತಹ ಪ್ರಕರಣ ಕಂಡು ಭಾರೀ ಅಚ್ಚರಿಗೆ ಒಳಗಾಗಿದ್ದೇನೆ. ಇಂಥಾ ಕೃತ್ಯ ಹಿಂದೆಂದೂ ನೋಡಿಯೇ ಇರಲಿಲ್ಲ. ಈ ಪ್ರಕರಣದ ಬಗ್ಗೆ ಶಾಸಕರು ಅಥವಾ ಸಚಿವರು, ಯಾರೇ ಆಗಲಿ ತುಟಿ ಬಿಚ್ಚಬೇಡಿ. ಪರ-ವಿರೋಧದ ಚರ್ಚೆಗಳು ಬೇಡ” ಎಂದರು.

ಈ ಪ್ರಕರಣದ ಕುರಿತು ನಟ ದರ್ಶನ್ ರವರನ್ನು ಬಚಾವ್ ಮಾಡಲು ಕೆಲವು ಸಚಿವರು ಸಿಎಂ ಮೇಲೆ ಒತ್ತಡ ತರುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಪೊಲೀಸರ ಪರವಾದ ಮಂಡಿಸುತ್ತಿರುವ ವಕೀಲರಾದ SSP ಪ್ರಸನ್ನ ಕುಮಾರ್ ರವರನ್ನು ಈ ಪ್ರಕರಣದಿಂದ ದೂರ ಇರುವಂತೆ ಅನೇಕ ರಾಜಕಾರಣಿಗಳು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದ, ಕಾರಣ ನೆನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರಿಗೆ ಸಿಎಂ ಈ ಪ್ರಕರಣದ ಬಗ್ಗೆ ಶಾಸಕರು ಆಗಲಿ ಸಚಿವರು ಆಗಲಿ ತುಟಿ ಬಿಚ್ಚುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಟ ದರ್ಶನ್ ಹಾಗೂ ಗೆಳತಿ ಪವಿತ್ರ ಗೌಡ ಪ್ರಕರಣವು ಅಂತಿಮ ಅಂತದಲ್ಲಿದ್ದು ಈಗಾಗಲೇ ಕೆಲವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ನಟ ದರ್ಶನ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ವಿಚಾರಣೆ ಮುಂದುವರೆದಿದೆ. ಇದೇ ಸಮಯದಲ್ಲಿ ಶಾಸಕರು ಹಾಗೂ ಸಚಿವರು ಪೊಲೀಸರ ಮೇಲೆ ದರ್ಶನ್ ಹೆಸರನ್ನು ಪ್ರಕರಣದಿಂದ ಕೈ ಬಿಡುವಂತೆ ಒತ್ತಡ ಹಾಕುತ್ತಿದ್ದರು. ಈ ವಿಷಯದ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಆದ ನಂತರ ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣದಲ್ಲಿ ಯಾವ ಶಾಸಕರು ಆಗಲಿ ಸಚಿವರು ಆಗಲಿ ತಲೆ ಹಾಕುವುದಿಲ್ಲ. ನ್ಯಾಯಾಂಗವು ಎಲ್ಲರಿಗೂ ನ್ಯಾಯವನ್ನು ಒದಗಿಸಿಕೊಡುತ್ತದೆ ತನಿಖೆಯು ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಯಾರು ಒತ್ತಡ ಹಾಕಿದರೂ ನಾನು ಮಣಿಯುವುದಿಲ್ಲ ಎಂದರು.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow