India Vs Bangladesh: ಟಿ20 ವಿಶ್ವಕಪ್ ನ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ 50 ರನ್ ಗಳಿಂದ ಭರ್ಜರಿ ಜಯವನ್ನು ದಾಖಲಿಸಿಕೊಂಡಿದೆ. ಈ ಮೂಲಕ ರೋಹಿತ್ ಪಡೆಯು ಟಿ20 ವಿಶ್ವಕಪ್ ಸಮಿಫೈನಲ್ ನತ್ತ ತನ್ನ ಹೆಜ್ಜೆಯನ್ನು ಇಟ್ಟಿದೆ.
ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿ 196 ರನ್ ಗಳ ಟಾರ್ಗೆಟ್ ಅನ್ನು ಬಾಂಗ್ಲಾದೇಶಕ್ಕೆ ನೀಡಿತು.
ಈ ಗುರಿಯನ್ನು ಬೆನ್ನುತ್ತಿದ್ದ ಬಾಂಗ್ಲಾದೇಶವು ಟೀಮ್ ಇಂಡಿಯಾ ಬೋಲಿಂಗ್ ದಾಳಿಗೆ ನಲುಗಿ, 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ 50 ರನ್ ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತ್ತು.
ಟೀಮ್ ಇಂಡಿಯಾ ಪರವಾಗಿ ಅದ್ಭುತ ಬೋಲಿಂಗ್ ಪ್ರದರ್ಶನ ನೀಡಿದ ಕುಲದೀಪ್ ಯಾದವ್, ಕೇವಲ 10 ಮತ್ತು ರನ್ ನೀಡಿ 3 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಉಳಿದಂತೆ ಅಷ್೯ದೀಪ್ ಸಿಂಗ್ ಹಾಗೂ ಜಸ್‌ಪ್ರೀತ್ ಬುಮ್ರಾ ತಲೆ 2 ವಿಕೆಟ್ ಪಡೆದುಕೊಂಡರೆ, ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ರನ್ ಅಡಿಪಾಯ ಹಾಕಿಕೊಟ್ಟರು. 11 ಎಸೆತಗಳಲ್ಲಿ (23) ರನ್ ಗಳಿಸಿದ ರೋಹಿತ್ ಶರ್ಮ ಔಟ್ ಆಗುವ ಮೂಲಕ ಟೀಮ್ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿತು. ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ ಒಟ್ಟು (37) ರನ್ ಸಿಡಿಸಿ ಸಮಾಧಾನಕರ ಪ್ರದರ್ಶನ ತೋರಿದರು.
ನಂತರ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಮೊದಲ ಬಾಲ್ ಗೆ ಸಿಕ್ಸರ್ ಸಿಡಿಸಿ ತಮ್ಮ ಎರಡನೇ ಬಾಲ್ ನಲ್ಲಿ ಕೀಪರ್ ಗೆ ಕ್ಯಾಚ್ ನೀಡುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದರು. ರಿಷಭ್ ಪಂತ್ 24 ಎಸೆತಗಳಲ್ಲಿ ಒಟ್ಟು 36 ರನ್, ಶಿವಂ ದುಬೆ 24 ಎಸೆತಗಳಿಗೆ 34 ರನ್, ನಂತರ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 27 ಬಾಲ್ ಗಳಲ್ಲಿ (50) ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ 196 ರನ್‌ಗಳ ಗಳಿಸುವಲ್ಲಿ ಸಹಕರಿಸಿದರು.
ಬಾಂಗ್ಲಾ ಪರ ಬೌಲಿಂಗ್‌ನಲ್ಲಿ ರಿಶಾದ್ ಹುಸೇನ್ ಹಾಗೂ ತಂಝೀಮ್ ಹಸನ್ ಸಾಕಿಬ್ ತಲಾ 2 ವಿಕೆಟ್ ಗಳಿಸಿದರೆ, ಶಾಕಿಬುಲ್ ಹಸನ್ 1 ವಿಕೆಟ್ ಪಡೆದುಕೊಂಡರು.