Saptami Gowda Audio: ಯುವ ವಿಚ್ಛೇದನ ಪ್ರಕರಣ; ಸಪ್ತಮಿ ಗೌಡ ಆಡಿಯೋ ವೈರಲ್

By Aishwarya

Published On:

Follow Us

Saptami Gowda Audio Viral: ಸದ್ಯ ‌‌ ಸ್ಯಾಂಡಲ್ ವುಡ್ ನಲ್ಲಿ ಯುವರಾಜ್ ಕುಮಾರ್ ಮತ್ತು ಶ್ರೀದೇವಿ‌ ದಂಪತಿ ವಿಚ್ಛೇದನ‌‌ದ‌ ಪ್ರಕರಣ‌ ಎಲ್ಲೆಡೆ ಚರ್ಚೆ‌ ಆಗುತ್ತಿದೆ. ಇವರಿಬ್ಬರ ವಿಚ್ಛೇದನಕ್ಕೆ ಕಾಂತರಾ ಬೆಡಗಿ ನಟಿ ಸಪ್ತಮಿ ಗೌಡ ಕಾರಣ ಇಂದು ಸ್ವತಃ ಶ್ರೀದೇವಿಯವರೇ ಆರೋಪಿಸಿದ್ದರು. ಈ ಕುರಿತು ನಟಿ ಸಪ್ತಮಿ ಗೌಡ ಮಾನನಷ್ಟ ಮೊಕದ್ದಮೆ ಸಲ್ಲಿಸಿ ತಮ್ಮ ಹೆಸರು ಉಲ್ಲೇಖಿಸಬಾರದಂತೆ ನ್ಯಾಯಾಲಯದಿಂದ ಆದೇಶವನ್ನು ಕೂಡಾ ತಂದರು. ಆದರೆ ಇದೀಗ ನಟಿಸಪ್ತಮಿ ಗೌಡ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಹಾಗಾದರೆ ಈ ಆಡಿಯೋದಲ್ಲಿ ಏನಿದೆ ಎಂಬುದರ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ.

ನಟಿ ಸಪ್ತಮಿ ಗೌಡ ನಟ ಇವರ ರಾಜಕುಮಾರ ಜೊತೆ ಸಂಬಂಧವಿದೆ ಎಂದು ಶ್ರೀದೇವಿಯವರು ಆರೋಪಿಸಿದ್ದರು. ಸಂಬಂಧದ ಕುರಿತು ಶ್ರೀದೇವಿಯವರು ಯುವ ಶೂಟಿಂಗ್ ಸೆಟ್ ನಲ್ಲಿ ಒಮ್ಮೆ ಬಂದು ಜಗಳ ಮಾಡಿದ್ದರು ಎಂದು ಮಾತುಗಳು ಕೇಳಿ ಬರುತ್ತಿವೆ. ಈ ಕಾರಣಕ್ಕಾಗಿ ಯುವ ಸಿನಿಮಾದ ನಿರ್ಮಾಪಕರಾದ ಹೊಂಬಾಳೆಯ ವಿಜಯ್ ಕಿಗಂದೂರು ಅವರಗೆ ಬಳಿ ನಟಿ ಸಪ್ತಮಿ ಗೌಡ ಕಳುಹಿಸಿರುವ ಆಡಿಯೋ ನೋಟ್ ಒಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಆಡಿಯೋದಲ್ಲಿ ಏನಿದೆ..?

ಹಾಯ್ ಸರ್ ನಿಮಗೆ ಈಗಾಗ್ಲೇ ವಿಷಯ ಗೊತ್ತಿರುತ್ತೆ ಏನಾಗಿದೆ ಏನು ಅಂತ. ನನ್ನ ಸೈಡ್ ಆಫ್ ದಿ ಸ್ಟೋರಿನೂ ಕೇಳಿ. ನನ್ನಿಂದ ತಪ್ಪಾಗಿಲ್ಲ ಎಂದು ನಾನು ಹೇಳ್ತಿಲ್ಲ. ಖಂಡಿತ ನನ್ನಿಂದ ತಪ್ಪಾಗಿದೆ. ನನ್ನ ಅಮ್ಮನ ಮೇಲೆ ಆಣೆ ಮಾಡಿ ಹೇಳ್ತೀನಿ ಸರ್ ನಾನು ಎಂದಿಗೂ ಸಹ ಗುರುನ (ಯುವ ರಾಜ್‌ ಕುಮಾರ್‌ ಮೂಲ ಹೆಸರು) ಮದುವೆ ಬಿಟ್ಟು ಬಾ ಅಂತ ಯಾವತ್ತೂ ಹೇಳಿಲ್ಲ. ನೀವು ಬೇಕಿದ್ದರೆ ಅವನನ್ನು ಕೇಳಬಹುದು. ಯಾರನಾದರೂ ಕೇಳಬಹುದು. ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ, ಇದೆಲ್ಲ ವರ್ಕೌಟ್ ಆಗಲ್ಲ ಎಂದು. ಇದನ್ನ ವರ್ಕೌಟ್ ಮಾಡು ಇದು ತಪ್ಪಾಗುತ್ತೆ ಬೇಡ ಎಂದು ನಾನು ತುಂಬಾ ಸಲ ಹೇಳಿದೀನಿ’ ಎಂದು ಹೇಳಿದ್ದಾರೆ.

‘ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್​ನಲ್ಲಿ ಆಯ್ತು, ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ, ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ. ಬೇಕಾದರೆ ನನ್ನನ್ನು ಬೈಯ್ಯಿರಿ, ಇಂದು ನಿರ್ಮಾಪಕರ ಬಳಿ ಕ್ಷಮೆಯಾಚನೆ ಮಾಡಿದ್ದಾರೆ.

ಇದು ಯುಗೆ ಮೊದಲ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ಎಲ್ಲರೂ ಕಷ್ಟಪಟ್ಟು ಸಿನಿಮಾವನ್ನು ಮಾಡುತ್ತಿದ್ದೇವೆ ಯಾರಿಗೂ ತೊಂದರೆ ಆಗಬಾರದು ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ’ ಎಂದು ಆಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow