ಕೋಲಾರ ಗೋಲ್ಡ್ ಫೀಲ್ಡ್ (KGF Gold Mines) ಬಹಳ ಹಿಂದಿನ ದಿನಗಳಲ್ಲಿ ಚಿನ್ನದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರವು ಚಿನ್ನದ ಗರಿಗಾರಿಕೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಅನುಮತಿಯನ್ನು ಕೋರಿದ್ದು ರಾಜ್ಯ ಸರ್ಕಾರವು ಗಣಿಗಾರಿಕೆಯನ್ನು ಪ್ರಾರಂಭಿಸಲ ಹಸಿರು ನಿಶಾನೆಯನ್ನು ತೋರಿದೆ.
ಕರ್ನಾಟಕದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾಗಿದ್ದ, ಕೋಲಾರದ ಕೆಜಿಎಫ್ ನಲ್ಲಿ ಚಿನ್ನದ ಗಣಿಗಾರಿಕೆಯು ಬಹಳ ದಿನಗಳ ಹಿಂದೆ ನಿಂತುಹೋಗಿತ್ತು. ಚಿನ್ನದ ಅದಿರಿನ ನಿಕ್ಷೇಪವನ್ನು ಸಂಪೂರ್ಣವಾಗಿ ಹೊರ ತೆಗೆದು ಕೆಜಿಎಫ್ ನ ಗಣಿಯನ್ನು ಬರಿದು ಮಾಡಲಾಗಿತ್ತು. ಆದರೆ ಈಗ ಭಾರತದಲ್ಲಿ ಚಿನ್ನನ ಬೇಡಿಕೆಯನ್ನು ಪೂರೈಸಲು ಕೆಜಿಎಫ್ ನಲ್ಲಿ ಮತ್ತೆ ಗಣಿಗಾರಿಕೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಅನುಮತಿಯನ್ನು ಕೋರಿತು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯನ್ನು ನಡೆಸಿ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿದೆ.
ಕೆಜಿಎಫ್ ಗಣಿಗಾರಿಕೆಯಿಂದ ಹೊರ ತೆಗೆದ 13 ಕಡೆ ಬೆಟ್ಟದಂತೆ ರಾಶಿ ಹಾಕಿರುವ 3226.2 (32,262 ಮಿಲಿಯನ್) ಕೋಟಿ ಮೆಟ್ರಿಕ್ ಟನ್ ತ್ಯಾಜ್ಯ ಧೂಳಿನಿಂದ ಚಿನ್ನ ಸಂಶೋಧಿಸಲು ಕೇಂದ್ರ ಸರಕಾರಕ್ಕೆ ಅನುಮತಿ ದೊರೆತಿದೆ. ಇದರಿಂದ ಕೆಜಿಎಫ್ ಭಾಗದ ಗಣಿ ಧೂಳು ಇರುವ 2479 (1003.4 ಹೆಕ್ಟೇರ್) ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದಂತಾಗಿದೆ. ಈ ಅನುಮತಿಯ ಜೊತೆಗೆ ರಾಜ್ಯ ಸರಕಾರಕ್ಕೆ ಬರಬೇಕಾಗಿದ್ದ 75.24 ಕೋಟಿ ರೂ. ಪಾವತಿಸುವಂತೆ ಬಿಜಿಎಂಎಲ್ ಆಡಳಿತ ಮಂಡಳಿಗೆ ಸೂಚಿಸಲು ಕೋರಿದೆ.
ಕೆಜಿಎಫ್ ಚಿನ್ನದ ಗಣಿಗಾರಿಕೆಯ ಇತಿಹಾಸ
ಶತಮಾನಗಳ ಹಿಂದಿನಿಂದಲೂ ಕೂಡ ಕೆಜಿಎಫ್ ನಲ್ಲಿ ಚಿನ್ನದ ಗಣಿಗಾರಿಕೆಯನ್ನು ಮಾಡಲಾಗುತ್ತಿತ್ತು,ಆದರೆ ಅಗತ್ಯಕ್ಕೆ ತಕ್ಕಂತೆ ಲೋಹಗಳ ತಯಾರಿಕೆಯಲ್ಲಿ ಚಿನ್ನ ಮತ್ತು ಕಬ್ಬಿನದ ಗಣಿಗಾರಿಕೆಯನ್ನು ಮಾಡಲಾಗುತ್ತಿತ್ತು. ಕಾಲ ಕಳೆದಂತೆ ಭಾರತಕ್ಕೆ ಬ್ರಿಟಿಷರು ಬಂದ ಕಾಲದಲ್ಲಿ 1880 ರಿಂದ ಬ್ರಿಟಿಷ್ ಸರ್ಕಾರದ ಅನುಮತಿ ಮೇರೆಗೆ ದೊಡ್ಡ ಪ್ರಮಾಣದಲ್ಲಿ ಗಣಿಗಾರಿಕೆಯು ಕೆಜಿಎಫ್ ನಲ್ಲಿ ಪ್ರಾರಂಭಗೊಂಡಿತು. ಆರಂಭದ ದಿನಗಳಲ್ಲಿ 22,000 ಕಾರ್ಮಿಕರಿಂದ 1900 ರವರೆಗೆ ಅಗಾಧ ಪ್ರಮಾಣದಲ್ಲಿ ಚಿನ್ನದ ಗಣಿಗಾರಿಕೆಯನ್ನು ಬ್ರಿಟಿಷ್ ಸರ್ಕಾರವು ಮಾಡಿತು. ಪ್ರತಿ ಟನ್ ಮಣ್ಣಿಗೆ 47 ಗ್ರಾಂ ಚಿನ್ನದ ನಿಕ್ಷೇಪವು ದೊರೆಯುತ್ತಿತ್ತು ಇದರಿಂದ ಟೈಲರ್ ಕಂಪನಿಯೂ ಭೂಮಿಯನ್ನು ಬಹಳ ಆಳವಾಗಿ ಹಗೆದು ಚಿನ್ನವನ್ನು ಉತ್ಪಾದನೆ ಮಾಡಲಾಗುತ್ತಿತ್ತು.
ಸ್ವತಂತ್ರ ಭಾರತದ ನಂತರ ಕೆಜಿಎಫ್ ಗಣಿಗಾರಿಕೆಯನ್ನು ಮೈಸೂರಿನ ಸರ್ಕಾರಕ್ಕೆ ಒಪ್ಪಿಸಲಾಯಿತು. ನಂತರ 1972ರಲ್ಲಿ ಎಲ್ಲಾ ಖಾಸಗಿ ಉದ್ಯಮಗಳನ್ನು ರಾಷ್ಟ್ರೀಕರಣ ಮಾಡಿದ ಸಮಯದಲ್ಲಿ ಕೆಜಿಎಫ್ ಚಿನ್ನದ ಗಣಿಯು ಕೂಡ ರಾಷ್ಟ್ರೀಕರಣಗೊಂಡಿತು. ಇದರಿಂದ ಚಿನ್ನದ ಗಣಿಯು ಕೇಂದ್ರ ಸರ್ಕಾರದ ಸೌಮ್ಯಕ್ಕೆ ಒಳಪಟ್ಟಿತು, ನಂತರ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ (BGML) ಹೆಸರಿನಲ್ಲಿ 2001 ರ ವರೆಗೂ ಸುಮಾರು 800 ಟನ್ ಚಿನ್ನವನ್ನು ಉತ್ಪಾದನೆ. ಭೂಮಿಯ ಆಳಕ್ಕೆ ಹೋದಂತೆ ಚಿನ್ನದ ನಿಕ್ಷೇಪವು ಕಡಿಮೆಯಾದ ಕಾರಣ ಸರ್ಕಾರವು ಚಿನ್ನದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತು.
ಮತ್ತೆ ಸದ್ದು ಮಾಡಲಿದೆ ಕೆಜಿಎಫ್ ನ ಚಿನ್ನದ ಗಣಿಗಾರಿಕೆ
ಚಿನ್ನದ ಗಣಿಗಾರಿಕೆಯು ಸ್ಥಗಿತಗೊಂಡ ನಂತರ ಸಾಕಷ್ಟು ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದವು ಸರ್ಕಾರದ ಮೇಲೆ ಒತ್ತಡವನ್ನು ಹಾಕಲಾಯಿತು, ಆದರೆ ಇದರ ಕುರಿತು ಸರ್ಕಾರಗಳು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಗಣಿಯಗಾರಿಕೆಯ ಸಚಿವರಾಗಿದ್ದ ಕರ್ನಾಟಕದ ಪ್ರಹ್ಲಾದ್ ಜೋಶಿ ಕೆಜಿಎಫ್ ನಲ್ಲಿ ಚಿನ್ನದ ನಿಕ್ಷೇಪಣೆ ಕುರಿತು ಸರ್ವೇ ನಡೆಸಲು ಸೂಚನೆ ನೀಡಿದರು. ಸರ್ವೆಯ ವರದಿಯಲ್ಲಿ ಕೆಜಿಎಫ್ ನಲ್ಲಿ ಚಿನ್ನದ ಗಣಿಯಲ್ಲಿ ಇರುವ ಮಣ್ಣಿನ ಗುಡ್ಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪನೆಗಳು ಇರುವುದು ತಿಳಿಯಿತು. ಸದ್ಯ ಗಣಿಯಲ್ಲಿ 32 ಮಿಲಿಯನ್ ಟನ್ ಅಷ್ಟು ಮಣ್ಣಿನ ಗುಡ್ಡೆಗಳಿದ್ದು ಇದನ್ನು ಸಂಸ್ಕರಿಸಿದರೆ 32,000 ಕೆಜಿ ಚಿನ್ನವು ದೊರೆಯಲಿದೆ ಎಂದು ಅಂದಾಜು ಮಾಡಲಾಗಿದೆ. ಇದರಿಂದ ಸುಮಾರು 500 ಕಾರ್ಮಿಕರಿಗೆ ಕೆಲಸ ದೊರೆತಂತಾಗುತ್ತದೆ ಕೆಜಿಎಫ್ ನಲ್ಲಿ ಮತ್ತೆ ಗಣಿಗಾರಿಕೆಯು ಸದ್ದು ಮಾಡಲಿದೆ.