ವೃತ್ತಿಪರ ಕೋರ್ಸ್ ಗಳ ಶುಲ್ಕವನ್ನು ಶೇ10% ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಸಕ್ತ ಶಾಲೆಯಿಂದಲೇ ಪರಿಷ್ಕೃತ ಪ್ರವೇಶ ಶುಲ್ಕಗಳು ಅನ್ವಯವಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರವು ಈಗಾಗಲೇ ಒಂದರ ಮೇಲೊಂದು ಬೆಲೆ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರು ಬದುಕು ನಡೆಸುವುದೇ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶ ಶುಲ್ಕದಲ್ಲಿ ಶೇ.10% ರಷ್ಟು ಏರಿಕೆ ಮಾಡಿರುವುದು ಇಂಜಿನಿಯರಿಂಗ್ ಮಾಡುವ ಕನಸು ಕಂಡಿದ್ದ ಅನೇಕ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದ ಏರಿಕೆ ಕೈ ಸುಡುವಂತಿದೆ. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಪ್ರದೇಶ ಶುಲ್ಕದಲ್ಲಿ ಶೇ.10ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಕಾಲೇಜು, ಮೈಸೂರು ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಘಟಕ ಕಾಲೇಜುಗಳ ಶೇಕಡ 50ರಷ್ಟು ಇಂಜಿನಿಯರಿಂಗ್, ಆರ್ಕಿಟೆಕ್ಟರ್, ಸೀಟುಗಳಿಗೆ ₹42,116 ಫುಲ್ಕಾ ನಿಗದಿಪಡಿಸಲಾಗಿದೆ. ಯುವಿಸಿಇಗೆ ₹42,150 ಖಾಸಗಿ ಕಾಲೇಜುಗಳಲ್ಲಿರುವ ಸರ್ಕಾರಿ ಕೋಟದ ಸೀಟುಗಳಿಗೆ ₹76,135 ಮತ್ತು ₹85,596 ನಿಗದಿಮಾಡಲಾಗಿದೆ. ಕಾಮೆಡ್-ಕೆ ಕೋಟದ ಸೀಟುಗಳಿಗೆ ₹1,86,111 ಮತ್ತು ₹2,61,477 ನಿಗದಿಪಡಿಸಿದೆ. ಜೊತೆಗೆ ಅನುದಾನಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರತಿ ವಿದ್ಯಾರ್ಥಿಯಿಂದ ಇತರೆ ಶುಲ್ಕವಾಗಿ ವಾರ್ಷಿಕ 20 ಸಾವಿರ ಮೀರದಂತೆ ಪ್ರತಿ ವರ್ಷದ ಶುಲ್ಕ ಪಡೆಯಲು ಅವಕಾಶ ಕಲ್ಪಿಸಿದೆ.