2023 ನೇ ಸಾಲಿನ ಫಿಲಂಫೇರ್ ಪ್ರಶಸ್ತಿಯ*(Filmfare Award) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕನ್ನಡದ ನಟರು,ನಿರ್ದೇಶಕರು, ನಟಿಯರು ಸೇರಿದಂತೆ 9 ಜನರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ಸಾಲಿನ ಅತ್ಯುತ್ತಮ ನಟ ಮತ್ತು ನಟಿ, ಸಂಗೀತ ನಿರ್ದೇಶಕರು, ನಿರ್ದೇಶಕರು, ಅತ್ಯುತ್ತಮ ಸಿನಿಮಾ ಹಾಗೂ ಸಿನಿಮಾ ತಂತ್ರಜ್ಞಾನರಿಗೆ ಅಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಕಳೆದ ಬಾರಿ ತೆರೆಕಂಡ ಕಾಂತಾರ ಚಲನಚಿತ್ರವು ಕನ್ನಡದ ಫಿಲಂಫೇರ್ ಪ್ರಶಸ್ತಿಯ ಸಿಂಹಪಾಲನ್ನು ಪಡೆದುಕೊಂಡಿದೆ. ನಟ ರಿಷಬ್ ಶೆಟ್ಟಿ ಕಾಂತಾರದ ಅದ್ಭುತ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ. ಚಾರ್ಲಿ-777 ಚಿತ್ರದ ನಿರ್ದೇಶಕನಾಗಿ ಕಿರಣ್ ರಾಜ್ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿ ಕೊಂಡಿದ್ದಾರೆ.
ಇಡೀ ಭಾರತ ಚಿತ್ರರಂಗವನ್ನೇ ಬೆರಗು ಮಾಡಿದ್ದ ಕಾಂತಾರ ಚಲನಚಿತ್ರವು ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿಕೊಂಡಿದೆ. ಈ ಸಿನಿಮಾದ ನಟ ರಿಷಬ್ ಮತ್ತು ನಟಿ ಸಪ್ತಮಿ ಗೌಡ ಅತ್ಯುತ್ತಮ ನಟ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಚಿತ್ರದಲ್ಲಿ ಪೋಷಕ ಪಾತ್ರ ನಿರ್ವಹಿಸಿರುವ ಅಚಿತ್ ಕುಮಾರ್ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆತಿದೆ. ಚಿತ್ರದ ಅತ್ಯುತ್ತಮ ಸಂಗೀತ ನಿರ್ದೇಶನ ಮಾಡಿರುವ ಅಜನೀಶ್ ಬಿ ಲೋಕನಾಥ್, ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ, ಚಿತ್ರದ ವರಾಹ ರೂಪಂ ಹಾಡಿನ ಗಾಯಕ ಸಾಯಿ ವಿಘ್ನೇಶ್ ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಉಳಿದಂತೆ ವಿಮರ್ಶಾತ್ಮಕ ಅತ್ಯುತ್ತಮ ಚಿತ್ರ ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಲಭಿಸಿದೆ. ತಲೆದಂಡೆ ಸಿನಿಮಾದ ನಟಿ ಚೈತ್ರ ಆಚಾರ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಇದೇ ಚಿತ್ರದ ಪೋಷಕ ನಟಿ ಎನ್ ಮಂಗಳ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿದೆ. ವಿ ನಾಗೇಂದ್ರ ಪ್ರಸಾದ್ ರವರ ಬನಾರಸ್ ಚಿತ್ರದ ಬೆಳಕಿನ ಕವಿತೆ ಹಾಡಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ, ವಿಕ್ರಂತ್ ರೋಣ ಚಿತ್ರದ ರಾರಾ ರಕ್ಕಮ್ಮ ಹಾಡಿನ ಗಾಯಕರಾದ ಸುನಿಧಿ ಚೌಹಾನ್ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.