ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಹಾಗೂ ಗೆಳತಿ ಪವಿತ್ರ ಗೌಡ ನ್ಯಾಯಾಲಯವು ನೀಡಿದ್ದ ವಿಚಾರಣೆಯ ಅವಧಿಯು ಇಂದಿಗೆ ಮುಗಿದಿತ್ತು. ಕಾರಣ ನ್ಯಾಯಾಲಯದ ಮುಂದೆ ಆರೋಪಿಗಳನ್ನು ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಪ್ರಕರಣದ A1 ಆರೋಪಿ ಪವಿತ್ರ ಗೌಡ ಜೈಲಿಗೆ ಕಳುಹಿಸಲು ಸೂಚಿಸಲಾಗಿದೆ. ನಟ ದರ್ಶನ್ ಸೇರಿ 6 ಜನ ಆರೋಪಿಗಳನ್ನು ಮತ್ತೆ ವಿಚಾರಣೆಗೆ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಈ ಪ್ರಕರಣದಲ್ಲಿ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು.ಪೊಲೀಸ ಪರ ವಾದ ಮಂಡಿಸಿದ SPP ಪ್ರಸನ್ನ ಕುಮಾರ್ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅರೋಪಿಗಳ ವಿಚಾರಣೆಯು ಮುಗಿದಿದ್ದು, ಇನ್ನೂ ಕೆಲವರನ್ನು ಅಂತಿಮ ಹಂತದ ವಿಚಾರಣೆ ಮಾಡಬೇಕಿದೆ. ಹಾಗಾಗಿ ಪ್ರಕರಣದ A2 ಆರೋಪಿ ನಟ ದರ್ಶನ್, ವಿನಯ್, ಪ್ರದೋಶ್, ಲಕ್ಷ್ಮಣ್, ನಾಗರಾಜ್, ಧನರಾಜ್ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪ್ರಕರಣದ A1 ಆರೋಪಿ ಪವಿತ್ರ ಗೌಡ ಮತ್ತು ಉಳಿದಂತೆ ಎಲ್ಲಾ ಆರೋಪಗಳನ್ನು ಇಂದೇ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.
ದರ್ಶನ್ ಸೇರಿ 5 ಆರೋಪಿಗಳುನ್ನು ಪೊಲೀಸರು ವಶಕ್ಕೆ ನೀಡುವಂತೆ ಕೇಳಿದರು. ರಿಮ್ಯಾಂಡ್ ಅರ್ಜಿ ಸಲ್ಲಿಸಿ ದರ್ಶನ್, ವಿನಯ್, ಪ್ರದೋಷ್, ಲಕ್ಷ್ಮಣ್ , ನಾಗರಾಜ್ ನನ್ನು ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಉಳಿದಂತೆ ಎ1 ಆರೋಪಿ ಪವಿತ್ರಾ ಗೌಡ ಸೇರಿ ಉಳಿದ 12 ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದರು.
ಈ ಪ್ರಕರಣದಲ್ಲಿ ಪೊಲೀಸರ ಪರವಾಗಿ ಚಾಣಾಕ್ಷ ವಕೀಲ ಪಿ. ಪ್ರಸನ್ನ ಕುಮಾರ್ ಅವರು ವಾದಿಸಿದರು. ದರ್ಶನ್ ಪರ ವಕೀಲ ಅನಿಲ್ ಬಾಬು ಮತ್ತು ಪವಿತ್ರಾ ಗೌಡ ಪರ ವಕೀಲ ನಾರಾಯಣ ಸ್ವಾಮಿ ವಾದಿಸಿದರು.