Darshan Arrest: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈನಲ್ಲಿರುವ ನಟ ದರ್ಶನ್ ನಟಿ ರಕ್ಷಿತಾ ಹಾಗೂ ಡೈರೆಕ್ಟರ್ ಪ್ರೇಮ್ ಅವರು ಪರಪ್ಪನ ಅಗ್ರಹಾರದಲ್ಲಿ ಭೇಟಿಮಾಡಿದ ಸಂದರ್ಭದಲ್ಲಿ ಸ್ನೇಹಿತನನ್ನು ನೆನೆದು ಕಾಣಿರಾಕಿದ್ದಾರೆ.
ಬರೋಬ್ಬರಿ ಒಂದು ಗಂಟೆ ಭೇಟಿ ಮಾಡಿ ಬಂದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಹದಿನೈದು ದಿನಗಳಿಂದ ಆಗಿರುವ ಘಟನೆ ದುರದೃಷ್ಟಕರ. ಈ ಪ್ರಕರಣದ ಬಗ್ಗೆ ಬೇಜಾರಿದೆ ಎಂದರು.
ಪ್ರಕರಣ ಇನ್ನು ನ್ಯಾಯಾಲಯದಲ್ಲಿರುವುದರಿಂದ ನಾವು ಈ ಸಂದರ್ಭದಲ್ಲಿ ಮಾತನಾಡುವುದು ತಪ್ಪಾಗುತ್ತದೆ. ಎಂದು ಹೆಚ್ಚಿನ ಮಾಹಿತಿ ನೀಡಲು ಹಿಂದೇಟಾಕಿದರು.
ಇನ್ನು ಪ್ರೇಮ್ ಅವರು ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಕಾನೂನಿಗಿಂತ ಯಾರು ದೊಡ್ಡವರಿಲ್ಲ ಎಂದು ಹೇಳಿದರು.
ಈ ವೇಳೆ ತನ್ನ ಸ್ನೇಹಿತ ದರ್ಶನ್ ಪರಿಸ್ಥಿತಿಯನ್ನು ನೋಡಿ ರಕ್ಷಿತಾ ಅವರು ಕಣ್ಣೀರಾಕಿದ್ದಾರೆ.
ನಟ ದರ್ಶನ್ ಜೈಲು ಸೇರಿದ ನಂತರ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಜೈಲಿಗೆ ಬಂದು ದರ್ಶನ್ ಅವರನ್ನು ಭೇಟಿ ಮಾಡಿ ಹೋಗುತ್ತಿದ್ದಾರೆ. ಚಿತ್ರರಂಗದ ಸಹುದ್ಯೋಗಿಗಳೂ, ದರ್ಶನ್ ಅವರಿಂದ ನೆರವು ಪಡೆದವರು, ಅವರ ಅಭಿಮಾನಿಗಳು ಅವರನ್ನು ನೋಡುವುದಕ್ಕಾಗಿ ಜೈಲಿನತ್ತ ಬರುತ್ತಿದ್ದಾರೆ.
ದರ್ಶನ್ ಅವರು ನಿರ್ದೇಶಕ ಪ್ರೇಮ್ ಜೊತೆಯಲ್ಲಿ ಒಂದು ಸಿನೆಮಾವನ್ನು ಒಪ್ಪಿಕೊಂಡಿದ್ದರು.
More Updates – khnewstimes.com