Sapthami Gowda: ಯುವ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ಸಪ್ತಮಿ ಗೌಡ!

By Aishwarya

Published On:

Follow Us

ದೊಡ್ಮನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಡಿವೋರ್ಸ್ ಎಂಬ ಬಿರುಗಾಳಿ ಬೀಸಿದೆ. ಅದು ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಯುವ ರಾಜ್ ಕುಮಾರ್ ಅವರು ವಿಚ್ಚೆದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೋರೆ ಹೋಗಿದ್ದಾರೆ.

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯುವ ರಾಜ್ ಕುಮಾರ್ ಅವರ ಪತ್ನಿ ಶ್ರೀ ದೇವಿ ಭೈರಪ್ಪ ಅವರು ನಟಿ ಸಪ್ತಮಿ ಗೌಡ ಅವರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದರು. ಈ ಹಿನ್ನೆಲೆ ಕಾಂತರ ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ಶ್ರೀದೇವಿ ಭೈರಪ್ಪ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿ ನ್ಯಾಯಕ್ಕಾಗಿ ಕೋರ್ಟ್ ಮೊರೆಹೋಗಿದ್ದಾರೆ.

ಯುವ ರಾಜ್‌ಕುಮಾರ್‌ ದಾಂಪತ್ಯದಲ್ಲಿ ಬಿರುಗಾಳಿ ಬೀಸಿದ್ದು, ಯುವ ಹಾಗೂ ಶ್ರೀದೇವಿ ಭೈರಪ್ಪ ವೈವಾಹಿಕ ಬದುಕಿನಲ್ಲಿ ಬಿರುಕು ಮೂಡಿದೆ. ಈ ಸಲುವಾಗಿ ವಿಚ್ಛೇದನ ಕೋರಿ ಯುವ ರಾಜ್‌ಕುಮಾರ್‌ ಫ್ಯಾಮಿಲಿ ಕೋರ್ಟ್‌ ಅರ್ಜಿಯನ್ನು ಸಲ್ಲಿಸಿದ್ದಾರೆ. ವಿಚ್ಛೇದನದ ಅರ್ಜಿಯಲ್ಲಿ ಶ್ರೀದೇವಿ ಭೈರಪ್ಪ ವಿರುದ್ಧ ಯುವ ರಾಜ್‌ಕುಮಾರ್ ಗಂಭೀರ ಆರೋಪಗಳನ್ನ ಮಾಡಿದ್ದರು. ತಮಗೆ ತಲುಪಿದ ಲೀಗಲ್ ನೋಟೀಸ್‌ಗೆ ಶ್ರೀದೇವಿ ವಕೀಲರ ಮೂಲಕ ಉತ್ತರ ನೀಡಿದ್ದರು. ತಮ್ಮ ಉತ್ತರದಲ್ಲಿ ಶ್ರೀದೇವಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಪದೇ ಪದೇ ಯುವ ರಾಜ್‌ಕುಮಾರ್‌ – ಸಪ್ತಮಿ ಗೌಡ ನಡುವಿನ ಅಫೇರ್ ಬಗ್ಗೆ ಶ್ರೀದೇವಿ ಗಂಭೀರ ಆರೋಪ ಮಾಡಿದ್ದಾರೆ.

ಯುವ ಹಾಗೂ ಸಪ್ತಮಿ ಗೌಡ ವರ್ಷಗಳಿಂದಲೂ ಸಂಬಂಧವನ್ನು ಹೊಂದಿದ್ದು, ಡಿಸೆಂಬರ್ ತಿಂಗಳಿನಲ್ಲಿ ಭಾರತಕ್ಕೆ ನಾನು ಹಿಂತಿರುಗಿದಾಗ ಹೋಟೆಲ್ ಒಂದರಲ್ಲಿ ಯುವ ಹಾಗೂ ಸಪ್ತಮಿ ಗೌಡ ನೇರವಾಗಿ ಸಿಕ್ಕಿಬಿದ್ದರು. ಅಫೇರ್ ಮುಂದುವರಿಸಲು ಬಲವಂತವಾಗಿ ಓದಿನ ನೆಪದಲ್ಲಿ ನನ್ನನ್ನು ಅಮೆರಿಕಕ್ಕೆ ಕಳುಹಿಸಲಾಯಿತು ಎಂದು ಲೀಗಲ್ ನೋಟಿಸ್ ಗೆ ನೀಡುವ ಉತ್ತರದಲ್ಲಿ ಶ್ರೀದೇವಿ ಭೈರಪ್ಪ ಅವರ ಆರೋಪಿಸಿದ್ದಾರೆ.

ಈ ಕುರಿತು ಎಲ್ಲೆಡೆ ವೈರಲ್ ಆದ ಸುದ್ದಿಯನ್ನು ನೋಡಿ, ಇದೀಗ ನಟಿ ಸಪ್ತಮಿ ಗೌಡ ಶ್ರೀದೇವಿಯವರ ವಿರುದ್ಧ ಮಾನನಷ್ಟ ಮುಖದಮೆಯನ್ನು ಹೂಡಿದ್ದಾರೆ.

ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಬಾರದು ಎಂದು ಶ್ರೀದೇವಿ ಭೈರಪ್ಪ ಅವರ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ಸಪ್ತಮಿ ಗೌಡ ನಿರ್ಭಂಧ ಸಾಧನೆ ನೀಡುವಂತೆ ಮನವಿ ಮಾಡಿದ್ದರು. ವಿಚ್ಛೇದನ ವಿಚಾರದಲ್ಲಿ ನನ್ನ ಹೆಸರನ್ನು ಮಧ್ಯ ತಂದು ಚಾರಿತ್ರ್ಯ ವಧೆ ಮಾಡಲಾಗಿದೆ. ಇದರಿಂದ ನನ್ನ ವೈಯಕ್ತಿಕ ಜೀವನದಕ್ಕೆ ದೊಡ್ಡ ಮಟ್ಟದಲ್ಲಿ ಪೆಟ್ಟು ಬಿದ್ದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಸಪ್ತಮಿ ಗೌಡ ಅವರು ಸಲ್ಲಿಸಿದ್ದ ಮನವಿಗೆ ಒಪ್ಪಿಗೆ ನೀಡಿರುವ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧಕಾಗಣೆ ಆದೇಶಿಸಿದೆ. ಸದ್ಯ ಅಮೇರಿಕಾದಲ್ಲಿರುವ ಶ್ರೀದೇವಿ ಭೈರಪ್ಪ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow