Recharge Price Hike: ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ ಸೇರಿದಂತೆ ಬಹುತೇಕ ಕಂಪನಿಗಳು ಇಂದಿನಿಂದ (ಜುಲೈ 3) ಮೊಬೈಲ್ ರೀಚಾರ್ಜ್ ದರದಲ್ಲಿ 25% ರಿಂದ 30% ರಿಚಾರ್ಜ್ ದರವನ್ನು ಏರಿಕೆ ಮಾಡಲಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಲ್ಲಿದ್ದ ಜನಸಾಮಾನ್ಯರಿಗೆ ಇಂದಿನಿಂದ ಟೆಲಿಕಾಂ ಕಂಪನಿಗಳು ಕೂಡ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸಿವೆ. ಜಿಯೋ ಕಂಪನಿಯು ತನ್ನ ನಿಗದಿತ ಬೆಲೆಯಲ್ಲಿ 12% ರಿಂದ 25% ಹೆಚ್ಚಳ ಮಾಡಿದೆ. ಇನ್ನು ಏರ್ಟೆಲ್ ಕಂಪನಿಯು ಶೇಕಡಾ 10-21 ರ ವ್ಯಾಪ್ತಿಯಲ್ಲಿ ರಿಚಾರ್ಜ್ ಬೆಲೆಯಲ್ಲಿ ಏರಿಕೆ ಮಾಡಿದೆ.
ಹೊಸ ಜಿಯೋ ಪ್ಲಾನ್ ಗಳು (Jio New Recharge Plans)
155 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ 189 ರೂಪಾಯಿಗೆ ಬದಲಾಗಿದ್ದರೂ ವ್ಯಾಲಿಡಿಟಿ ಮಾತ್ರ 28 ದಿನಗಳಿಗೆ ಇರಲಿದೆ. ಇನ್ನು 209 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ 249 ರೂಪಾಯಿ ಆಗಲಿದೆ. ಇದರಲ್ಲಿ 40 ರೂಪಾಯಿ ಏರಿಕೆಯಾಗಿದೆ. ಇದರ ವ್ಯಾಲಿಡಿಟಿ ಕೂಡ 28 ದಿನ ಇರಲಿದೆ.
ಇನ್ನೂ ಡೇಟಾ ಬೆನಿಫಿಟ್ಸ್ ಪ್ಲಾನ್ ಗಳಾದ 28 ದಿನಗಳ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS, ಪ್ರತಿನಿತ್ಯವೂ 1.5GB ಡೇಟಾ ನೀಡುತ್ತಿದ್ದ 239ರೂ ಪ್ಲಾನ್ ಈಗ 299 ಆಗಿದೆ. 84 ದಿನಗಳ ಪ್ರತಿನಿತ್ಯ 1.5GB ಡೇಟಾ ನೀಡುತ್ತಿದ್ದ 666ರೂ ಪ್ಲಾನ್ ಈಗ 799ರೂ ಗೆ ಏರಿಕೆಯಾಗಿದೆ. 15 ರೂಪಾಯಿಗೆ 1GB ಡೇಟಾ ನೀಡುತ್ತಿದ್ದ ಜಿಯೋ ಇದೀಗ 19ರೂ ಗೆ ಏರಿಕೆ ಮಾಡಿದೆ.
ಏರ್ಟೆಲ್ ಹೊಸ ಪ್ಲಾನ್ ಗಳು (Airtel New Recharge Plans)
28 ದಿನಗಳ ವ್ಯಾಲಿಡಿಟಿ ಇದ್ದ ಅನಿಯಮಿತ ವಾಯ್ಸ್ 179ರಿಂದ 199 ರೂಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿಯಾಗಿ 84 ದಿನಗಳ ವ್ಯಾಲಿಡಿಟಿ ಇದ್ದ 455 ರೂ ಪ್ಲಾನ್ ಗೆ 509 ರೂಗೆ ಏರಿಕೆ ಮಾಡಲಾಗಿದೆ. 365 ದಿನಗಳ ಸುದೀರ್ಘ ವ್ಯಾಲಿಡಿಟಿ ಪ್ಲಾನ್ 1,799 ರೂನಿಂದ 1,999 ರೂಗೆ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ.
ಒಟ್ಟಾರೆಯಾಗಿ ಜೀವ ಮತ್ತು ಏರ್ಟೆಲ್ ಸೇರಿದಂತೆ ವಿವಿಧ ಕಂಪನಿಗಳು ತನ್ನ ರಿಚಾರ್ಜ್ ದರದಲ್ಲಿ ಏರಿಕೆ ಮಾಡಿದ್ದು ಜನಸಾಮಾನ್ಯರಿಗೆ ಬೆಲೆ ಏರಿಕೆಯ ಮತ್ತೊಂದು ಪೆಟ್ಟು ಬಿದ್ದಂತಾಗಿದೆ.