ನರೇಂದ್ರ ಮೋದಿ ಪ್ರಧಾನಮಂತ್ರಿಯಾಗ ಪೆಟ್ರೋಲ್ ಬೆಲೆ 72.26 ರೂ ಇತ್ತು, ಆದರೆ ಈಗ 104 ರೂಪಾಯಿ ಆಗಿದೆ. ಡೀಸೆಲ್ ಬೆಲೆಯೂ 67 ಪಾಯಿಂಟ್ 28 ಇತ್ತು ಇದೀಗ 91ರೂ ಆಗಿದೆ. ಈಗ ಕ್ರೂಡ್ ಆಯಿಲ್ ಬೆಲೆ 84 ರೂಪಾಯಿ ಇದೆ 2015ರ ಹಿಂದೆ ಕಚ್ಚಾತೈಲ ಬೆಲೆಯು 50 ರೂ ಇತ್ತು. ಈಗ ಹೇಳಿ ಯಾರ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಪ್ರಶ್ನಿಸುವ ಮೂಲಕ ಖಡಕ್ ಕೌಂಟರ್ ನೀಡಿದರು.
ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಮೂರು ರೂ ಹೆಚ್ಚಳ ಮಾಡಲಾಗಿದೆ. ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಇದೆ ಎಂದು ಹೇಳಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಒಂದು ಗ್ಯಾಸ್ ಸಿಲೆಂಡರ್ ಬೆಲೆ 410 ರೂ ಇತ್ತು, ಅದನ್ನು 1100 ರೂ ಏರಿಕೆ ಮಾಡಲಾಗಿತ್ತು ನಂತರ 805.50 ರೂ ಮಾಡಿದ್ದಾರೆ ಈ ಬೆಲೆಯನ್ನು ಹೆಚ್ಚು ಮಾಡಿದವರು ಯಾರು ಬಿಜೆಪಿ ಸರ್ಕಾರ ಅಲ್ಲವೇ ಜನಪರ ಕಾಳಜಿ ಇದ್ದರೆ ಅಥವಾ ಬಡವರ ಪರವಾಗಿ ಸರ್ಕಾರವಿದ್ದರೆ ಈ ರೀತಿಯ ನಿರ್ಧಾರಗಳನ್ನು ಕೇಂದ್ರ ಸರ್ಕಾರವು ತೆಗೆದುಕೊಳ್ಳುತ್ತಿರಲಿಲ್ಲ ಎಂದರು.
ಕೇಂದ್ರ ಸರ್ಕಾರದ ಜಿಎಸ್‌ಟಿ ತೆರಿಗೆ ಜಾರಿಗೆ ತಂದ ಮೇಲೆ ರಾಜ್ಯ ಸರ್ಕಾರಗಳಿಗೆ ಹೊರತು ಪಡಿಸಿ ಉಳಿದ ವಸ್ತುಗಳಿಗೆ ತೆರಿಗೆಯನ್ನು ಹೆಚ್ಚಿಸುವ ಸ್ವಾತಂತ್ರ್ಯ ಕಡಿಮೆ ಆಗಿತು. ಅಬಕಾರಿ,ತೈಲ, ನೊಂದಣಿ ಮುದ್ರಾಂಕ ತೆರಿಗೆಗಳನ್ನು ಬಿಟ್ಟರೆ ಇನ್ಯಾವುದೇ ತೆರಿಗೆಯನ್ನು ಹೆಚ್ಚು ಮಾಡುವ ಹೆಚ್ಚು ಮಾಡುವ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಬಿಜೆಪಿಯವರು ನಮ್ಮ ಸರ್ಕಾರದ ಗ್ಯಾರೆಂಟಿ ಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ನಾವು ಬೆಲೆ ಏರಿಕೆ ಮಾಡಿರುವುದು ಗ್ಯಾರೆಂಟಿಯ ವಿಚಾರಕಲ್ಲ ರಾಜ್ಯದ ಅಭಿವೃದ್ಧಿ ಕಾರ್ಯಕ್ಕಾಗಿ ತೈಲ ಬೆಲೆಗಳನ್ನು ಹೇಳಿಕೆ ಮಾಡಿದ್ದೇವೆ ಎಂದರು.
ನಾವು ಗ್ಯಾರೆಂಟಿ ಕೊಟ್ಟಿರುವುದು ಎಲ್ಲ ವರ್ಗದ ಜನರಿಗೆ ಬಸ್ಸಿನಲ್ಲಿ ಓಡಾಡಿದರೆ ಆರ್ಥಿಕವಾಗಿ ಸರ್ಕಾರಕ್ಕೆ ಸಹಾಯವಾಗುತ್ತದೆ. 2000 ಹಣ ಫ್ರೀ ಕರೆಂಟ್ ಕೊಟ್ಟರೆ ಬಡ ಜನರಿಗೆ ಸಹಾಯವಾಗುತ್ತದೆ. ಬಿಜೆಪಿಗೆ ಮಾತನಾಡಲು ಬೇರೆ ವಿಷಯವಿಲ್ಲ ಹೀಗಾಗಿ ಹೋರಾಟ ಮಾಡುತ್ತಿದ್ದಾರೆ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಎಂದರೆ ಮಾಡಲಿಲ್ಲ. ಬಿಜೆಪಿಯವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.