ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಳ್ತ ನಿರೂಪಕಿ ಅಪರ್ಣ(Aparna) ನಿಧನರಾಗಿದ್ದಾರೆ. ವೈದ್ಯರು 6 ತಿಂಗಳು ಸಮಯ ಅಷ್ಟೇ, ಕ್ಯಾನ್ಸರ್ ಈಗಾಗಲೇ ಕೊನೆಯ ಹಂತ ತಲುಪಿದೆ ಎಂದು ಹೇಳಿದ್ದರು ಆದರೂ ಅಪರ್ಣ ತನ್ನ ಬಿಟ್ಟು ಹೋರಾಟದಿಂದ ಒಂದುವರೆ ವರ್ಷ ಹೋರಾಡಿದ ಗಟ್ಟಿಗಿತ್ತಿ ಎಂದು ಅಪರ್ಣ ಪತಿ ನಾಗರಾಜು ಹೇಳಿದರು.
ನಿಧನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪತಿ ನಾಗರಾಜ್ “ನಾನು ಮತ್ತು ಅಪರ್ಣ ತುಂಬಾ ಖಾಸಗಿಯಾಗಿ ಜೀವನ ನಡೆಸಿದವರು, ಅಷ್ಟೇ ಖಾಸಗಿ ನಾನು ಅವಳನ್ನು ಬಿಲ್ಕೊಡಲು ಬಯಸುತ್ತೇನೆ. ಆಕೆ ನನಗೂ ಸಲ್ಲುವ ಮುನ್ನ ಇಡೀ ಕರ್ನಾಟಕಕ್ಕೆ ಸಲ್ಲಿಕೆ ಆದವಳು. ಆಕೆಯ ಒಂದು ಕೊನೆಯ ಆಸೆ ಮಾಧ್ಯಮದ ಎದುರು ನಿಂತು ಏನಾಯ್ತು ಎಂದು ಹೇಳು ಎಂದು ಮನವಿ ಮಾಡಿದ್ದಳು. ಎರಡು ವರ್ಷದ ಹಿಂದೆ ಅಪರ್ಣ ಶ್ವಾಸಕೋಶದ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು, ವೈದ್ಯರು ಇದು ಕೊನೆಯ ಹಂತ ಆರು ತಿಂಗಳು ಸಮಯ ಅಷ್ಟೇ ಇರುವುದು ಎಂದು ಹೇಳಿದರು. ಆದರೆ ಅವಳ ಛಲ ಆಟ ಹೋರಾಟದಿಂದ ಗುಣಮುಖಳಾಗುತ್ತೇನೆ ಎಂದು ಒಂದುವರೆ ವರ್ಷ ಕ್ಯಾನ್ಸರ್ ಜೊತೆಗೆ ಜೀವನ ಕಳೆದಳು.
ಈ ಹೋರಾಟದಲ್ಲಿ ನಾವಿಬ್ಬರು ಸೋತಿದ್ದೇವೆ, ಅತ್ಯಂತ ವಿಷಾದದಿಂದ ಈ ಮಾತನ್ನು ನಿಮ್ಮಗಳ ಎದುರು ಇಡುತ್ತಿದ್ದೇನೆ. ಬರುವ ಅಕ್ಟೋಬರ್‌ಗೆ ಅಪರ್ಣಾಗೆ 58 ವರ್ಷ ತುಂಬುತ್ತಿತ್ತು” ಎಂದು ತಿಳಿಸಿದ್ದಾರೆ.