ಜೆಡಿಎಸ್ ಕಾರ್ಯಕರ್ತ ಮೇಲೆ ಜೆಡಿಎಸ್ ನ ವಿಧಾನಪರಿಷತ್ ಸದಸ್ಯರಾದ ಡಾ.ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಅಡಿಯಲ್ಲಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಸಂತ್ರಸ್ತ ನೀಡಿದ ದೂರಿನ್ನು ಆದರಿಸಿ ಐಪಿಸಿ ಕಾಯ್ದೆ ಸಂಖ್ಯೆ 1860ರ ಅಡಿಯಲ್ಲಿರುವ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಬೆದರಿಕೆ) ಅಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಸಂತ್ರಸ್ತ ಯುವಕನು ಇ-ಮೇಲ್ ಮೂಲಕ ಠಾಣೆಯ ಎಸ್ಪಿಗೆ ಮತ್ತು ಡಿಜಿ ಕಚೇರಿಗೆ ದೂರನ್ನು ನೀಡಿದ್ದ. ಇದಕ್ಕೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಕರೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ” ಮೊನ್ನೆಯಿಂದಲೂ ಮಾಧ್ಯಮಗಳಲ್ಲಿ ಪ್ರಕರಣದ ಕುರಿತು ಸುದ್ದಿಯಾಗಿರುತ್ತಿರುವುದನ್ನು ಗಮನಿಸಿದ್ದೇನೆ, ಈ ಪ್ರಕರಣದ ಕುರಿತು ಯಾವುದೇ ಮಾಹಿತಿ ಇಲ್ಲ. ಇದು ಸಂಪೂರ್ಣ ಷಡ್ಯಂತ್ರವಾಗಿದ್ದು, ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಏನಾದರೂ ಮಾಡಿಕೊಳ್ಳಲಿ ಈ ಆರೋಪವನ್ನು ನಾನು ಕಡಾ ಖಂಡಿತವಾಗಿ ತಿರಸ್ಕರಿಸುತ್ತೇನೆ. ಇಂದು ಕಾನೂನಿನ ವ್ಯವಸ್ಥೆ ಇದೆ ಅಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗುತ್ತದೆ. ನನ್ನ ನೆಲದ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ. ಕಾನೂನಿನ ಪ್ರಕಾರ ತನಿಖೆಯಾಗಿ ಸತ್ಯತೆಗಳು ಹೊರಬರಲಿದೆ. ಇದು ಸಂಪೂರ್ಣ ರಾಜಕೀಯ ಷಡ್ಯಂತ್ರವಾಗಿದೆ ಇಂದು ನಾನು ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ನಾನು ಯಾರನ್ನು ದೂರುವುದಿಲ್ಲ ತನಿಖೆ ಪ್ರಗತಿಯಲ್ಲಿದೆ ಸತ್ಯ ಸತ್ಯತೆಗಳು ಶೀಘ್ರವೇ ಹೊರಬರಲಿದೆ ಅವಾಗ ಇಡೀ ರಾಜ್ಯದ ಜನರೇ ನೋಡುತ್ತಾರೆ” ಎಂದರು.
ಈಗಾಗಲೇ ಸೂರಜ್ ರೇವಣ್ಣನ ಸಹೋದರ, ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಅತ್ಯಾಚಾರ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧನದಲ್ಲಿದ್ದಾರೆ. ಈಗ ಅಣ್ಣ ಡಾ. ಸೂರಜ್ ರೇವಣ್ಣ ಅಸಹಜ ಲೈಂಗಿಕ ಪ್ರಕರಣ ಅಡಿಯಲ್ಲಿ ಬಂಧನವಾಗಿದ್ದಾರೆ.