2025ರ IPL ಟೂರ್ನಿಗೂ ಮೊದಲೇ ಕನ್ನಡಿಗ ಕೆ.ಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ಗೆ ಗುಡ್ ಬೈ ಹೇಳುವ ಸಾಧ್ಯತೆ ಇದೆ. ಈ ಕಾರಣ ಮುಂದಿನ IPL ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವನ್ನು ಸೇರಲಿದ್ದಾರೆ ಮತ್ತು ಕ್ಯಾಪ್ಟನ್ ಆಗುವಾಗ ಎಲ್ಲಾ ಅವಕಾಶಗಳಿದೆ ಎಂಬ ಚರ್ಚೆಗಳು ನಡೆಯುತ್ತಿದೆ.
ಸದ್ಯ ಆರ್ಸಿಬಿಯ ನಾಯಕರಾಗಿರುವ ಫಾಫ್ ಡು ಪ್ಲೆಸಿಸ್ ಕಳೆದ 3 ವರ್ಷದಿಂದ ತಂಡ ಮುನ್ನಡೆಸುತ್ತಿದ್ದಾರೆ. 3 ಬಾರಿಯು ತಂಡವನ್ನು ಪ್ಲೇ ಆಫ್ವರಗೆ ಹೋದರು ಕಪ್ ಗೆಲ್ಲಲು ಆಗಿಲ್ಲ. ಅಲ್ಲದೇ ಇವರಿಗಿಗ 40 ವರ್ಷ ತುಂಬಿದ್ದು ಆರ್ಸಿಬಿ ಫ್ರಾಂಚೈಸಿ ಯುವನಾಯಕನಿಗಾಗಿ ಎದುರು ನೋಡುತ್ತಿದೆ. ಆ ಸ್ಥಾನವನ್ನು ಕೆ.ಎಲ್ ರಾಹುಲ್ ಅವರು ತುಂಬಬಹುದು ಎನ್ನಲಾಗುತ್ತಿದೆ. ಅಲ್ಲದೇ ಚೊಚ್ಚಲ ಕಪ್ ಕನ್ನಡಿಗ ರಾಹುಲ್ ಅವರೇ ತಂದು ಕೊಟ್ಟರೇ ಹೊಸ ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಫ್ಯಾನ್ಸ್ ಆಶಯ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್ ಗೊಯಾಂಕ ಅವರು ಕೆಎಲ್ ರಾಹುಲ್ ಅವರ ನಾಯಕತ್ವದ ವಿರುದ್ದ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಈ ಬಗ್ಗೆ ಕೆಎಲ್ ರಾಹುಲ್ ಅಸಮಾಧಾನ ಇರಬಹುದು ಹಾಗೂ ತಂಡವನ್ನು ತೊರೆಯುವ ಮನಸನ್ನು ಹೊಂದಿದ್ದಾರೆ. ಅಂದ ಹಾಗೆ ಲಖನೌ ಸೂಪರ್ ಜಯಂಟ್ಸ್ ತಂಡವನ್ನು KL ರಾಹುಲ್ ತೊರೆದರೆ, ಯಾವ ತಂಡವನ್ನು ಸೇರಬಹುದೆಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳು ಕಾಡುತ್ತಿವೆ.
ಇದಲ್ಲದೆ ಮತ್ತೊಂದು ಕಡೆ ರಿಷಬ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದು ಚೆನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೆಲ್ಲ ಉತ್ತರಕ್ಕಾಗಿ 2025 ಐ ಪಿ ಎಲ್ ಮೆಗಾ ಆಕ್ಷನ್ ವರೆಗೂ ಕಾಯಬೇಕಿದೆ.