T20 WC: ಕಳೆದ ಟೀ20 ವಿಶ್ವ ಕಪ್ ನಲ್ಲಿ ದ್ವಿತೀಯ ಸ್ಥಾನ (ರನ್ನರ್ ಅಪ್) ಪಡೆದಿದ್ದ ಪಾಕಿಸ್ತಾನ ಈ ಬಾರಿ ಕಳಪೆ ಆಟದಿಂದ ತನ್ನ ಕೊನೆಯ ಪಂದ್ಯವನ್ನು ಆಡುವ ಮೊದಲೇ ವಿಶ್ವ ಕಪ್-2024 ಕ್ಕೆ ಬೈ ಹೇಳಿದೆ.
ಟೂರ್ನಮೆಂಟ್ ನ ಆರಂಭದಿನದಲು ಕಳಪೆ ಪ್ರದರ್ಶನ ನೀಡುತ್ತಿರುವ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ತನ್ನ ಟೀ20 ವಿಶ್ವ ಕಪ್ ನ ಕನಸನ್ನು ಗ್ರೂಪ್ ಹಂತದಲ್ಲಿಯೇ ಕೈಬಿಡುವ ಮೂಲಕ ಟೂರ್ನಮೆಂಟ್ ಇಂದ ಔಟ್ ಆಗಿದೆ.
ತನ್ನ ಮೊದಲೆರಡು ಪಂದ್ಯಗಳಲ್ಲಿ ಮೊದಲ ಬಾರಿ ವಿಶ್ವ ಕಪ್ ಆಡುತ್ತಿರುವ ನೂತನ ಯು ಎಸ್ ಎ ತಂಡದ ವಿರುದ್ಧ ಸೋತು ಕ್ರಿಕೆಟ್ ಅಭಿಮಾನಿಗಳ ಅಪಹಾಸ್ಯಕ್ಕೆ ಗುರಿಯಾಗಿತ್ತು. ನಂತರ ಭಾರತದ ವಿರುದ್ಧ ಸೋತು ವಿಶ್ವ ಕಪ್ ಜರ್ನಿಯ ಶೇ. 50 ರಷ್ಟನ್ನು ಕಳೆದುಕೊಂಡಿತು. ಹೀಗಿರುವಾಗ ಪಾಕಿಸ್ತಾನವು ತನ್ನ ಮುಂದಿನ ಟೂರ್ನಮೆಂಟ್ ದಾರಿಗೆ ಬೇರೆ ತಂಡಗಳ ಮೇಲೆ ಅವಲಂಬಿತವಾಗಿ ಭಾರತ ಮತ್ತು ಯು ಎಸ್ ಎ ತಂಡಗಳ ಫಲಿತಾಂಶವನ್ನು ಕಾದು ಕುಳಿತಿತ್ತು.
ಆದರೆ ಇದೀಗ ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಐರ್ಲ್ಯಾಂಡ್ ಮತ್ತು ಯು ಎಸ್ ಎ ಪಂದ್ಯವು ಮಳೆಯಿಂದ ರದ್ದಾಗಿ ಎರಡು ತಂಡವು ತಲಾ ಒಂದೊಂದು ಅಂಕವನ್ನು ಪಡೆದುಕೊಂಡಿವೆ. ಇದರೊಂದಿಗೆ ಅಮೇರಿಕ ತಂಡವು 5 ಅಂಕಗಳೊಂದಿಗೆ ತನ್ನ ಸೂಪರ್ 8 ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.
ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಂಡ ಯು ಎಸ್ ಎ
T20 ವಿಶ್ವ ಕಪ್ ಗೆ ಹಾಗೂ ಕ್ರಿಕೆಟ್ ಜಗತ್ತಿದೆ ವಿನೂತನ ತಂಡವಾಗಿರುವ ಯು ಎಸ್ ಎ ಯು 5 ಅಂಕಗಳನ್ನು ಪಡೆಯುವುದರ ಮೂಲಕ ತನ್ನ ಸೂಪರ್ 8 ರ ಸ್ಥಾನವನ್ನು ಖಚಿತಪಡಿಸಿಕೊಳ್ಳುವುದರ ಮೂಲಕ ಕ್ರಿಕೆಟ್ ಪ್ರೇಮಿಗಳಿಂದ ಸೈ ಎನಿಸಿಕೊಂಡಿದೆ. ಗ್ರೂಪ್ ಎ ನಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಸೋಲಿಸುವುದರ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಬಲಿಷ್ಠ ತಂಡವಾಗಿ ರೂಪುಗೊಳ್ಳಲು ಹೊರಟಿದೆ.
ಈ ಬಾರಿಯ t20 ವಿಶ್ವಕಪ್ ನಥಿತ್ಯ ಕೂಡ ವಹಿಸಿದ್ದ ಅಮೆರಿಕ ತನ್ನ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಒಂದು ಸೋಲು ಹಾಗೂ ಒಂದು ಪಂದ್ಯ ರದ್ದಾಗಿದ್ದರಿಂದ ಐದು ಅಂಕಗಳನ್ನು ಪಡೆದು ಎ ಗುಂಪಿನಲ್ಲಿ ಎರಡನೇ ಸ್ಥಾನವನ್ನು ಪಡೆದು ಕೊಂಡಿದೆ. ಇದರೊಂದಿಗೆ ಅಮೆರಿಕ ತಂಡವು ಸೂಪರ್ 8 ರಲ್ಲಿ ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾ ಹಾಗೂ ಸ್ಕಾಟ್ಲೆಂಡ್ ಅಥವಾ ಇಂಗ್ಲೆಂಡ್ ತಂಡಗಳ ಸವಾಲನ್ನು ಎದುರಿಸಲಿದೆ. ಎ ಗುಂಪಿನ ಅಗ್ರಸ್ಥಾನದಲ್ಲಿರುವ ಭಾರತ ಆಸ್ಟ್ರೇಲಿಯಾ ಅಫ್ಘಾನಿಸ್ತಾನ ಅಥವಾ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.