ಭಾರತದಲ್ಲಿ ಟೆರೇಸ್ ಫಾರ್ಮ್ ಎನ್ನುವುದು ಎಲ್ಲಾ ಜನರ ಹವ್ಯಾಸವಾಗಿ ಬಿಡುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹಸಿರು ವಾತಾವರಣವನ್ನು ಹೆಚ್ಚಿಸಲು ಅಲ್ಲದೆ ಇರುವ ಸ್ಥಳವನ್ನು ಸದುಪಯೋಗಪಡಿಸಿಕೊಳ್ಳಲು ಜನರು ಟೆರೇಸ್ ಫಾರ್ಮಿಂಗ್ ನ ಮೊರೆಹೋಗುತ್ತಿದ್ದಾರೆ.
ಟೆರೇಸ್ ಫಾರ್ ಮಿನ್ ನಲ್ಲಿ ತರಕಾರಿಗಳು ಹಾಗೂ ಹೂ ಬೆಳೆಗಳು ಹೆಚ್ಚಿನ ಪ್ರಸಿದ್ಧಿಯನ್ನು ಹೊಂದಿದ್ದು, ಜನರು ಒಬ್ಬರಿಂದ ಒಬ್ಬರು ಪ್ರೇರೇಪಿತರಾಗಿ ಟೆರೆಸ್ ಫಾರ್ಮಿಂಗ್ ಅನ್ನು ಪ್ರಾರಂಭಿಸುತ್ತಿದ್ದಾರೆ.
ಟೆರೇಸ್ ಫಾರ್ಮಿನಿಂದ ಕೇವಲ ಆಕರ್ಷಣೀಯ ಸ್ಥಳ ನಿರ್ಮಾಣವಲ್ಲದೆ, ಉತ್ತಮ ಆರೋಗ್ಯಕರ ಗಾಳಿ ಹಾಗೂ ವಾತಾವರಣವನ್ನು ನೋಡಬಹುದಾಗಿದೆ. ಕೆಲವು ಜನರು ಟೆರೇಸ್ ಫಾರ್ಮಿನಿಂದ ಹಣವನ್ನು ಸಹ ಗಳಿಸುತ್ತಿದ್ದು, ಇದು ಒಂದು ರೀತಿಯ ವ್ಯಾಪಾರವಾಗಿಯೂ ಸಹ ಜನರಿಗೆ ಸಹಾಯ ಮಾಡುತ್ತದೆ.
ನಗರ ಪ್ರದೇಶಗಳಲ್ಲಿ ಹಸಿರು ಜಾಗವನ್ನು ಹೆಚ್ಚಿಸುವ ಮತ್ತು ತಾಜಾ ಆರೋಗ್ಯಕರ ಆಹಾರ ಒದಗಿಸುವ ಒಂದು ಜನಪ್ರಿಯ ಪ್ರವೃತ್ತಿ ಎಂದರೆ ಅದು ಟೆರಸ್ ಫಾರ್ಮಿಂಗ್. ಭಾರತದಲ್ಲಿ ಹಸಿರು ಕ್ರಾಂತಿಯಾಗಿ ಪರಿವರ್ತನೆಯಾಗುತ್ತಿರುವ ಇದನ್ನು ಜನರು ತಮ್ಮ ಮನೆಯ ಮೇಲಿನ ಮೇಲ್ಚಾವಣಿಗಳನ್ನು ಚೈತನ್ಯಯುತ ತೋಟಗಳಾಗಿ ಪರಿವರ್ತಿಸುತ್ತಿದ್ದಾರೆ.
ಹಾಗಿದ್ದರೆ ಟೆರೇಸ್ ಫಾರ್ಮಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳೇನು?
ಹಸಿರು ವಾತಾವರಣದ ಸೃಷ್ಟಿ: ಜನರು ತಮ್ಮ ಮೇಲ್ಚಾವಣಿಯಲ್ಲಿರುವ ಸ್ಥಳವನ್ನು ಫಾರ್ಮಿಂಗ್ ಆಗಿ ಬದಲಾಯಿಸುವ ಮೂಲಕ ಅಲ್ಲಿ ಹಸಿರು ವಾತಾವರಣವನ್ನು ಸೃಷ್ಟಿ ಮಾಡಬಹುದಾಗಿದೆ. ಇದರಿಂದ ಸಿಗುವ ಉತ್ತಮ ಗಾಳಿ, ಆರೋಗ್ಯಕರ ಪರಿಸರ ಹಾಗೂ ಪರಿಶುದ್ಧ ತರಕಾರಿ ಹಣ್ಣು ಹಾಗೂ ಹೂಗಳನ್ನು ಪಡೆಯಬಹುದಾಗಿದೆ.
ತಾಜಾ ಉತ್ಪನ್ನಗಳು: ತಮ್ಮ ಮನೆಯ ಟೆರೇಸ್ ಮೇಲೆ ಫಾರ್ಮಿಂಗನ್ನು ತೆರೆಯುವುದರಿಂದ ಅಥವಾ ಪ್ರಾರಂಭ ಮಾಡುವುದರಿಂದ ಸ್ವತಃ ತಾವೇ ಬೆಳೆದಂತಹ ತಾಜಾ ಉತ್ಪನ್ನಗಳನ್ನು ಜನರು ಪಡೆಯಬಹುದಾಗಿದೆ. ಇದು ಒಂದು ರೀತಿಯ ಆರೋಗ್ಯಕರ ಉತ್ಪನ್ನ ಎಂದರೆ ತಪ್ಪಾಗಲಾರದು.
ನೆಮ್ಮದಿ ಹಾಗೂ ಒತ್ತಡ ನಿರ್ವಹಣೆಯ ವಾತಾವರಣ ಸೃಷ್ಟಿ : ಟೆರೇಸ್ ಮೇಲೆ ತೋಟದ ನಿರ್ಮಾಣದಿಂದ ಅದರಿಂದ ಸಿಗುವಂತಹ ಪರಿಶುದ್ಧ ಗಾಳಿ ಹಾಗೂ ತಂಪಾದ ವಾತಾವರಣದ ಮೂಲಕ ತಮ್ಮ ಒತ್ತಡವನ್ನು ಕಡಿಮೆ ಮಾಡಿ ನೆಮ್ಮದಿಯ ವಾತಾವರಣವನ್ನು ನಿರ್ಮಾಣ ಮಾಡಬಹುದಾಗಿದೆ.
ಇದಲ್ಲದೆ ಇನ್ನು ಹೆಚ್ಚಿನ ಪ್ರಯೋಜನವನ್ನು ಟೆರೇಸ್ ಫಾರ್ಮಿನಿಂದ ಪಡೆಯಬಹುದಾಗಿದ್ದು, ಇದು ವೈಯಕ್ತಿಕ ಆರೋಗ್ಯದ ಮೇಲೆ ಹೆಚ್ಚಿನ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದಲೇ ಇಂದು ಭಾರತದಾದ್ಯಂತ ಟೆರೇಸ್ ಫಾರ್ಮಿಂಗ್ ಶೀಘ್ರವಾಗಿ ಪ್ರಸಿದ್ಧಿಯನ್ನು ಹೊಂದಿ ಪ್ರತಿಯೊಂದು ಮನೆಯ ಜನರು ಪ್ರಾರಂಭಿಸುವಂತೆ ಪ್ರೇರೇಪಿಸುತ್ತಿದೆ.