Bheema Movie: ಭೀಮ ಸಿನಿಮಾ ಬರೋಬರಿ 400 ಥಿಯೇಟರ್‌ನಲ್ಲಿ ರಿಲೀಸ್! ಆಗಸ್ಟ್ 9ರಂದು‌ ತೆರೆಗೆ‌‌

By Aishwarya

Published On:

Follow Us

Bheema Movie: ದುನಿಯಾ ವಿಜಯ್ ನಟಸಿ ನಿರ್ದೇಶನ ಭೀಮ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ. ಸುಮಾರು 400 ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಹೆಚ್ಚು ಕಡಿಮೆ ಬಂದ್ ಆಗಿರೋ 18 ರಿಂದ 20 ಥಿಯೇಟರ್‌ ಭೀಮನಿಗಾಗಿಯೇ ರೀ-ಓಪನ್ ಆಗುತ್ತಿವೆ. ಇದರ ಜೊತೆಗೆ ಈ ಸಿನಿಮಾ ಆಲ್ ಏರಿಯಾ ಸೋಲ್ಡ್ ಔಟ್ ಆಗಿದೆ. ಅಂದ್ರೆ, ಈ ಚಿತ್ರಕ್ಕೆ ಭಾರೀ ಬೇಡಿಕೆ ಇದೆ ಅನ್ನೋದೇ ಒಟ್ಟು ಅರ್ಥ ಅಂತಲೂ ಹೇಳಬಹುದು.

`ಭೀಮ’ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸಾರ್ಥಕ್ ಈ ಸಿನಿಮಾಗೆ ಬಂಡವಾಳ ಹೂಡಿಸಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸೆಸ್‌ನಲ್ಲಿರುವ ವಿಜಿ “ಭೀಮʼ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಭೀಮ ಸಿನಿಮಾ ಪರ ಭಾಷೆಗೆ ಡಬ್ ಆಗೋದಿಲ್ಲ. ನೇರವಾಗಿಯೇ ಕನ್ನಡದಲ್ಲಿ ಎಲ್ಲೆಡೆ ರಿಲೀಸ್ ಆಗುತ್ತಿದೆ. ಸಿನಿಮಾವನ್ನು ಕರ್ನಾಟಕ ಅಲ್ಲದೇ, ಹೊರ ದೇಶದಲ್ಲೂ ರಿಲೀಸ್ ಮಾಡೋಕೆ ಪ್ಲಾನ್ ಆಗಿದೆ. ಕರ್ನಾಟಕದಲ್ಲಿ ಕೆ.ಆರ್.ಜಿ ಸಂಸ್ಥೆ ಭೀಮ ಚಿತ್ರವನ್ನ ವಿತರಿಸುತ್ತಿದೆ.

ಈ ಹಿಂದೆ ‘ಸಲಗ’ ಚಿತ್ರದಲ್ಲಿ ಸಿದ್ದಿ ಜನಾಂಗದವರು ಹಾಡಿದ ‘ಟಿನಿಂಗ ಮಿಣಿಂಗ’ ಹಾಡು ಜನಪ್ರಿಯವಾಗಿತ್ತು. ಅದೇ ರೀತಿಯ ಹಾಡೊಂದು ‘ಭೀಮ’ ಚಿತ್ರದಲ್ಲೂ ಇದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿಜಯ್‌ , ‘ಈ ಬಾರಿ ನಾಗರಹೊಳೆ ಸಮೀಪದ ಬುಡಕಟ್ಟು ಜನಾಂಗದವರು ‘ಅಮ್ಮಾಳೆ’ ಎಂಬ ವಿಶೇಷ ಹಾಡು ಹಾಡಿದ್ದಾರೆ. ‘ಲೇ ಲೇ ಮುನ್ನ ಲೇ ಲೇ..ಬೂಮ್‌ ಬೂಮ್‌ ಬೆಂಗಳೂರು’ ಎಂಬ ಸಾಲುಗಳಿರುವ ಹಾಡಿನಲ್ಲಿ ಆ ಬುಡಕಟ್ಟು ಜನಾಂಗದವರು ಬೆಂಗಳೂರಿನ ಬಗ್ಗೆ ಹೇಳುವಂತಿದೆ.

ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ,ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ ಭೀಮ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಪ್ರೇಕ್ಷಕರು ಯಾವ ಅಭಿಪ್ರಾಯವನ್ನು ನೀಡುತ್ತಾರೆಂದು ಆಗಸ್ಟ್ 9 ರವರೆಗೆ ಕಾದು ನೋಡಬೇಕಾಗಿದೆ.

About the Author

ನಮಸ್ತೆ, ಐಶ್ವರ್ಯ ಚಟ್ನಹಳ್ಳಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಎಂ.ಎ ಪದವಿ. ಪ್ರಸ್ತುತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಪ್ರೆಂಟಿಸ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಜೊತೆಜೊತೆಗೆ khnewstimes.com ನಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತಿದ್ದೇನೆ.

For Feedback - feedback@khnewstimes.com

Leave a Comment

Follow