ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಭೀಮ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ಕಳೆಯನ್ನು ತಂದುಕೊಟ್ಟಿದೆ. ಶುಕ್ರವಾರ ರಿಲೀಸ್ ಆದ ಸಿನಿಮಾ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕೆಲಸ ಮಾಡಿದೆ. ಸಿನಿಪ್ರಿಯರು ಚಿತ್ರಕಥೆಗೆ ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ವೀಕೆಂಡ್ ಗಳಿಕೆಯಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಆಗಸ್ಟ್ 15 ರಂದು ಸರ್ಕಾರಿ ರಜೆ ಇರುವ ಕಾರಣ ಜನ ಥಿಯೇಟರ್ ಗೆ ಕಾಲಿಡುತ್ತಾರೆ.
Bheema Movie Box Office Collection
ಭೀಮ ಚಿತ್ರವು ಮೊದಲನೆಯ ದಿನವೇ 3.5 ಕೋಟಿ ಕಲೆಕ್ಷನ್ ಮಾಡಿದೆ ಎಂದು Sacnilk ವರದಿ ಮಾಡಿದೆ. ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿದ್ದ ಸಲಗ ಸಿನಿಮಾ ಉತ್ತಮ ಯಶಸ್ಸು ಕಂಡಿತ್ತು. ಆದ ಬಳಿಕ ಮೂರು ವರ್ಷಗಳ ಕಾಲ ತೆಗೆದುಕೊಂಡು ಭೀಮ ಚಿತ್ರವನ್ನು ವೀಕ್ಷಕರ ಮುಂದಿಟ್ಟಿದ್ದಾರೆ. ಈ ಸಿನಿಮಾ ಬೆಂಗಳೂರಿನಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ಬಗ್ಗೆ ತೋರಿಸಲಾಗಿದ್ದು, ಈ ದಿನ ಯುವ ಜನತೆ ಗಾಂಜಾ ಮತ್ತು ಡ್ರಗ್ಸ್ ನಂತಹ ಚಟುವಟಿಕೆಗಳಿಗೆ ಹೇಗೆ ತುತ್ತಾಗುತ್ತಿದ್ದಾರೆ ಅದರಿಂದ ಆಗುವ ತೊಂದರೆಗಳು ಯಾವುವು ಎಂದು ಬಹಳ ಸುಲಭವಾಗಿ ತೋರಿಸಲಾಗಿದೆ. ಈ ಸಿನಿಮಾ ಒಂದು ವರ್ಗ ಇಷ್ಟಪಟ್ಟಿದೆ ಆದರೆ ಅತಿಯಾದ ರೌಡಿಸಂ ಮತ್ತು ಅವಶ್ಯಕತೆಗಳ ಬಳಕೆಯಿಂದ ಫ್ಯಾಮಿಲಿ ಆಡಿಯನ್ಸ್ ವರ್ಗದವರಿಗೆ ಸಿನಿಮಾ ಇಷ್ಟ ಆಗಿಲ್ಲ.
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆಗದೆ ಜನರು ಚಿತ್ರಮಂದಿರಗಳತ್ತ ಬರುವುದನ್ನೇ ನಿಲ್ಲಿಸಿದ್ದರು. ಆದರೆ ಭೀಮ ಚಿತ್ರ ರಿಲೀಸ್ ಆದುದರಿಂದ ಜನರು ಚಿತ್ರಮಂದಿಗಳತ್ತ ಮುಖ ಮಾಡಿದ್ದಾರೆ. ಮೊದಲ ದಿನ ಚಿತ್ರ 3ಪಂಟ 5 ಕೋಟಿ ರೂಪಾಯಿ ಗಳಿಸಿದ್ದು, ಮುಂದಿನ ದಿನಗಳಲ್ಲಿ ಎಷ್ಟು ಗಳಿಕೆ ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ.