Filmfare South 2024: ಫಿಲಂಫೇರ್ ದಕ್ಷಿಣ ಅವಾರ್ಡ್ಸ್ 2024ರ ಸಂಭ್ರಮವು ನಿನ್ನೆ (ಆಗಸ್ಟ್ 3ರಂದು) ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ತೆಲುಗು ತಮಿಳು ಮಲಯಾಳಂ ಭಾಷೆಗಳ ಅತ್ಯುತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಬಾರಿಯ ದಕ್ಷಿಣ ಫಿಲಂ ಫೇರ್ ಪ್ರಶಸ್ತಿಯಲ್ಲಿ ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ನಟಿಸಿರುವ ಸಪ್ತಸಾಗರದ ಆಚೆ ಎಲ್ಲೋ ಸಿನಿಮಾವು ಒಟ್ಟು 6 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಮುಮ್ಮೂಟಿ, ವಿಕ್ರಂ, ಬ್ರಹ್ಮಾನಂದಂ, ಸಿದ್ದಾರ್ಥ, ನಟಿ ಕೀರ್ತಿ ಸುರೇಶ್ ಸೇರಿದಂತೆ ಕನ್ನಡ ಚಲನಚಿತ್ರ ರಂಗದ ಅನೇಕ ನಟ ನಟಿಯರು ಪ್ರಶಸ್ತಿ ಪ್ರಧಾನ ಸಂಭ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳು ನಾಮನಿರ್ದೇಶನಗೊಂಡಿದ್ದವು ಅದರಲ್ಲಿ ಡೇರ್ ಡೆವಿಲ್ ಮುಸ್ತಫಾ, ಕಾಟೇರ, ಕೌಸಲ್ಯ ಸುಪ್ರಜಾ ರಾಮ, ಸಪ್ತಸಾಗರದ ಆಚೆ ಎಲ್ಲೋ ಸಿನಿಮಾಗಳು ನಾಮನಿರ್ದೇಶನಗೊಂಡಿದವು. ಕನ್ನಡ ಚಿತ್ರರಂಗದಲ್ಲಿ ನಟ, ನಟಿ ಮತ್ತು ಸಿನಿಮಾಗಳು, ಸಿನಿ ತಂತ್ರಜ್ಞರಿಗೆ ಅನೇಕ ಪ್ರಶಸ್ತಿ ಒಲಿದು ಬಂದಿದ್ದು, ಅದರ ಪಟ್ಟಿ ಈ ಕೆಳಗಿನಂತಿದೆ.
ದಕ್ಷಿಣ ಫಿಲಂ ಫೇರ್ 2024 ಕನ್ನಡ ಚಿತ್ರರಂಗ ಗಳಿಸಿದ ಪ್ರಶಸ್ತಿಯ ಪಟ್ಟಿ
- ಅತ್ಯುತ್ತಮ ನಟ ಪ್ರಶಸ್ತಿ – ರಕ್ಷಿತ್ ಶೆಟ್ಟಿ( ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ)
- ಅತ್ಯುತ್ತಮ ನಟಿ ಪ್ರಶಸ್ತಿ – ಸಿರಿ ರವಿಕುಮಾರ್( ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ)
- ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ – ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ)
- ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ – ಡೇರ್ ಡೆವಿಲ್ ಮುಸ್ತಫಾ
- ಅತ್ಯುತ್ತಮ ನಟ ವಿಮರ್ಶರಕರ ಆಯ್ಕೆ – ಪೂರ್ಣಚಂದ್ರ ಮೈಸೂರು (ಆರ್ಕೆಸ್ಟ್ರಾ ಮೈಸೂರು ಸಿನಿಮಾ)
- ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ – ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ)
- ಅತ್ಯುತ್ತಮ ಪೋಷಕ ನಟ ಪ್ರಶಸ್ತಿ – ರಂಗಾಯಣ ರಘು (ಟಗರು ಪಲ್ಯ ಸಿನಿಮಾ)
- ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ – ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ ಸಿನಿಮಾ)
- ಅತ್ಯುತ್ತಮ ಹಾಡುಗಳು ಪ್ರಶಸ್ತಿ – ಚರಣ್ ರಾಜ್ (ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ)
- ಅತ್ಯುತ್ತಮ ಗಾಯಕ ಪ್ರಶಸ್ತಿ – ಕಪಿಲ್ ಕಪಿಲನ್ (ನದಿಯೇ ಹಾಡು, ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ)
- ಅತ್ಯುತ್ತಮ ಗಾಯಕಿ ಪ್ರಶಸ್ತಿ – ಶ್ರೀ ಲಕ್ಷ್ಮಿ ಬೆಲೆಮಣ್ಣು (ಕಡಲನು ಕಾಣ ಹೋರಾಟ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ)
- ಅತ್ಯುತ್ತಮ ಹೂಸ ನಟ ಪ್ರಶಸ್ತಿ – ಶಿಶಿರ್ ಬೈಕಾಡಿ ( ಡೇರ್ ಡೆವಿಲ್ ಮುಸ್ತಫ ಸಿನಿಮಾ)
- ಅತ್ಯುತ್ತಮ ಹೊಸ ನಟಿ ಪ್ರಶಸ್ತಿ – ಅಮೃತ ಪ್ರೇಮ್ (ಟಗರು ಪಲ್ಯ ಸಿನಿಮಾ)
- ಜೀವಮಾನ ಸಾಧನೆ ಪ್ರಶಸ್ತಿ – ಹಿರಿಯ ನಟ ಶ್ರೀನಾಥ್