ಕಳೆದ ವಾರವಷ್ಟೇ ಬಿಡುಗಡೆಗೊಂಡು ವಿಶ್ವದಾದ್ಯಂತ ಭರ್ಜರಿ ಪ್ರದರ್ಶನಗೊಂಡು ಮುನ್ನುಗುತ್ತಿರುವ ಕಲ್ಕಿ 2898 AD ಸಿನಿಮಾವನ್ನು ಬಾಲಿವುಡ್ ನ ಸ್ಟಾರ್ ನಟ ರಣವೀರ್ ಸಿಂಗ್(Ranveer Singh) ಅವರು ವೀಕ್ಷಿಸಿ ಕಲ್ಕಿ ಸಿನಿಮಾದಲ್ಲಿನ ಪತ್ನಿ ದೀಪಿಕಾ ಪಡುಕೋಣೆಯವರ ನಟನೆಯನ್ನು ಹಾಡಿ ಹೊಗಳಿದ್ದಾರೆ.
ಸಿನಿಮಾ ರಿಲೀಸ್ ಆಗಿ ಕೆಲವು ದಿನಗಳ ನಂತರ ಪತ್ನಿ ದೀಪಿಕಾ ಪಡುಕೋಣೆ ಜೊತೆಗೆ ವೀಕ್ಷಿಸಿದ್ದಾರೆ ಅಣವೀರ್ ಸಿಂಗ್ ಅವರು ಪತ್ನಿಯ ನಟನೆ ಕಂಡು ಬೆರಗಾಗಿದ್ದಾರೆ. ಕಲ್ಕಿ ಸಿನಿಮಾದ ನಾಯಕ ನಟ ಪ್ರಭಾಸ್, ಅಮಿತಾ ಬಚ್ಚನ್, ಕಮಲ್ ಹಾಸನ್ ಹಾಗೂ ಚಿತ್ರತಂಡವನ್ನು ಹೊಗಳಿ ಇದೇ ಅಲ್ಲವೇ ಸಿಲ್ವರ್ ಸ್ಕ್ರೀನ್ ತಾಕತ್ತು ಎಂದರೆ ಎಂದು ಬಣ್ಣಿಸಿದ್ದಾರೆ.
ಪತ್ನಿಯ ನಟನೆಯ ಬಗ್ಗೆ ಹೆಚ್ಚು ಥ್ರಿಲ್
ಕಲ್ಕಿ ಸಿನಿಮಾದಲ್ಲಿ ದೀಪಿಕಾ ಮಾಡಿರುವಂತಹ ಸಪೋರ್ಟಿಂಗ್ ರೋಡ್ ಹಾಗೂ ಅಮಿತಾ ಬಚ್ಚನ್ ಮಾಡಿರುವಂತಹ ಅಶ್ವತ್ಥಾಮ ಪಾತ್ರಗಳು ಇಡೀ ಸಿನಿಮಾದಲ್ಲಿ ಬಹಳ ಪ್ರಮುಖವಾಗಿವೆ. ಇತರ ಪಾತ್ರಗಳಿಗೆ ಹೋಲಿಸಿದರೆ ಈ ಪಾತ್ರಗಳ ಚರ್ಚೆ ಹೆಚ್ಚು ಎಂದಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಕಲ್ಕಿ ಚಿತ್ರದಲ್ಲಿ ಸುಮತಿ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಇದನ್ನು ವೀಕ್ಷಿಸಿದ ಅಂತಹ ಪತಿ ರಣವೀರ್ ಸಿಂಗ್ ದೀಪಿಕಾ ಅಭಿನಯ ಹೋಲಿಕೆಗೂ ನಿಲುಕದು ಎಂದು ಬಣ್ಣನೆ ಮಾಡಿದ್ದಾರೆ.
ಇನ್ನೂ ಅಮಿತಾ ಬಚ್ಚನ್ ಅವರ ನಟನೆಯ ಬಗ್ಗೆ ಮಾತನಾಡಿದ ಅವರು, ಕಲ್ಕಿ ಸಿನಿಮಾದಲ್ಲಿನ ಅಮಿತಾ ಬಚ್ಚನ್ ಅವರ ನಟನೆಯನ್ನು ಯಾವುದೇ ಒಬ್ಬ ಅಭಿಮನ್ಯು ಸಹ ಮಿಸ್ ಮಾಡಿಕೊಳ್ಳದೆ ನೋಡಿ. ನಾನು ಕೂಡ ಅವರ ಅಭಿಮಾನಿಯಾಗಿದ್ದು ಈ ಚಿತ್ರದಲ್ಲಿ ಅವರ ಅದ್ಭುತ ಅಭಿನಯವನ್ನು ಎಂಜಾಯ್ ಮಾಡಿದ್ದೇನೆ ಎಂದಿದ್ದಾರೆ.
ಇನ್ನು ನಾಯಕನಟ ಡಾರ್ಲಿಂಗ್ ಪ್ರಭಾಸ್, ಕಮಲ್ ಹಾಸನ್ ಕಲ್ಪಿ ಸಿನಿಮಾದ ನಿರ್ದೇಶಕ ನಾಗಶ್ರೀ ಅವರ ಅದ್ಭುತ ಕೆಲಸವನ್ನು ಮೆಚ್ಚಿಕೊಂಡಿರುವ ರಣವೀರ್ ತಾರಾ ಬಳಗವನ್ನು ಕೊಂಡಾಡಿದ್ದಾರೆ.
ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವ ಕಲ್ಕಿ ಸಿನಿಮಾಗೆ ಇನ್ನು ಹೆಚ್ಚಿನ ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.