ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಯಾವ ದೊಡ್ಡ ನಟರ ಸಿನಿಮಾಗಳು ರಿಲೀಸ್ ಆಗಿರಲಿಲ್ಲ, ಆದರೆ ಕನ್ನಡಿಗರ ಪಾಲಿಗೆ ಸೆಪ್ಟೆಂಬರ್ ತಿಂಗಳು ವಿಶೇಷವಾಗಿದೆ ಸಿನಿಪ್ರಿಯರನ್ನು ರಂಜಿಸಲು ಕನ್ನಡದ ಎರಡು ಬಹುನಿರೀಕ್ಷಿತ ಸಿನಿಮಾಗಳು ಬೆಳ್ಳಿ ಪರದೆಯ ಮೇಲೆ ರಾರಾಜಿಸುತ್ತವೆ.
ಸೆಪ್ಟೆಂಬರ್ ತಿಂಗಳಲ್ಲಿ ಕನ್ನಡಿಗರಿಗೆ ಡಬಲ್ ಧಮಾಕವೇ ಹೌದು ಯಾಕೆಂದರೆ ನಟ ಶಿವರಾಜ್ ಕುಮಾರ್ ಅಭಿನಯದ “ಬೈರತಿ ರಣಗಲ್” ಮತ್ತು ನಟ ಉಪೇಂದ್ರ ನಟಿಸಿ ನಿರ್ದೇಶಿಸಿರುವ “UI” ಸಿನಿಮಾಗಳು ಇದೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಕನಿಷ್ಠ 15 ದಿನಗಳ ಅಂತರದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಲಿದ್ದು ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಎರಡು ಸಿನಿಮಾಗಳ ಬಗ್ಗೆ ಚಂದನವನದಲ್ಲಿ ಸಾಕಷ್ಟು ನಿರೀಕ್ಷೆ ಇದ್ದು ಬಾಕ್ಸ್ ಆಫೀಸ್ ಅನ್ನು ಧೂಳೆಬ್ಬಿಸುವ ಎಲ್ಲಾ ನಿರೀಕ್ಷೆಗಳು ಕಾಣುತ್ತಿದೆ.
ಕರ್ನಾಟಕ ಅಷ್ಟೇ ಅಲ್ಲದೆ ದೇಶದಾದ್ಯಂತ ಉಪೇಂದ್ರ ಅವರ ನಿರ್ದೇಶನದ ಸಿನಿಮಾಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಬಾರಿ ನಿರೀಕ್ಷೆಯನ್ನೇ ಹುಟ್ಟು ಹಾಕಿದೆ. ನಿರ್ದೇಶನದ ಜೊತೆಗೆ ನಟನಾಗಿ ಉಪೇಂದ್ರ ಅವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಸೆಪ್ಟೆಂಬರ್ 9ರಂದು ಚಿತ್ರವನ್ನು ತೆರೆಮೇಲೆ ತರುವ ಪ್ರಯತ್ನ ನಡೆದಿದೆ.
ಅಭಿನಯ ಚಕ್ರವರ್ತಿ ಶಿವರಾಜ್ ಕುಮಾರ್ ನಟನೆಯ ಬೈರತಿ ರಣಗಲ್ ಸಿನಿಮಾವು ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿದೆ. ಮಫ್ತಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು ಮತ್ತು ಬೈರತಿ ರಣಗಲ್ ಪಾತ್ರಕ್ಕೆ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದರು.ನರ್ತನ್ ನಿರ್ದೇಶನದ ಈ ಚಿತ್ರ ಆಗಸ್ಟ್ 15ರಂದು ತೆರೆಮೇಲೆ ಬರಲಿದೆ ಎಂದು ಹೇಳಲಾಗಿತ್ತು. ಇತ್ತೀಚೆಗೆ ರಿಲೀಸ್ ಆದ ಟೀಸರ್ನಲ್ಲಿ ಸಿನಿಮಾನ ಸೆಪ್ಟೆಂಬರ್ನಲ್ಲಿ ರಿಲೀಸ್ ಮಾಡೋದಾಗಿ ಮಾಹಿತಿ ನೀಡಿದ್ದಾರೆ.
ಒಂದೇ ತಿಂಗಳಿನಲ್ಲಿ ಕನ್ನಡದ ಖ್ಯಾತ ನಟರ ಎರಡು ಸಿನಿಮಾಗಳು ರಿಲೀಸ್ ಆಗುವುದರಿಂದ ಸಿನಿಪ್ರಿಯರಿಗೆ ಸೆಪ್ಟೆಂಬರ್ ತಿಂಗಳು ಡಬಲ್ ಧಮಾಕವನ್ನು ನೀಡಲಿದೆ.