Bheema Movie: ದುನಿಯಾ ವಿಜಯ್ ನಟಸಿ ನಿರ್ದೇಶನ ಭೀಮ ಸಿನಿಮಾ ಇಂದು (ಆಗಸ್ಟ್ 9) ರಂದು ರಿಲೀಸ್ ಆಗಲಿದೆ. ಸುಮಾರು 400 ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. ಹೆಚ್ಚು ಕಡಿಮೆ ಬಂದ್ ಆಗಿರೋ 18 ರಿಂದ 20 ಥಿಯೇಟರ್ ಭೀಮನಿಗಾಗಿಯೇ ರೀ-ಓಪನ್ ಆಗುತ್ತಿವೆ. ಇದರ ಜೊತೆಗೆ ಈ ಸಿನಿಮಾ ಆಲ್ ಏರಿಯಾ ಸೋಲ್ಡ್ ಔಟ್ ಆಗಿದೆ. ಅಂದ್ರೆ, ಈ ಚಿತ್ರಕ್ಕೆ ಭಾರೀ ಬೇಡಿಕೆ ಇದೆ ಅನ್ನೋದೇ ಒಟ್ಟು ಅರ್ಥ ಅಂತಲೂ ಹೇಳಬಹುದು.
‘ಭೀಮ’ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸಾರ್ಥಕ್ ಈ ಸಿನಿಮಾಗೆ ಬಂಡವಾಳ ಹೂಡಿಸಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸೆಸ್‌ನಲ್ಲಿರುವ ವಿಜಿ ‘ಭೀಮ’ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಇಂದು ದುನಿಯಾ ವಿಜಯ್ ನಟನೆ, ಮತ್ತು ನಿರ್ದೇಶನದ “ಭೀಮ” ಚಿತ್ರ ರಿಲೀಸ್
‘ಭೀಮ’ ಪಕ್ಕಾ ಮಾಸ್ ಸಿನಿಮಾ. ಈ ಚಿತ್ರ ಆಗಸ್ಟ್ 9ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಇದೆ. ಇದು ಕೂಡ ರೌಡಿಸಂ ಸಿನಿಮಾ. ಇದರಲ್ಲಿ ಅಗಾಧವಾಗಿ ರಕ್ತ, ಮಚ್ಚು-ಲಾಂಗ್, ಅವಾಚ್ಯ ಶಬ್ದಗಳ ಬಳಕೆ ಆಗಿದೆ. ಈ ಕಾರಣಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗಿದೆ.
ಇದು ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾ. ಅವರ ನಿರ್ದೇಶನದ ಮೊದಲ ಸಿನಿಮಾ ‘ಸಲಗ’ ಸೂಪರ್ ಹಿಟ್ ಎನಿಸಿಕೊಂಡಿತು. ಈ ಚಿತ್ರದಿಂದ ಅವರು ಭರ್ಜರಿ ಯಶಸ್ಸು ಕಂಡರು. ಈಗ ಅವರು ಮತ್ತೊಂದು ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರೌಡಿಸಂ ಇಷ್ಟಪಡೋರಿಗೆ ಈ ಸಿನಿಮಾ ಇಷ್ಟ ಆಗಲಿದೆ. ಇದರ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಕಥೆಯೂ ಚಿತ್ರದಲ್ಲಿ ಇದೆ.
ಭೀಮ ಸಿನಿಮಾ ಪರ ಭಾಷೆಗೆ ಡಬ್ ಆಗೋದಿಲ್ಲ. ನೇರವಾಗಿಯೇ ಕನ್ನಡದಲ್ಲಿ ಎಲ್ಲೆಡೆ ರಿಲೀಸ್ ಆಗುತ್ತಿದೆ. ಸಿನಿಮಾವನ್ನು ಕರ್ನಾಟಕ ಅಲ್ಲದೇ, ಹೊರ ದೇಶದಲ್ಲೂ ರಿಲೀಸ್ ಮಾಡೋಕೆ ಪ್ಲಾನ್ ಆಗಿದೆ. ಕರ್ನಾಟಕದಲ್ಲಿ ಕೆ.ಆರ್.ಜಿ ಸಂಸ್ಥೆ ಭೀಮ ಚಿತ್ರವನ್ನ ವಿತರಿಸುತ್ತಿದೆ.
ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಿ ಕಾಕ್ರೋಚ್, ಕಲ್ಯಾಣಿ, ಅಶ್ವಿನಿ ಮತ್ತು ಪ್ರಿಯಾ ಶಠಮರ್ಷಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ,ಮಾಸ್ತಿ ಡೈಲಾಗ್ಸ್ ಚಿತ್ರಕ್ಕಿದೆ. ದೀಪು ಎಸ್ ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ, ಧನು ನೃತ್ಯ ಭೀಮ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಪ್ರೇಕ್ಷಕರು ಯಾವ ಅಭಿಪ್ರಾಯವನ್ನು ನೀಡುತ್ತಾರೆಂದು ಕಾದು ನೋಡಬೇಕಾಗಿದೆ.