ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಜುಲೈ ತಿಂಗಳು ಮುಕ್ತಾಯವಾಗುತ್ತ ಬಂದಿದ್ದು, ಆಗಸ್ಟ್ ತಿಂಗಳ ಬ್ಯಾಂಕ್ ಹಾಲಿಡೇ ಲಿಸ್ಟ್ ಅನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಆಗಸ್ಟ್ ವಾರದ ರಜೆಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಕಾರ್ಯನಿರ್ವಹಿಸೋದಿಲ್ಲ.
ಆಗಸ್ಟ್ 2024 ರಲ್ಲಿ, ರಕ್ಷಾಬಂಧನ, ಜನ್ಮಾಷ್ಟಮಿ ಮತ್ತು ಸ್ವಾತಂತ್ರ್ಯ ದಿನದಂದು ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಹೀಗಾಗಿ ಬ್ಯಾಂಕ್‌ಗೆ ಸಂಬಂಧಿತ ಕೆಲಸವನ್ನು ಪೂರ್ಣಗೊಳಿಸಲು ಸರಿಯಾದ ದಿನ ಬ್ಯಾಂಕಿಗೆ ಹೋಗಬೇಕಾದರೆ ಯಾವ ದಿನಗಳಲ್ಲಿ ಬ್ಯಾಂಕ್ ತೆರೆದಿರುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುವುದು ಅವಶ್ಯಕ.
ಆಗಸ್ಟ್ 2024ರ ಬ್ಯಾಂಕ್ ರಜಾದಿನಗಳ ವಿವರ:
ಈ ತಿಂಗಳು ರಕ್ಷಾಬಂಧನ ಮತ್ತು ಜನ್ಮಾಷ್ಟಮಿಯಂತಹ ದೊಡ್ಡ ಹಬ್ಬಗಳು ಆಗಸ್ಟ್ ನಲ್ಲಿ ಬರಲಿವೆ. ಇದಲ್ಲದೆ, ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಹ ಆಚರಿಸಲಾಗುವುದು. ರಕ್ಷಾಬಂಧನ, ಜನ್ಮಾಷ್ಟಮಿ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದಲ್ಲದೆ, ದೇಶಾದ್ಯಂತ 4 ಭಾನುವಾರ ಮತ್ತು 2 ಶನಿವಾರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದಲ್ಲದೆ, ವಿವಿಧ ರಾಜ್ಯಗಳಲ್ಲಿ ಬರುವ ಹಬ್ಬಗಳಂದು ರಜಾದಿನವೂ ಇರುತ್ತದೆ.
- ಆಗಸ್ಟ್ 4 – ಭಾನುವಾರ – ರಾಷ್ಟ್ರೀಯ ರಜಾದಿನ
- ಆಗಸ್ಟ್ 10 – ಎರಡನೇ ಶನಿವಾರ – ರಾಷ್ಟ್ರೀಯ ರಜಾದಿನ
- ಆಗಸ್ಟ್ 11 – ಭಾನುವಾರ – ರಾಷ್ಟ್ರೀಯ ರಜಾದಿನ
- ಆಗಸ್ಟ್ 13: ಇಂಫಾಲ್‌ನಲ್ಲಿ ದೇಶಭಕ್ತ ದಿನ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.
- ಆಗಸ್ಟ್ 15 – ಸ್ವಾತಂತ್ರ್ಯ ದಿನ / ರಾಷ್ಟ್ರೀಯ ರಜಾದಿನ
- ಆಗಸ್ಟ್ 18 – ಭಾನುವಾರ – ರಾಷ್ಟ್ರೀಯ ರಜಾದಿನ
- ಆಗಸ್ಟ್ 19 – ರಾಖಿ – ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ರಜಾದಿನ
- ಆಗಸ್ಟ್ 20 – ಶ್ರೀ ನಾರಾಯಣ ಗುರು ಜಯಂತಿ – ಕೊಚ್ಚಿ ಮತ್ತು ತಿರುವನಂತಪುರಂ ಮುಚ್ಚಲ್ಪಡುತ್ತವೆ
- ಆಗಸ್ಟ್ 24 – ನಾಲ್ಕನೇ ಶನಿವಾರ – ರಾಷ್ಟ್ರೀಯ ರಜಾದಿನ
- ಆಗಸ್ಟ್ 25 – ಭಾನುವಾರ – ರಾಷ್ಟ್ರೀಯ ರಜಾದಿನ
- ಆಗಸ್ಟ್ 26 – ಕೃಷ್ಣ ಜನ್ಮಾಷ್ಟಮಿ – ಕರ್ನಾಟಕವೂ ಸೇರಿ ಹೆಚ್ಚಿನ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜಾದಿನ
ಈ ರಜೆಗಳ ದಿನಗಳಂದು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಆನ್‌ಲೈನ್ ಮೂಲಕ ಮಾಡಿಕೊಳ್ಳಬಹುದು. ಬ್ಯಾಂಕ್ ರಜೆಯಲ್ಲಿದ್ದರೂ ಎಟಿಎಂ ಸೇವೆ ಗ್ರಾಹಕರಿಗೆ ತೆರೆದಿರುತ್ತದೆ. ಡೆಬಿಟ್ ಕಾರ್ಡ್ ಸಹಾಯದಿಂದ ಎಟಿಎಂ ಮೂಲಕ ಹಣ ಹಿಂಪಡೆದುಕೊಳ್ಳಬಹುದಾಗಿದೆ.