Rape Case: ಯುವತಿಯೊಬ್ಬಳು ತನಗೆ ಸಾಫ್ಟ್‌ವೇರ್ ಕೆಲಸ ಸಿಕ್ಕಿದೆ ಎಂದು ತನ್ನ ಬಾಲ್ಯದ ಗೆಳೆಯನಿಗೆ ತಿಳಿಸಿದ್ದಾಳೆ. ಆಗ ಪಾರ್ಟಿ ಕೇಳಿದ ಗೆಳಯನಿಗೆ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಎಣ್ಣೆ ಪಾರ್ಟಿ ಕೊಡಿಸುತ್ತೇನೆ ಎಂದು ಖುಷಿಯಲ್ಲಿ ಪಾರ್ಟಿ ಕೊಡಿಸಿದ್ದಾಳೆ. ಆದರೆ, ಯುವತಿಯ ಬಾಲ್ಯದ ಗೆಳೆಯ ತನ್ನ ಇನ್ನೊಬ್ಬ ಸ್ನೇಹಿತನನ್ನು ಕರೆದುಕೊಂಡು ಬಂದು ಕಂಠಪೂರ್ತಿ ಕುಡಿದು ಪಾರ್ಟಿ ಕೊಡಿಸಿದ ಗೆಳತಿಯನ್ನೇ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ್ದಾರೆ.
ಹೈದರಾಬಾದ್‌ನ ವನಸ್ಥಲಿಪುರಂನಲ್ಲಿರುವ ಬಾರ್‌ಲ್ಲಿ ಈ ಘಟನೆ ನಡೆದಿದ್ದು, ಯುವತಿಯ ಬಾಲ್ಯದ ಸ್ನೇಹಿತ ಗೌತಮ್ ರೆಡ್ಡಿ ಮತ್ತು ಆತನ ಸಾಮಾನ್ಯ ಸ್ನೇಹಿತ ಇಬ್ಬರೂ ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಯುವತಿಗೆ ಕೆಲಸ ಸಿಕ್ಕಿದ ಖುಷಿಯಲ್ಲಿ ಪಾರ್ಟಿ ಕೊಡಿಸುವುದಾಗಿ ಸ್ನೇಹಿತ ಗೌತಮ್ ರೆಡ್ಡಿಗೆ ಹೇಳಿದ್ದಾಳೆ. ಎಣ್ಣೆ ಪಾರ್ಟಿ ಕೊಡಿಸಲು ಬಾಲ್ಯದ ಗೆಳೆಯ ಕೇಳಿದ್ದಾನೆ ಇದಕ್ಕೊಪ್ಪಿದ ಗೆಳತಿ ಆತ ಹೇಳಿದ ಫ್ಯಾಮಿಲಿ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಕೊಡಿಸುವುದಾಗಿ ಹೇಳಿದ್ದಾಳೆ. ಪಾರ್ಟಿಗೆ ಬರುವಾಗ ಸ್ನೇಹ ಗೌತಮ್ ರೆಡ್ಡಿ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಬಾರ್ ಅಂಡ್ ರೆಸ್ಟೋರೆಂಟ್ ಕಂಠ ಪೂರ್ತಿ ಕುಡಿದಿದ್ದಾರೆ. ತದನಂತರ ಇವತ್ತಿನ್ನು ಬಲವಂತವಾಗಿ ಎಳೆದುಕೊಂಡು ರೆಸ್ಟೋರೆಂಟ್ ನ ರೂಮ್ ಒಂದರಲ್ಲಿ ಅತ್ಯಾಚಾರ ಮಾಡಿದ್ದಾರೆ.
ಘಟನೆಯಾದ ಬಳಿಕ ಯುವತಿಯು ಹೈದರಾಬಾದ್‌ನ ವನಸ್ಥಲಿಪುರಂನಲ್ಲಿರುವ ಪೊಲೀಸ್ ಠಾಣೆಗೆ ಸ್ನೇಹಿತರ ವಿರುದ್ಧ ದೂರು ನೀಡಿದ್ದಾಳೆ.