Suicide in Bengaluru: ಬೆಂಗಳೂರಿನ ನಮ್ಮ ಮೆಟ್ರೋ ಟ್ರ್ಯಾಕ್ ಗೆ ಭಾರಿ ಸುಮಾರು 35 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಮೆಟ್ರೋ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿಯು ಟ್ರ್ಯಾಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಮೆಟ್ರೋಲ್ ರೈಲಿನ ಅಡಿಯಲ್ಲಿಯೇ ಮೃತದೇಹ ಸಿಲುಕಿಕೊಂಡಿದ್ದು, ಹೂರ ತೆಗೆಯುವ ಕೆಲಸ ನಡೆಯುತ್ತಿದೆ. ವ್ಯಕ್ತಿಯ ಆತ್ಮಹತ್ಯೆಗೆ ಇನ್ನು ಕಾರಣ ಯಾವುದು ಎಂದು ಇನ್ನೂ ಪತ್ತೆಯಾಗಿಲ್ಲ.
ಘಟನೆ ನಡೆದ ಕೆಲ ಕಾಲ ಮೆಟ್ರೋ ಸಂಚಾರದಲ್ಲಿ ಕೆಲ ಕಾಲ ಸ್ಥಗಿತ ಉಂಟಾಗಿದೆ. ಘಟನೆ ನಡೆದ ಬಳಿಕ ಕೋಣನಕುಂಟೆ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮೆಟ್ರೋ ಟ್ರ್ಯಾಕ್ ಗೆ ಜಂಪ್ ಮಾಡಿದ ಕೆಲಸ ಸೆಕೆಂಡ್ ಗಳಲ್ಲಿ ಪವರ್ ಕಟ್ ಆಗಿರುವ ಕಾರಣ ಮೆಟ್ರೋ ರೈಲು ಸ್ಥಳದಲ್ಲಿ ಸ್ಥಗಿತಗೊಂಡಿದೆ.